ಮಗಳ ಮೇಲೆ ಚಿನ್ನಾಭರಣ ಹೇರಿದ ಶಾಸಕಿ ಇನ್ ಟ್ರಬಲ್

ಕೇರಳದ ಸಿಪಿಐ ಶಾಸಕಿ ಗೀತಾ ಗೋಪಿ ಅವರ ಮಗಳ ಮದುವೆ ಫೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ತಿರುವನಂತಪುರಂ, ಜೂನ್ 07: ಕೇರಳದ ಸಿಪಿಐ ಶಾಸಕಿ ಗೀತಾ ಗೋಪಿ ಅವರ ಮಗಳ ಮದುವೆ ಫೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಶಾಸಕಿ ಗೀತಾ ಗೋಪಿಯವರ ಮಗಳು ಮೈಮೇಲೆ ಹೇರಿದ್ದ ಬಂಗಾರದ ಒಡವೆಗಳನ್ನು ಕಂಡ ಪಕ್ಷದ ವರಿಷ್ಠರು ಕಂಗೆಣ್ಣು ಬೀರಿದ್ದಾರೆ.

ತ್ರಿಸ್ಸೂರಿನಿಂದ ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಗೀತಾ ಅವರು ಸಂಪ್ರದಾಯದ ಹೆಸರಿನಲ್ಲಿ ಆಡಂಬರದ ಮದುವೆ ಮಾಡಿದ್ದಾರೆ ಎಂದು ವಿಪಕ್ಷಗಳು ಕಿಡಿಕಾರಿವೆ. ಅದಕ್ಕಿಂತ ಹೆಚ್ಚಾಗಿ ಸಿಪಿಐ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ.

Daughter's extravagant wedding lands Kerala CPI leader Geetha Gopi in trouble

ಕೇರಳ ಕೃಷಿ ಸಚಿವ ಎಂ ರತ್ನಾಕರನ್ ಕಳೆದ ಏಪ್ರಿಲ್‌ನಲ್ಲಿ ಆಡಂಬರದ ಮದುವೆಗಳನ್ನು ತಡೆಯಬೇಕೆಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿ, ಅಸೆಂಬ್ಲಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ.

ಭಾನುವಾರದಂದು ಗುರುವಾಯೂರಿನ ಶ್ರೀಕೃಷ್ಣ ದೇಗುಲದಲ್ಲಿ ನಡೆದ ಮದುವೆ ಸಮಾರಂಭ ನಡೆಯಿತು. ವಧುವಿನ ಮೈಮೇಲೆ ಹಾರ, ನೆಕ್ಲೇಸ್, ಕೈಗಳಿಗೆ ಚಿನ್ನದ ಬಳೆ ಸೇರಿದಂತೆ ಚಿನ್ನದ ಆಭರಣದಲ್ಲಿ ಕಂಗೊಳಿಸುವುದು ಎದ್ದು ಕಾಣಿಸುತ್ತಿತ್ತು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಗೀತಾ, 50 ಸವರನ್ ಚಿನ್ನ ಹಾಕಲಾಗಿದೆ. ಮಿಕ್ಕಿದ್ದೆಲ್ಲ ಗಿಫ್ಟ್ ಆಗಿ ಬಂದಿದ್ದು, ಸಂಪ್ರದಾಯವಾಗಿ ನೀಡಬೇಕಾದ ಚಿನ್ನದ ಆಭರಣ ಅಷ್ಟೇ ವಧುವಿನ ಮೈಮೇಲೆ ಇತ್ತು ಎಂದಿದ್ದಾರೆ.

ಆದರೆ, ಕಮ್ಯೂನಿಸ್ಟ್ ಪಕ್ಷ ಹೇಳುವುದು ಒಂದು ಮಾಡುವುದು ಇನ್ನೊಂದು ಎಂದು ಅಂತರ್ಜಾಲದಲ್ಲಿ ಮಾನ ಕಳೆಯಲಾಗುತ್ತಿದೆ. ಇತ್ತೀಚೆಗೆ ರಾಜ್ಯಸಭಾ ಸದಸ್ಯ ರಿತಬ್ರತಾ ಬ್ಯಾನರ್ಜಿ ಅವರು ಐಷಾರಾಮಿ ಜೀವನಶೈಲಿ ಹೊಂದಿದ್ದಾರೆ ಎಂಬ ಕಾರಣಕ್ಕೆ ಪಕ್ಷದಿಂದ ಅಮಾನತು ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+