ಸಿಆರ್‌ಪಿಎಫ್ ಯೋಧರ ಕಾರ್ಯಕ್ಕೆ ಸಲಾಂ ಎನ್ನಿ
ನವದೆಹಲಿ, ಸೆಪ್ಟೆಂಬರ್ 04 : ಜ್ವರದಿಂದ ಬಳಲುತ್ತಿದ್ದ ಮಹಿಳೆಯನ್ನು ಸಿಆರ್‌ಪಿಎಫ್ ಯೋಧರು 7 ಕಿ.ಮೀ.ಹೊತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯೋಧರ ಕಾರ್ಯವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.
ಇಂತಹ ಮಾನವೀಯ ಕಾರ್ಯ ಮಾಡಿದ್ದು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದ 195ನೇ ಬೇಟಾಲಿಯನ್ ಸಿಆರ್‌ಪಿಎಫ್ ಯೋಧರು. ನಕ್ಸಲ್ ಪೀಡಿತ ಪ್ರದೇಶವಾದ ಛತ್ತೀಸ್‌ಗಢದ ದಂತೇವಾಡಲ್ಲಿ ಕೂಂಬಿಂಗ್ ಆಪರೇಷನ್‌ನಲ್ಲಿ ತೊಡಗಿದ್ದ ಯೋಧರು ಮಹಿಳೆಯ ಜೀವ ಉಳಿಸಿದ್ದಾರೆ.

ಭಾನುವಾರ ಸಂಜೆ ಕಾರ್ಯಾಚರಣೆ ಮುಗಿಸಿ ಯೋಧರು ವಾಪಸ್ ಆಗುತ್ತಿದ್ದರು. ಆಗ ಕೌಸಿ ಎಂಬ ಮಹಿಳೆ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಆಕೆಯ ಪತಿ ಮತ್ತು ಸಂಬಂಧಿಕರು ದೂರವಿದ್ದರು. ಇಬ್ಬರು ಮಕ್ಕಳು ಕೌಸಿ ಸುತ್ತ ಆಳುತ್ತಾ ಕೂತಿದ್ದರು.
ಮಹಿಳೆ ಇರುವ ಪ್ರದೇಶ ಬೆಟ್ಟದಿಂದ ಕೂಡಿದ್ದ ಕಾರಣ ಹೆಲಿಕಾಪ್ಟರ್‌ನಲ್ಲಿ ಆಕೆಯನ್ನು ಕರೆದುಕೊಂಡು ಹೋಗುವುದು ಅಸಾಧ್ಯವಾಗಿತ್ತು. ಗ್ರಾಮಕ್ಕ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಕ್ಸಲರು ಹಾಳು ಮಾಡಿದ್ದರು. ಆದ್ದರಿಂದ, ಆಂಬ್ಯುಲೆನ್ಸ್ ಬರುವುದು ಸಾಧ್ಯವಿರಲಿಲ್ಲ.
ಆದ್ದರಿಂದ, ಯೋಧರು ಅಲ್ಲಿದ್ದ ಕಟ್ಟಿಗೆ ಮತ್ತು ಬಟ್ಟೆಗಳನ್ನು ಬಳಸಿ ಸ್ಟ್ರೆಕ್ಚರ್ ನಿರ್ಮಿಸಿದರು. ನಂತರ ಮಹಿಳೆ ಮತ್ತು ಮಕ್ಕಳನ್ನು ಏಳು ಕಿ.ಮೀ. ಹೊತ್ತು ಸಾಗಿದರು. ಬೆಟ್ಟ, ನದಿಯನ್ನು ದಾಟಿ ಮಹಿಳೆಯನ್ನು ಮುಖ್ಯ ರಸ್ತೆಗೆ ಕರೆತಂದ ಯೋಧರು ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ.
#WATCH: CRPF personnel carry woman suffering from high fever on a stretcher for 7 km to a hospital, in Chhattisgarh's Dantewada. pic.twitter.com/dLkigKzP9e
— ANI (@ANI) September 3, 2017












Click it and Unblock the Notifications