Video: 90,000 ಸರ್ವೀಸ್ ಬಿಲ್ ನೋಡಿ ಗ್ರಾಹಕನಿಂದ ಎಲೆಕ್ಟ್ರಿಕ್ ಬೈಕ್ ಚಿಂದಿ ಚಿತ್ರನ್ನ! ವಿಡಿಯೋ ವೈರಲ್

ಪ್ರತಿಯೊಬ್ಬ ವ್ಯಕ್ತಿಗೂ ವಾಹನ ಖರೀದಿ ಮಾಡುವ ಆಸೆ ಇದ್ದೇ ಇರುತ್ತದೆ. ಇದಕ್ಕಾಗಿ ತಿಂಗಳ ಸಂಬಳದಲ್ಲಿ ಹಣವನ್ನು ಕೂಡಿಟ್ಟು, ಸಾಲ ಮಾಡಿಯಾದರೂ ನೆಚ್ಚಿನ ವಾಹನವನ್ನು ಖರೀದಿ ಮಾಡ್ತಾರೆ. ಮಧ್ಯಮ ವರ್ಗದ ಜನರಿಗೆ ವಾಹನ ಖರೀದಿ ಮಾಡುವುದು ಬಹು ದೊಡ್ಡ ವಿಚಾರ. ಹೀಗೆ ಇಲ್ಲೊಬ್ಬ ವ್ಯಕ್ತಿ ಎಲೆಕ್ಟ್ರಿಕ್ ಬೈಕ್ ಖರೀದಿ ಮಾಡಿ ಅದರ ಮೊದಲ ಸರ್ವೀಸ್ ಬಿಲ್ ನೋಡಿ ವಾಹನವನ್ನೇ ಒಡೆದು ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಮಧ್ಯಮ ವರ್ಗದ ಜನ ತುಂಬಾ ಕಷ್ಟಪಟ್ಟು ದುಡಿದ ಹಣದಿಂದ ಪ್ರತಿ ಪೈಸೆ ಲೆಕ್ಕಹಾಕಿ ಉಳಿಸಿ ಅಥವಾ EMIನಲ್ಲಿ ಉಳಿಸುವ ಮೂಲಕ ಕಾರು ಅಥವಾ ಬೈಕ್‌ನ್ನು ಖರೀದಿಸುತ್ತಾರೆ. ಇಲ್ಲೊಬ್ಬ ವ್ಯಕ್ತಿ ಕೂಡ ಎಲೆಕ್ಟ್ರಿಕ್ ಬೈಕ್ ಅನ್ನು ಖರೀದಿ ಮಾಡಿದ್ದರು. ಈ ಹೊಸ ಎಲೆಕ್ಟ್ರಿಕ್ ಬೈಕ್ ನ ಮೊದಲ ಸರ್ವೀಸ್ ಗೆ ಹೋದಾಗ ಅದರ ಬಿಲ್ ನೋಡಿ ವ್ಯಕ್ತಿ ಶಾಕ್ ಆಗಿದ್ದಾರೆ. ಕೋಪದಿಂದ ಎಲೆಕ್ಟ್ರಿಕ್ ಬೈಕ್ ಅನ್ನು ಒಡೆದು ಹಾಕಿದ್ದಾರೆ. ಈ ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದು, ತನ್ನ ಎಲೆಕ್ಟ್ರಿಕ್ ಬೈಕ್ ನ ಸರ್ವಿಸ್ ಚಾರ್ಜ್‌ನಿಂದ ಕೋಪಗೊಂಡ ವ್ಯಕ್ತಿಯೊಬ್ಬರು ಶೋ ರೂಂ ಮುಂದೆ ಬೈಕ್‌ ಅನ್ನು ಒಡೆದು ಹಾಕಿದ್ದಾರೆ.

Customer smashes electric bike after seeing Rs 90 000 service bill Video goes viral

ಸಾಮಾನ್ಯವಾಗಿ ಹೆಚ್ಚಾಗಿ ಜನ ಪೆಟ್ರೋಲ್ ಉಳಿಸಲು ಎಲೆಕ್ಟ್ರಿಕ್ ಬೈಕ್ ಅನ್ನು ಖರೀದಿ ಮಾಡ್ತಾರೆ. ಆದರೆ ಅದನ್ನು ನಿಭಾಯಿಸಲು ಕೊಳ್ಳುವುದಕ್ಕಿಂತ ಹೆಚ್ಚಿನ ಹಣ ವ್ಯಯವಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದಲ್ಲೂ ಅದೇ ಆಗಿದೆ. ವೈರಲ್ ಕ್ಲಿಪ್‌ನಲ್ಲಿ ವ್ಯಕ್ತಿ ತನ್ನ ಕೈಯಲ್ಲಿ ಸುತ್ತಿಗೆಯನ್ನು ಹಿಡಿದು ಜೋರಾಗಿ ಎಲೆಕ್ಟ್ರಿಕ್ ಬೈಕ್ ಗೆ ಹೊಡೆಯುತ್ತಿರುವುದು ಕಂಡು ಬಂದಿದೆ. ಕ್ಲಿಪ್‌ನಲ್ಲಿ ಆ ವ್ಯಕ್ತಿ ತಾನು ಒಂದು ತಿಂಗಳ ಹಿಂದೆ ಓಲಾ ಶೋರೂಂನಿಂದ ಎಲೆಕ್ಟ್ರಿಕ್ ಬೈಕ್ ಅನ್ನು ಖರೀದಿಸಿದ್ದಾಗಿ ಹೇಳಿದ್ದಾನೆ.

ಇವರ ಮೊದಲ ಸರ್ವಸ್ ಬಿಲ್ ಬರೋಬ್ಬರಿ 90 ಸಾವಿರ ರೂಪಾಯಿ ಬಂದಿದೆ. ಇಷ್ಟೊಂದು ಹಣ ಕೊಡುವ ಬದಲು ಈ ಎಲೆಕ್ಟ್ರಿಕ್ ಬೈಕ್ ನನಗೆ ಬೇಡ ಅಂತ ಶೋರೂಂ ಮುಂದೆನೇ ವ್ಯಕ್ತಿ ವಾಹನವನ್ನು ಸುತ್ತಿಗೆ ಹಿಂದ ಹೊಡೆದು ಹಾಕಿದ್ದಾನೆ. ಸರ್ವೀಸ್ ಚಾರ್ಜ್ ನೋಡಿ ಗ್ರಾಹಕನಿಗಷ್ಟೇ ಅಲ್ಲದೇ ಇಂಟರ್ ನೆಟ್ ಬಳಕೆದಾರರಿಗೂ ಅಚ್ಚರಿಯಾಗಿದೆ. ಕಾಮೆಂಟ್ ವಿಭಾಗದಲ್ಲಿ ಹಲವಾರು ಬಳಕೆದಾರರು ಗ್ರಾಹಕರಿಗೆ ಹಣವನ್ನು ಮರುಪಾವತಿ ಮಾಡುವಂತೆ ಕೋರಿದ್ದಾರೆ.

90 ಸಾವಿರ ಬಿಲ್ ನೋಡಿ ಸ್ಕೂಟರ್ ಚಿಂದಿ ಚಿತ್ರನ್ನ...

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಓಲಾ ಎಲೆಕ್ಟ್ರಿಕ್ ಬೈಕ್ ಅನ್ನು ಸುತ್ತಿಗೆಯಿಂದ ಒಡೆಯುತ್ತಿರುವುದನ್ನು ಕಾಣಬಹುದು. ಕ್ಲಿಪ್‌ನಲ್ಲಿ ಪ್ರಶ್ನೆಗಳನ್ನು ಕೇಳಿದಾಗ, ಆ ವ್ಯಕ್ತಿ ತಾನು ಈ ಎಲೆಕ್ಟ್ರಿಕ್ ಬೈಕ್ ಅನ್ನು ಒಂದು ತಿಂಗಳ ಹಿಂದೆ ಖರೀದಿಸಿದ್ದಾಗಿ ಹೇಳುತ್ತಾನೆ. ಈಗ ಕಂಪನಿಯು ತನ್ನ ಸರ್ವಿಸ್‌ಗಾಗಿ 90 ಸಾವಿರ ರೂಪಾಯಿ ಬಿಲ್ ಮಾಡಿದೆ. ಬ್ಯಾಟರಿ ಹಾಳಾಗಿದೆ ಎಂದು ಹೇಳುತ್ತಿದ್ದಾರೆ. ಇದನ್ನು ಕೇಳಿದ ಕೆಲವರು ಆ ವ್ಯಕ್ತಿಗೆ ಎಲೆಕ್ಟ್ರಿಕ್ ಬೈಕ್‌ಗೆ ಬೆಂಕಿ ಹಚ್ಚುವಂತೆ ಸಲಹೆಯನ್ನು ನೀಡುತ್ತಿದ್ದಾರೆ.

ಇದರಿಂದ ಕೋಪಗೊಂಡ ಗ್ರಾಹಕ ಸುತ್ತಿಗೆಯ ಮೂಲಕ ಸ್ಕೂಟರ್ ಮೇಲೆ ಹೊರಹಾಕಿದ್ದಾರೆ. ಕಳೆದ ಕೆಲವು ದಿನಗಳಿಂದ ಓಲಾ ಸ್ಕೂಟರ್‌ಗಳ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಇತ್ತೀಚೆಗೆ ಹಾಸ್ಯನಟ ಕುನಾಲ್ ಕಮ್ರಾ ಅವರು ಓಲಾ ಎಲೆಕ್ಟ್ರಿಕ್ ಬೈಕ್‌ಗಳ ಗುಣಮಟ್ಟದ ಬಗ್ಗೆ ಓಲಾ ಮಾಲೀಕ ಭವಿಶ್ ಅಗರ್ವಾಲ್ ಅವರೊಂದಿಗೆ ಎಕ್ಸ್‌ನಲ್ಲಿ ಚರ್ಚೆ ನಡೆಸಿದರು.

ಈ ವೀಡಿಯೊವನ್ನು ಪೋಸ್ಟ್ ಮಾಡುವಾಗ

ಅಷ್ಟಕ್ಕೂ ಈ ವಿಡಿಯೋ ಎಲ್ಲಿಯದ್ದು ಎನ್ನುವುದು ತಿಳಿದು ಬಂದಿಲ್ಲ. ಆದರೆ ಇಲ್ಲಿಯವರೆಗೆ ಈ ವೀಡಿಯೊ ಸುಮಾರು 4 ಲಕ್ಷ ವೀಕ್ಷಣೆಗಳನ್ನು ಮತ್ತು 5 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಕಾಮೆಂಟ್‌ಗಳಲ್ಲಿ 400 ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ಜನರು ಗ್ರಾಹಕರ ಕೋಪವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕಂಪನಿ ಗ್ರಾಹಕನಿಗೆ ಹಣವನ್ನು ವಾಪಾಸ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಸ್ಕೂಟರ್ ಅನ್ನು ಸುತ್ತಿಗೆಯಿಂದ ಒಡೆದ ಘಟನೆಯ ಬಗ್ಗೆ ಕಾಮೆಂಟ್ ವಿಭಾಗದಲ್ಲಿ ಬಳಕೆದಾರರು ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ಬರೆದಿದ್ದಾರೆ- 'ಇದನ್ನು ಮಾಡುವ ಬದಲು, ನೀವು ಕಂಪನಿಯ ವಿರುದ್ಧ ಪೊಲೀಸರಲ್ಲಿ ಎಫ್‌ಐಆರ್ ದಾಖಲಿಸಬೇಕು. ಗ್ರಾಹಕರ ವೇದಿಕೆಯಲ್ಲಿ ನಿಮ್ಮ ಪ್ರಕರಣದ ವಿರುದ್ಧ ಸಹ ನೀವು ಹೋರಾಡಬಹುದು. ಇದು ನಿಮಗೆ ಮಾತ್ರ ಹಾನಿಯನ್ನುಂಟುಮಾಡುತ್ತದೆ' ಎಂದು ಸಲಹೆ ನೀಡಿದರು.

ಇದಕ್ಕಿಂತ ಎಫ್‌ಐಆರ್ ದಾಖಲಿಸುವುದು ಉತ್ತಮ...

ಇನ್ನೊಬ್ಬರು ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರು ಮೋಸಗಾರರು ಎಂದು ಬರೆದಿದ್ದಾರೆ. ಅವರ ಎಲ್ಲಾ ಸೇವೆ ಸಂಪೂರ್ಣ ಕಳಪೆಯಾಗಿದೆ. ಹೆಚ್ಚಿನ ಬಳಕೆದಾರರು ಕಂಪನಿಗೆ ಹಣ ವಾಪಸ್ ನೀಡಲು ಸಲಹೆ ನೀಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+