ಪಂಚರಾಜ್ಯಗಳ ಚುನಾವಣೆ: ಹೊರಬಿದ್ದ ಮತ್ತೊಂದು ಸಮೀಕ್ಷೆ

Posted By:
Subscribe to Oneindia Kannada

ಅಸ್ಸಾಂ, ಪಶ್ಚಿಮಬಂಗಾಳ, ತಮಿಳುನಾಡು, ಪುದುಚೇರಿ ಮತ್ತು ಕೇರಳ ರಾಜ್ಯಗಳ ಚುನಾವಣಾ ಕಣ ರಂಗೇರುತ್ತಿದ್ದು, ಮತ್ತೊಂದು ಚುನಾವಣಾಪೂರ್ವ ಸಮೀಕ್ಷೆ ಹೊರಬಿದ್ದಿದೆ.

ಅಸ್ಸಾಂನ ಎಲ್ಲಾ 126 ಕ್ಷೇತ್ರಗಳ ಮತ್ತು ಪಶ್ಚಿಮ ಬಂಗಾಳದ 18 ನಕ್ಸಲ್ ಪೀಡಿತ ಕ್ಷೇತ್ರಗಳ ಮೊದಲ ಹಂತದ (ಏ4,11) ಚುನಾವಣೆ ಸೋಮವಾರ ಏಪ್ರಿಲ್ ನಾಲ್ಕರಂದು ನಡೆಯಲಿದೆ. (5 ರಾಜ್ಯಗಳ ಚುನಾವಣಾಪೂರ್ವ ಸಮೀಕ್ಷೆ)

ಮಾರ್ಚ್ ಮೊದಲ ವಾರದಲ್ಲಿ ಸಿವೋಟರ್ - ಇಂಡಿಯಾ ಟಿವಿ ಜಂಟಿಯಾಗಿ ಪುದುಚೇರಿ ಹೊರತು ಪಡಿಸಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಲ ಮತ್ತು ಅಸ್ಸಾಂ ರಾಜ್ಯದ ಅಸೆಂಬ್ಲಿಯ ಚುನಾವಣಾಪೂರ್ವ ಸಮೀಕ್ಷೆ ನಡೆಸಿತ್ತು.

ಅಂದಿನ ಚುನಾವಣಾಪೂರ್ವ ಫಲಿತಾಂಶಕ್ಕೂ, ಮಾರ್ಚ್ ನಾಲ್ಕನೇ ವಾರದಲ್ಲಿ ನಡೆಸಿರುವ ಸಮೀಕ್ಷೆಗೂ, ತುಂಬಾ ವ್ಯತ್ಯಾಸವೇನೂ ಕಂಡುಬರುತ್ತಿಲ್ಲ. (5 ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ)

ಇದರ ಜೊತೆಗೆ ಹಫಿಂಗ್ಟನ್ ಪೋಸ್ಟ್ - ಸಿವೋಟರ್ ಪಂಜಾಬ್ ನಲ್ಲಿ ಈಗ ಚುನಾವಣೆ ನಡೆದರೆ, ಮತದಾರ ಯಾರ ಕಡೆ ಎನ್ನುವ ಸಮೀಕ್ಷೆ ಕುತೂಹಲ ಮೂಡಿಸಿದೆ.

ಸಮೀಕ್ಷಾ ವರದಿ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಅಸ್ಸಾಂ

ಅಸ್ಸಾಂ

ಅಸ್ಸಾಂ (ಆವರಣದಲ್ಲಿ ಈಗಿನ ಬಲಾಬಲ)
ಒಟ್ಟು ಸ್ಥಾನಗಳು - 126
ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ - 55
ಕಾಂಗ್ರೆಸ್ - 53 (78)
ಎಐಯುಡಿಎಫ್ - 12 (18)
ಇತರರು - 06

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ (ಆವರಣದಲ್ಲಿ ಈಗಿನ ಬಲಾಬಲ)
ಒಟ್ಟು ಸ್ಥಾನಗಳು - 294
ತೃಣಮೂಲ ಕಾಂಗ್ರೆಸ್ - 160 (184)
ಎಡಪಕ್ಷ - 106 (60)
ಕಾಂಗ್ರೆಸ್ - 21 (42)
ಬಿಜೆಪಿ - 04

ಪಂಜಾಬ್ (2017ರಲ್ಲಿ ಚುನಾವಣೆ ನಡೆಯಲಿದೆ)

ಪಂಜಾಬ್ (2017ರಲ್ಲಿ ಚುನಾವಣೆ ನಡೆಯಲಿದೆ)

ಪಂಜಾಬ್ (ಆವರಣದಲ್ಲಿ ಈಗಿನ ಬಲಾಬಲ)
ಒಟ್ಟು ಸ್ಥಾನಗಳು : 117
ಕಾಂಗ್ರೆಸ್ : 8-14 (44)
ಶಿರೋಮಣಿ+ಬಿಜೆಪಿ: 6-12 (70)
ಆಮ್ ಆದ್ಮಿ: 94-100
ಇತರರು: 0-3 (03)

ತಮಿಳುನಾಡು

ತಮಿಳುನಾಡು

ತಮಿಳುನಾಡು (ಆವರಣದಲ್ಲಿ ಈಗಿನ ಬಲಾಬಲ)
ಸಮೀಕ್ಷೆಯ ಪ್ರಕಾರ ಯಾರಿಗೆ ಎಷ್ಟು ಸ್ಥಾನ?
ಒಟ್ಟು ಸ್ಥಾನಗಳು - 234
ಎಐಡಿಎಂಕೆ - 130 (203)
ಡಿಎಂಕೆ ಮೈತ್ರಿಕೂಟ - 70 (31)
ಬಿಜೆಪಿ - 0 (0)
ಇತರರು - 34

ಕೇರಳ

ಕೇರಳ

ಕೇರಳ (ಆವರಣದಲ್ಲಿ ಈಗಿನ ಬಲಾಬಲ)
ಒಟ್ಟು ಸ್ಥಾನಗಳು - 140
ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ - 86( 66)
ಕಾಂಗ್ರೆಸ್ ನೇತೃತ್ವದ ಯುಡಿಎಫ್ - 53 (72)
ಎನ್ಡಿಎ - 01
ಇತರರು - 00

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
C-Voter and India TV pre-poll survey of four out of five states of assembly election and Huffington Post - C Voter mood of voter survey for Punjab assembly.
Please Wait while comments are loading...