ಭಾರತದ ಅತ್ಯಂತ ಜನಮೆಚ್ಚುಗೆಯ ಮುಖ್ಯಮಂತ್ರಿ ಯಾರು?

ನವದೆಹಲಿ, ಜೂನ್ 2: ಕೊರೊನಾ ವೈರಸ್ ಸೋಂಕು ನಿಯಂತ್ರಿಸಲು ವಿಧಿಸಿರುವ ಲಾಕ್‌ಡೌನ್‌ ಪರಿಸ್ಥಿತಿ ನಡುವೆ ದೇಶದ ಅತ್ಯಂತ ಜನಪ್ರಿಯ ನಾಯಕರು ಯಾರು ಎಂಬುದರ ಬಗ್ಗೆ ಸಿ ವೋಟರ್ ಮೇ ತಿಂಗಳಲ್ಲಿ ನಡೆಸಿದ ಸಮೀಕ್ಷೆ ಫಲಿತಾಂಶ ಬಂದಿದೆ. ಪ್ರಧಾನಿ ಮೋದಿ ಹಾಗೂ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅತ್ಯಂತ ಜನಪ್ರಿಯ, ಜನಮೆಚ್ಚುಗೆಯ ನಾಯಕರೆನಿಸಿಕೊಂಡಿದ್ದಾರೆ.

ಕೊರೊನಾ ವೈರಸ್ ಹಾಗೂ ಲಾಕ್‌ಡೌನ್‌ ಪರಿಸ್ಥಿತಿ ನಿಭಾಯಿಸುವಲ್ಲಿ ಮೋದಿ ವಿಶ್ವದ ಗಮನ ಸೆಳೆದಿದ್ದಾರೆ. ಈ ನಡುವೆ ಸಿ-ವೋಟರ್ 'ಸ್ಟೇಟ್ ಆಫ್ ದಿ ನೇಷನ್-2020' ಎಂಬ ಹೆಸರಿನಲ್ಲಿ ಸಮೀಕ್ಷೆ ನಡೆಸಿದೆ. ಕೇಂದ್ರದಲ್ಲಿ ಮೋದಿ ಆಡಳಿತ ವೈಖರಿ ಹೇಗಿದೆ? ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ಇಬ್ಬರಲ್ಲಿ ಯಾರು ಹೆಚ್ಚು ಜನಪ್ರಿಯರು ಹಾಗೂ ಯಾವ ರಾಜ್ಯ ಸಿಎಂ ಹೆಚ್ಚು ಪರಿಣಾಮಕಾರಿ ಎಂಬ ಹಲವು ಪ್ರಶ್ನೆಗಳಿಗೆ ಸಮೀಕ್ಷೆ ನಡೆಸಲಾಗಿದೆ.

ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ತಲಾ 3000 ಸಾವಿರ ಜನರನ್ನು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಮೋದಿ ಆಡಳಿತವನ್ನು ಶೇಕಡಾ 58.36ರಷ್ಟು ಜನರು ಮೆಚ್ಚಿಕೊಂಡಿದ್ದರೆ, ಶೇಕಡಾ 16.71ರಷ್ಟು ಜನರಿಗೆ ಮೋದಿ ಆಡಳಿತ ಬಗ್ಗೆ ಅಸಮಾಧಾನ ಇದೆ. ಇನ್ನು 24.04ರಷ್ಟು ಕೆಲವು ವಿಚಾರದಲ್ಲಿ ಮಾತ್ರ ಮೋದಿಗೆ ಮೆಚ್ಚುಗೆ ನೀಡಿದ್ದಾರೆ. ಮುಂದೆ ಓದಿ...

ನವೀನ್ ಹಾಗೂ ಭೂಪೇಶ್ ನಡುವೆ ಪೈಪೋಟಿ

ನವೀನ್ ಹಾಗೂ ಭೂಪೇಶ್ ನಡುವೆ ಪೈಪೋಟಿ

ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ನಡುವೆ ತೀವ್ರ ಹಣಾಹಣಿ ಕಂಡು ಬಂದಿದ್ದು, ನವೀನ್ ಅವರು ಶೇ 82. 96 ಮತ ಗಳಿಸಿ ಅಗ್ರಸ್ಥಾನಕ್ಕೇರಿದರೆ, ಭೂಪೇಶ್ ಶೇ 81.06 ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. ಮೂರನೇ ಸ್ಥಾನದಲ್ಲಿ ಕೇರಳದ ಸಿಎಂ ಪಿಣರಾಯಿ ವಿಜಯನ್ ಇದ್ದು ಶೇ 80. 08 ಅಂಕಗಳಿಸಿದ್ದಾರೆ.

ನಾಲ್ಕರಿಂದ 8 ಸ್ಥಾನದಲ್ಲಿ ಯಾರಿದ್ದಾರೆ?

ನಾಲ್ಕರಿಂದ 8 ಸ್ಥಾನದಲ್ಲಿ ಯಾರಿದ್ದಾರೆ?

ನಾಲ್ಕನೇ ಸ್ಥಾನದಲ್ಲಿ ಆಂಧ್ರಪ್ರದೇಶದ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಇದ್ದು, ಶೇ 78.01 ಮಂದಿ ಆಡಳಿತ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 5ನೇ ಸ್ಥಾನದಲ್ಲಿ ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಶೇ 76.52 ಜನರನ್ನು ತಲುಪಿದ್ದಾರೆ. ನಂತರದ ಸ್ಥಾನದಲ್ಲಿ ಶೇ 74.18 ಮತಗಳೊಂದಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, 7ನೇ ಸ್ಥಾನದಲ್ಲಿ ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್ ಶೇ 73. 96 ಅಂಕ ಗಳಿಸಿದ್ದರೆ, ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶೇ 67.21 ಮತ ಗಳಿಸಿ 8ನೇ ಹಾಗೂ ಕೊನೆ ಸ್ಥಾನದಲ್ಲಿದ್ದಾರೆ. ಟಾಪ್ 5 ರಾಜ್ಯಗಳಲ್ಲಿ ಬಿಜೆಪಿಯೇತರ ಆಡಳಿತ ಇರುವುದು ವಿಶೇಷ.

ಕಡಿಮೆ ಜನಪ್ರಿಯತೆ ಹೊಂದಿರುವ ಸಿಎಂಗಳು

ಕಡಿಮೆ ಜನಪ್ರಿಯತೆ ಹೊಂದಿರುವ ಸಿಎಂಗಳು

ಈ ಪಟ್ಟಿಯಲ್ಲಿ ಶೇ 4.47 ತೃಪ್ತಿದಾಯಕ ಎಂದು ಅಂಕ ಪಡೆದಿರುವ ಹರ್ಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಕೊನೆ ಸ್ಥಾನದಲ್ಲಿದ್ದಾರೆ.
* ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಶೇ 17.72 ಗಳಿಸಿ 22ನೇ ಸ್ಥಾನ
* ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರೀಂದರ್ ಸಿಂಗ್ ಶೇ 27.51 ಗಳಿಸಿ 21ನೇ ಸ್ಥಾನ.
* ಬಿಹಾರದ ಸಿಎಂ ನಿತೀಶ್ ಕುಮಾರ್ ಶೇ 30.84 ಮತ ಗಳಿಸಿ 20ನೇ ಸ್ಥಾನ
* ತಮಿಳುನಾಡು ಸಿಎಂ ಪಳನಿಸ್ವಾಮಿ ಶೇ 41.28ಮತ ಗಳಿಸಿ 19ನೇ ಸ್ಥಾನ
* ಗೋವಾ ಸಿಎಂ ಪ್ರಮೋದ್ ಸಾವಂತ್ ಶೇ 42.79 ಮತ ಗಳಿಸಿ 18ನೇ ಸ್ಥಾನ
* ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಶೇ 52 ಮತ ಗಳಿಸಿ 17ನೇ ಸ್ಥಾನ.
* ತೆಲಂಗಾಣದ ಸಿಎಂ ಚಂದ್ರಶೇಖರ ರಾವ್ ಶೇ 54. 22 ಮತ ಗಳಿಸಿ 16ನೇ ಸ್ಥಾನದಲ್ಲಿದ್ದಾರೆ.

ಎನ್ಡಿಎ 2.0ಗೆ ಸಿಕ್ಕಿರುವ ಅಂಕಗಳೆಷ್ಟು

ಎನ್ಡಿಎ 2.0ಗೆ ಸಿಕ್ಕಿರುವ ಅಂಕಗಳೆಷ್ಟು

ಇತ್ತೀಚಿಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವು ಎರಡನೇ ಅವಧಿ ಆಡಳಿತ ಆರಂಭಿಸಿದ ವಾರ್ಷಿಕೋತ್ಸವನ್ನು ಆಚರಿಸಿತು. ಇದರ ನಡುವೆ ಸಿ-ವೋಟರ್ ನಡೆಸಿದ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ಶೇ.65.69ರಷ್ಟು ಜನರು ಉತ್ತಮವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಪೈಕಿ ಒಡಿಶಾ ರಾಜ್ಯದಲ್ಲಿ ಮೋದಿ ಆಡಳಿತವನ್ನು ಶೇ.95.6ರಷ್ಟು ಜನರು ಮೆಚ್ಚಿಕೊಂಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಶೇ.93.95 ಹಾಗೂ ಛತ್ತೀಸ್ ಗಢದಲ್ಲಿ ಶೇ.92.73ರಷ್ಟು ಜನರು ಪ್ರಧಾನಿ ಆಡಳಿತಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+