ಜಯಾ, ಸಲ್ಮಾನ್ ಖುಲಾಸೆ: ದಾವೂದ್ ಇಬ್ರಾಹಿಂ ಘರ್ ವಾಪ್ಸಿ!
ನವದೆಹಲಿ, ಮೇ 11: ಮುಂಬೈ ಬಾಂಬ್ (1993) ಸ್ಪೋಟದ ರೂವಾರಿ, ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಇದ್ದಾನೆ, ಅವನನ್ನು ಭಾರತಕ್ಕೆ ಕರೆತರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಸೋಮವಾರ (ಮೇ 11) ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಪಾಕಿಸ್ತಾನದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಕರೆತರುವ ತನಕ ಸರಕಾರ ವಿಶ್ರಮಿಸುವುದಿಲ್ಲ ಎಂದು ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ಹೇಳಿದ್ದಾರೆ.
ಗೃಹ ಇಲಾಖೆಯ ಸಹಾಯಕ ಸಚಿವ ಹರಿಭಾಯಿ ಚೌಧುರಿ, ದಾವೂದ್ ಎಲ್ಲಿದ್ದಾನೆಂದು ಗೊತ್ತಿಲ್ಲ ಎಂದು ಲೋಕಸಭೆಯಲ್ಲಿ ಹೋದವಾರ ಹೇಳಿಕೆ ನೀಡಿದ್ದರು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ರಾಜನಾಥ್ ಸಿಂಗ್ ಈ ಹೇಳಿಕೆಯನ್ನು ನೀಡಿದ್ದಾರೆ. (ಜಯಾ ತೀರ್ಪಿಗೆ ಟ್ವೀಟೋತ್ತರ)
ದಾವೂದ್ ಇಬ್ರಾಹಿಂ ಬಗ್ಗೆ ರಾಜನಾಥ್ ಸಿಂಗ್ ನೀಡಿರುವ ಹೇಳಿಕೆಗೂ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಖುಲಾಸೆಯಾಗಿರುವುದಕ್ಕೂ ಹೋಲಿಸಿಕೊಂಡು ಟ್ವಿಟರ್ ನಲ್ಲಿ ಭಾರೀ ಅಣಕವಾಡುವ ಟ್ವೀಟ್ ಗಳು ಹರಿದಾಡುತ್ತಿವೆ.
ದಾವೂದ್ ಇಬ್ರಾಹಿಂ 'ಘರ್ ವಾಪ್ಸಿ' ಕಾರ್ಯಕ್ರಮದಡಿ ಭಾರತಕ್ಕೆ ವಾಪಸ್ ಬರಬಹುದು. ಮೊದಲು ನ್ಯಾಯಾಲಯಕ್ಕೆ ಶರಣಾಗುವುದು, ನಂತರ ಬೇಲ್ ಪಡೆದುಕೊಳ್ಳುವುದು, ಅದಾದ ಮೇಲೆ ತನ್ನ ಮೇಲಿನ ಎಲ್ಲಾ ಕೇಸಿಗಳಿಂದ ಖುಲಾಸೆಯಾಗಬಹುದು ಎಂದು ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಯ ಬಗ್ಗೆ ವ್ಯಂಗ್ಯ ಟ್ವೀಟ್ ಗಳು ಹರಿದಾಡುತ್ತಿವೆ. (ಅಕ್ರಮ ಆಸ್ತಿ ಪ್ರಕರಣ: ಜಯಲಲಿತಾ ನಿರ್ದೋಷಿ)
ಕೆಲವೊಂದು ಸ್ಯಾಂಪಲ್ tweet ಸ್ಲೈಡಿನಲ್ಲಿ...
|
ದಾವೂದ್ ನನ್ನು ವಾಪಸ್ ಕರೆತನ್ನಿ
ದಾವೂದ್ ನನ್ನು ಭಾರತಕ್ಕೆ ವಾಪಸ್ ಕರೆತನ್ನಿ. ಅವನು ಸಮಾಜಸೇವೆಯಲ್ಲಿ ತೊಡಗಿ, ಬೇಲ್ ಪಡೆದು ಓಡಾಡಿಕೊಂಡು ಇರಲಿ.
|
ದೇಶದ ಕಾನೂನಿನ ಬಗ್ಗೆ ದಾವೂದ್
ಜಯಾ ಮತ್ತು ಸಲ್ಮಾನ್ ನಿರ್ದೋಷಿ ಎಂದು ಸಾಬೀತಾದ ಮೇಲೆ ದಾವೂದ್ ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ.

ರಾಜನಾಥ್ ಸಿಂಗ್ ಹೇಳಿಕೆಯ ನಂತರ
ಗೃಹ ಸಚಿವರ ಹೇಳಿಕೆಯ ನಂತರ ದಾವೂದ್ ಇಬ್ರಾಹಿಂ, 'ಡಾನ್ ಕೊ ಪಕಡ್ನಾ ಮುಸ್ಕಿಲ್ ಹೀ ನಹೀ, ನಾ ಮುನ್ಕಿನ್ ಹೇ' ಎಂದು ಹೇಳಬಹುದು.
|
ಜಯಾ ತೀರ್ಪು
ಜಯಲಲಿತಾ ತೀರ್ಪನ್ನು ದಾವೂದ್ ಇಬ್ರಾಹಿಂ ವೀಕ್ಷಿಸುತ್ತಿದ್ದಾರೆ. ನಮ್ಮ ನ್ಯಾಯಾಂಗ ವ್ಯವಸ್ಥೆ ಬೆಸ್ಟ್
|
ಭಾರತದಲ್ಲೇ ಸಾವು
ದಾವೂದ್ ಇಬ್ರಾಹಿಂ ತನ್ನ ಅಂತಿಮ ಸಂಸ್ಕಾರವನ್ನು ಭಾರತದಲ್ಲೇ ನಡೆಸಲು ರಾಜನಾಥ್ ಸಿಂಗ್ ಬಳಿ ಮನವಿ.
|
ಕಾನ್ಫಿಡೆಂಟ್ ದಾವೂದ್
ಭಾರತದ ನ್ಯಾಯಾಲಯದ ಕೆಟ್ಟ ತೀರ್ಪಿನ ನಂತರ ದಾವೂದ್ ಇಬ್ರಾಹಿಂ ಭಾರತಕ್ಕೆ ವಾಪಸ್ ಬರಲು ಕಾನ್ಫಿಡೆಂಟ್ ಆಗಿದ್ದಾರೆ.
|
ಇಷ್ಟು ವರ್ಷದಿಂದ ದಾವೂದ್ ಫೊಟೋ ಸಿಗಲಿಲ್ಲ
ಇಷ್ಟು ವರ್ಷದಿಂದ ದಾವೂದ್ ಇಬ್ರಾಹಿಂ ಫೋಟೋ ಸಿಗಲಿಲ್ಲ, ಈಗ ಹೇಗೆ ಅವನನ್ನು ಹಿಡಿಯುತ್ತೀರಿ.












Click it and Unblock the Notifications