ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಂಡೂಲ್ಕರ್ ಶ್ರೀಕೃಷ್ಣ, ನಾನು ಸುಧಾಮ ಎಂದ ಕ್ರಿಕೆಟಿಗ ಕೈಫ್: ಅದಾದ ನಂತರ ಆಗಿದ್ದೇನು?

|
Google Oneindia Kannada News

Recommended Video

ವಿವಾದಕ್ಕೆ ಕಾರಣವಾಯ್ತು ಕೈಫ್ ಹಾಕಿದ ಪೋಸ್ಟ್ | KAIF | SACHIN TENDULKAR | ONEINDIA KANNADA

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಮಾಡಿರುವ ಟ್ವೀಟೊಂದು ವ್ಯಾಪಕ ವೈರಲ್ ಆಗಿದ್ದು, ಅದಕ್ಕೆ ಅಷ್ಟೇ ಪ್ರತಿರೋಧವೂ ವ್ಯಕ್ತವಾಗುತ್ತಿದೆ.

ಕೈಫ್, ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಜೊತೆಗಿರುವ ಫೋಟೋ ಒಂದನ್ನು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ಆದರೆ, ಅವರು ಅದಕ್ಕೆ ನೀಡಿದ ಒಕ್ಕಣೆ, ಟ್ವಿಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ವೈರಲ್ ಚಿತ್ರ: ಸಚಿನ್ ರನ್ನು ಜಗದೇಕ ನಾಯಕ ಎಂದ ಕೈಫ್

"ಭಗವಂತ ಕೃಷ್ಣನ ಜೊತೆಗೆ ಸುಧಾಮನ ಕ್ಷಣ" ಎಂದು ಮೊಹಮ್ಮದ್ ಕೈಫ್, ಆ ಟ್ವೀಟಿಗೆ ಒಕ್ಕಣೆ ಬರೆದುಕೊಂಡಿದ್ದರು. ತೆಂಡೂಲ್ಕರ್ ಅವರನ್ನು ಕೃಷ್ಣನಿಗೆ, ತನ್ನನ್ನು ಸುಧಾಮನಿಗೆ ಕೈಫ್ ಹೋಲಿಸಿಕೊಂಡಿದ್ದರು.

ಭಾರತ ಈ ಪರಿಸ್ಥಿತಿಯಿಂದ ಹೊರಬರಲಿದೆ: ಸಿಎಎ ಬಗ್ಗೆ ಸುನಿಲ್ ಗವಾಸ್ಕರ್ ಹೇಳಿಕೆ

ನಿರೀಕ್ಷೆಯಂತೆ, ಕೈಫ್ ಈ ಟ್ವೀಟಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದರೆ, ಕೆಲವರು ಅವರ ಸಮರ್ಥನೆಗೂ ನಿಂತಿದ್ದಾರೆ. ಅದರ ಕೆಲವೊಂದು ಝಲಕ್ ಹೀಗಿದೆ..

ವೃತ್ತಿಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದ ಮೊಹಮ್ಮದ್ ಕೈಫ್

ವೃತ್ತಿಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದ ಮೊಹಮ್ಮದ್ ಕೈಫ್

ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದ ಮೊಹಮ್ಮದ್ ಕೈಫ್, ಜುಲೈ 2018ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್ ನಿಂದ ನಿವೃತ್ತರಾಗಿದ್ದರು. ಅದಾದ ನಂತರ, ರಾಜಕೀಯ ರಂಗಕ್ಕೆ ಧುಮುಕಿದ್ದ ಕೈಫ್, 2014ರ ಲೋಕಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಟಿಕೆಟಿನಿಂದ, ಉತ್ತರಪ್ರದೇಶದ ಫೂಲ್ಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು.

ಭಗವಂತ ಕೃಷ್ಣನ ಜೊತೆಗೆ ಸುಧಾಮನ ಕ್ಷಣ

ಸಚಿನ್ ತೆಂಡೂಲ್ಕರ್ ಜೊತೆಗೆ ಹಲವು ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದ ಮೊಹಮ್ಮದ್ ಕೈಫ್, ಅವರ ಜೊತೆಗಿದ್ದ ಫೋಟೋ ಒಂದನ್ನು ಜನವರಿ ಹನ್ನೆರಡರಂದು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದರು. "ಭಗವಂನ ಕೃಷ್ಣನ ಜೊತೆಗೆ ಸುಧಾಮನ ಕ್ಷಣ" ಎಂದು ಅದಕ್ಕೆ ಒಕ್ಕಣೆ ನೀಡಿದ್ದರು. ಇದಕ್ಕೆ, ಸಾಂಪ್ರದಾಯಿವಾದಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ನನ್ನ ರೋಲ್ ಮೊಡೆಲ್, ಸ್ಪೂರ್ತಿ, ರಾಹುಲ್ ದ್ರಾವಿಡ್

ನನ್ನ ರೋಲ್ ಮೊಡೆಲ್, ಸ್ಪೂರ್ತಿ, ರಾಹುಲ್ ದ್ರಾವಿಡ್

ಮೊಹಮ್ಮದ್ ಕೈಫ್, ಭಾರತೀಯ ಕ್ರಿಕೆಟಿನ ಗೋಡೆ ಎಂದೇ ಹೆಸರಾಗಿರುವ ರಾಹುಲ್ ದ್ರಾವಿಡ್ ಅವರ ಜೊತೆಗೂ ಫೋಟೋ ಕೂಡಾ ತೆಗೆಸಿಕೊಂಡು ಟ್ವೀಟ್ ಮಾಡಿದ್ದರು. ನನ್ನ ರೋಲ್ ಮೊಡೆಲ್, ಸ್ಪೂರ್ತಿ, ರಾಹುಲ್ ದ್ರಾವಿಡ್ ಗೆ ಜನ್ಮದಿನದ ಹಾರ್ಥಿಕ ಶುಭಾಶಯಗಳು ಎಂದು ಕೈಫ್ ಬರೆದುಕೊಂಡಿದ್ದರು.

ನೀನೊಬ್ಬ ದೊಡ್ಡ ಸಂಘಿ

ನೀನೊಬ್ಬ ದೊಡ್ಡ ಸಂಘಿ

ಆದರೆ, ತೆಂಡೂಲ್ಕರ್ ಜೊತೆಗಿನ ಫೋಟೋಗೆ ಹಿಂದೂ ದೇವರ ಹೆಸರನ್ನು ಬಳಸಿಕೊಂಡಿದ್ದಕ್ಕೋ ಏನೋ, ಕೈಫ್ ಅವರ ಟ್ವೀಟ್ ವ್ಯಾಪಕ ಪರ,ವಿರೋಧ ಚರ್ಚೆಗೆ ಗುರಿಯಾಗಿದೆ. "ಮುಸ್ಲಿಂ ಸಮುದಾಯದವನಾಗಿ ನಿನಗೆ ನಾಚಿಕೆಯಾಗಬೇಕು". "ನೀನೊಬ್ಬ ದೊಡ್ಡ ಸಂಘಿ" ಎನ್ನುವ ಟೀಕೆಯೂ ಬಂದಿದೆ.

ಹಿಂದೂ ದೇವರನ್ನು ಹೊಗಳಿದ್ದೀರಾ ಎನ್ನುವ ಕಾರಣಕ್ಕಾಗಿ ಹೇಳುತ್ತಿಲ್ಲ

ಹಿಂದೂ ದೇವರನ್ನು ಹೊಗಳಿದ್ದೀರಾ ಎನ್ನುವ ಕಾರಣಕ್ಕಾಗಿ ಹೇಳುತ್ತಿಲ್ಲ

"ನೀವೊಬ್ಬರು ಉತ್ತಮ ಮನುಷ್ಯತ್ವ ಉಳ್ಳವರು. ಹಿಂದೂ ದೇವರನ್ನು ಹೊಗಳಿದ್ದೀರಾ ಎನ್ನುವ ಕಾರಣಕ್ಕಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ. ನಿಮ್ಮಂತವರು ನಮ್ಮ ದೇಶಕ್ಕೆ ಬೇಕು". "ಕ್ರಿಕೆಟ್ ಜಗತ್ತಿಗೆ ನಿಮ್ಮ ಸಾಧನೆ ಅಪಾರ, ನಿಮ್ಮ ಕ್ರಿಕೆಟ್ ಅನ್ನು ನೋಡಿ, ಅಭಿಮಾನಿಯಾಗಿದ್ದವನು ನಾನು" ಎನ್ನುವ ಸಮರ್ಥನೆ ಕೂಡಾ ಬರುತ್ತಿದೆ.

English summary
Cricketer Mohammad Kaif Photo With Tendulkar Tweet, Angry Twitterite.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X