"ದಾವೂದ್ ಎಲ್ಲೇ ಇರಲಿ ಅವನನ್ನು ಹಿಡಿದು ಕಟಕಟೆ ಏರಿಸ್ತೇವೆ"
ನವದೆಹಲಿ, ಜ.9: 1993ರ ಮುಂಬೈ ಸರಣಿ ಸ್ಫೋಟದ ರುವಾರಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಶ್ವದ ಯಾವುದೇ ಮೂಲೆಯಲ್ಲಿ ಬಚ್ಚಿಟ್ಟುಕೊಂಡಿರಲಿ ಅವನನ್ನು ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸುತ್ತೇವೆ ಎಂದು ವಿದೇಶಾಂಗ ಖಾತೆ ವಕ್ತಾರ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ
ಪಾತಕಿ ದಾವೂದ್ ವಿಷಯದಲ್ಲಿ ನಮ್ಮ ನಿಲುವು ಅಚಲ ಎಂದು ಸ್ಪಷ್ಟಪಡಿಸಿದೆ. ಹಂತಕ ದಾವೂದ್ ಏನು ಮಾಡಿದ್ದ ಎಂಬುದು ನಮಗೆ ಚೆನ್ನಾಗಿ ನೆನಪಿದೆ. ನಾವು ಎಂದಿಗೂ ಮುಂಬೈ ದುರಂತವನ್ನು ಮರೆಯಲು ಸಾಧ್ಯವಿಲ್ಲ. ಅವನು ಇಂದು ನ್ಯಾಯದ ಕಣ್ಣಿಗೆ ಮಣ್ಣೆರಚಿ ತಲೆ ತಪ್ಪಿಸಿಕೊಂಡಿರಬಹುದು. [ಪುಢಾರಿಗಳ ಜೊತೆ 'ಡಿ' ಗ್ಯಾಂಗ್ ಲಿಂಕ್ ಲೀಕ್]
ಅದರೆ, ಆತನನ್ನು ಕೋರ್ಟಿಗೆ ಹಾಜರುಪಡಿಸಲು ನಾವು ಬದ್ಧರಾಗಿದ್ದೇವೆ ಎಂದು ದೇಶಾಂಗ ಖಾತೆ ಸಚಿವಾಲಯದ ವಕ್ತಾರ ಸಯ್ಯದ್ ಅಕ್ಬರುದ್ದೀನ್ ಹೇಳಿದ್ದಾರೆ.

ಆದರೆ ಅವನ ಕುರಿತಾದ ನಮ್ಮ ನಿಲುವು, ಬದ್ಧತೆಗಳು ಮಾತ್ರ ಒಂದಿಷ್ಟೂ ಬದಲಾಗಿಲ್ಲ. ಅವನು ಎಲ್ಲೇ ಅಡಗಿದ್ದರೂ ಒಂದು ದಿನ ಅವನನ್ನು ಕಟಕಟೆಗೆ ತರುವುದು ನಿಶ್ಚಿತ. ಮುಂಬೈ ಸರಣಿ ಸ್ಫೋಟದ ಮಾಸ್ಟರ್‌ಮೈಂಡ್ ಮತ್ತು ಪಾತಕಿ ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ ಎಂಬುದಕ್ಕೆ ಇತ್ತೀಚೆಗೆ ಸಾಕ್ಷಿಯಾದ ಆಡಿಯೋ/ ವಿಡಿಯೋ ದೃಶ್ಯವೊಂದನ್ನು ಕುರಿತು ಕೇಳಲಾದ ಪ್ರಶ್ನೆಗೆ ಅಕ್ಬರುದ್ದೀನ್ ಈ ಹೇಳಿಕೆ ನೀಡಿದ್ದಾರೆ.
ಇರಾಕ್‌ನಲ್ಲಿ ಇಸ್ಲಾಮಿಕ್ ಉಗ್ರರ ಹಿಡಿತದಲ್ಲಿ ಇನ್ನೂ ಕೂಡ ಸಿಲುಕಿ ಹಾಕಿಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಅಲ್ಲಿರುವ ಭಾರತೀಯರ ಬಗ್ಗೆ ಸೂಕ್ತ ಮಾಹಿತಿಗಳು ಲಭ್ಯವಿಲ್ಲದ ಕಾರಣ ಅದು ತೊಡಕಾಗಿ ಪರಿಣಮಿಸಿದೆ ಎಂದು ಅಕ್ಬರುದ್ದೀನ್ ಹೇಳಿದ್ದಾರೆ.(ಪಿಟಿಐ)












Click it and Unblock the Notifications