ಒಡಿಶಾದಿಂದ ಕೇವಲ 80 ಕಿ.ಮೀ ದೂರದಲ್ಲಿ 'ಫೋನಿ' ಚಂಡಮಾರುತ

Recommended Video

      ಒಡಿಶಾಗೆ ಅಪ್ಪಳಿಸಿದ ಫ್ಯಾನಿ ಚಂಡಮಾರುತ | ಇದು ರಾಜ್ಯದ ಮೇಲೂ ಪರಿಣಾಮ ಬೀರುವುದೇ?

      ಪುರಿ, ಮೇ 3: ಫೋನಿ ಚಂಡಮಾರುತವು ಒಡಿಶಾದ ಪುರಿಯಿಂದ ಕೇವಲ 65ಕಿ.ಮೀ ಒಡಿಶಾದಿಂದ 80 ಕಿ.ಮೀ ದೂರದಲ್ಲಿದೆ.. ಬೆಳಗ್ಗೆ 9.30ರ ಸುಮಾರಿಗೆ ಒಡಿಶಾ ಪ್ರವೇಶಿಸುವ ಸಾದ್ಯತೆ ಇದೆ.

      ಮುಂಜಾಗ್ರತಾ ಕ್ರಮವಾಗಿ ಭುವನೇಶ್ವರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.

      ಫ್ಯಾನಿ ಚಂಡಮಾರುತ ತೀವ್ರವಾಗಿರುವ ಕಾರಣ ಒಡಿಶಾದ 15 ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.

      ಇಲ್ಲಿಯವರೆಗೂ 8 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಕರಾವಳಿ ಪ್ರದೇಶದ ಸುತ್ತ ಮುತ್ತಲಿನ ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಕೂಡ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

      ಚಂಡಮಾರುತದಿಂದ ಬಾಧಿತವಾಗಿರುವ ಜನರಿಗೆ ಆಹಾರ ಒದಗಿಸಲು ಒಂದು ಲಕ್ಷ ಆಹಾರ ಪೊಟ್ಟಣಗಳನ್ನೂ ಸಿದ್ಧಪಡಿಸಲಾಗಿದೆ.

      Cyclone Currently At 65 km From Gopalpur And 80 km From Puri

      ಚಂಡಮಾರುತದಿಂದ ಉಂಟಾಗಬಹುದಾದ ಅನಾಹುತಗಳಲ್ಲಿ ಸಿಲುಕಿಕೊಂಡ ಜನರ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ನೌಕಾಪಡೆಗಳು ಹಡಗು ಮತ್ತು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿವೆ.

      ಚಂಡಮಾರುತದಿಂದಾಗಿ ಒಡಿಶಾದ ಕರಾವಳಿ ಜಿಲ್ಲೆಗಳಾದ ಗಂಜಾಂ, ಗಜಪತಿ, ಖುರ್ದಾ, ಪುರಿ ಮತ್ತು ಜಗತ್‌ಸಿಂಗ್‌ಪುರ್, ಕೇಂದ್ರಪಾದ, ಭದ್ರಾಕ್, ಜಾಜ್‌ಪುರ್ ಹಾಗೂ ಬಾಲಾಸೊರ್‌ಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+