CoWIN Data Leak: ಪ್ರಕರಣ ಸಂಬಂಧ ದೆಹಲಿ ಪೊಲೀಸರಿಂದ ಬಿಹಾರದಲ್ಲಿ ವ್ಯಕ್ತಿ ಬಂಧನ, ವಿವರ
ನವದೆಹಲಿ, ಜೂನ್ 22: ಕೇಂದ್ರ ಆರೋಗ್ಯ ಸಚಿವಾಲಯವು ಸ್ಪಷ್ಟನೆ ನೀಡಿದ ಬಳಿಕವು ಸರ್ಕಾರದ ಸುಪರ್ದಿಯಲ್ಲಿರುವ ಕೋವಿನ್ (CoWIN) ಪೋರ್ಟಲ್‌ನಲ್ಲಿನ ಜನರು ಮಾಹಿತಿ ಕಳ್ಳತನದ ಸುದ್ದಿ ಚರ್ಚೆಯಾಗುತ್ತಲೆ ಇದೆ. ಇದೀಗ ಅದೇ ಪ್ರಕರಣದ ವಿಚಾರವಾಗಿ ಬಿಹಾರ್ ದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಭಾರತದಲ್ಲಿ ಕೆಲವು ದಿನಗಳ ಹಿಂದಷ್ಟೇ ಕೋವಿನ್ ಪೋರ್ಟ್‌ನಲ್ಲಿದ್ದ ಉನ್ನತ ರಾಜಕಾರಣಿಗಳು ಸೇರಿದಂತೆ ಜನಸಾಮಾನ್ಯರ ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ ಹಾಗೂ ಇನ್ನಿತರ ವೈಯಕ್ತಿ ಮಾಹಿತಿಗಳು ಸೋರಿಕೆಯಾಗಿದೆ ಎಂಬ ಮಾತುಗಳು ಕೇಳಿ ಬಂದಿತ್ತು.

ಈ ಬಗ್ಗೆ ತಕ್ಷಣಕ್ಕೆ ಸ್ಪಂದಿಸಿದ್ದ ಕೇಂದ್ರ ಆರೋಗ್ಯ ಸಚಿವಾಲಯವು ಕೋವಿನ್ ಪೋರ್ಟಲ್‌ನಲ್ಲಿನ ಎಲ್ಲ ದತ್ತಾಂಶಗಳು/ಮಾಹಿತಿಗಳು (Data) ಸುರಕ್ಷಿತವಾಗಿದೆ. ಯಾವುದು ಸೋರಿಕೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಇದರ ಬೆನ್ನಲ್ಲೇ ಸದ್ಯ ಕೋವಿನ್ ಡೇಟಾ ಸೋರಿಕೆಗೆ ಸಂಬಂಧಿಸಿದಂತೆ ದೆಹಲಿಯ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್(IFSO) ಘಟಕದ ಅಧಿಕಾರಿಗಳು ವ್ಯಕ್ತಿಯನ್ನು ಬಂಧಿಸಿದ್ದಾರೆ.
ಈ ಬಂಧಿತ ವ್ಯಕ್ತಿಯು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಇತರರ ಸೂಕ್ಷ್ಮ ವೈಯಕ್ತಿಕ ವಿವರಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆ ಟೆಲಿಗ್ರಾಮ್‌ನಲ್ಲಿ ಸೋರಿಕೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಡೇಟಾ ಕದಿಯಲು ಆರೋಗ್ಯ ಕಾರ್ಯಕರ್ತೆ-ತಾಯಿ ಸಹಾಯ
ಆರೋಪಿಯು ಕೋವಿನ್ ಪೋರ್ಟಲ್‌ನಿಂದ ಡೇಟಾವನ್ನು ಸಂಗ್ರಹಿಸಲು ತನ್ನ ತಾಯಿಯ, ಪೋರ್ಟಲ್ ಸಂಬಂಧಿ ಕಾರ್ಯ ನಿರ್ವಹಿಸುವ ಆರೋಗ್ಯ ಕಾರ್ಯಕರ್ತೆ ಸಹಾಯದಿಂದ ಮಾಹಿತಿ ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋವಿನ್ ಪೋರ್ಟಲ್‌ನಿಂದ ಸೋರಿಕೆಯಾಗಿದೆ ಎನ್ನಲಾಗುತ್ತಿರುವ ಮಾಹಿತಿ (ಡೇಟಾ) ಯಲ್ಲಿ ದೇಶದ ಜನರ ಆಧಾರ್, ವೋಟರ್ ಐಡಿ, ಪಾಸ್‌ಪೋರ್ಟ್ ಸಂಖ್ಯೆಗಳು ಹಾಗೂ ಕೋವಿಡ್ ಲಸಿಕೆ ಪಡೆದ ಮಾಹಿತಿ ಹಾಗೂ ಮೊಬೈಲ್ ಸಂಖ್ಯೆಗಳು ಇವೆ ಎಂದು ಆಗ್ನೇಯ ಏಷ್ಯಾ ಇಂಡೆಕ್ಸ್ ಟ್ವೀಟ್ ಮೂಲಕ ತಿಳಿಸಿದೆ.
ಕೋವಿನ್‌ನಿಂದ ಜನರ ಡೇಟಾ ರಕ್ಷಣಾ ನಿಯಮ ಉಲ್ಲಂಘನೆ ಆಗಿದೆ. ಮಾಹಿತಿ ಸೋರಿಕೆಯಾಗಿದೆ ಎಂಬ ಸುದ್ದಿಯನ್ನು ಜೂನ್ ಆರಂಭ ದಲ್ಲಿ ಸರಣಿಯಲ್ಲಿ ಟ್ವೀಟ್ ಮೂಲಕ ಸೌತ್ ಏಷ್ಯಾ ಇಂಡೆಕ್ಸ್ ಮಾಡಿ ಬಹಿರಂಗಪಡಿಸಿತ್ತು. ದೇಶದ ಜನರ ಮಾಹಿತಿ ಇಟ್ಟುಕೊಂಡ ಕೋವಿನ್ ಪೋರ್ಟಲ್ ಸಂಪೂರ್ಣ ಸುರಕ್ಷಿತವಾಗಿದೆಯೇ ಎಂದು ಒತ್ತಾಯಿಸಿತ್ತು. ಜೊತೆಗೆ ಕೇಂದ್ರ ಸಬೂಬಗಳನ್ನು ತಳ್ಳಿ ಹಾಕಿತ್ತು.
ಕೇಂದ್ರ ಆರೋಗ್ಯ ಸಚಿವಾಲಯವು ಕೋವಿನ್ ಪೋರ್ಟಲ್ ನಲ್ಲಿರುವ ದತ್ತಾಂಶಗಳು ಸಂಪೂರ್ಣ ಗೌಪ್ಯತೆ ಹೊಂದಿವೆ. ಸೋರಿಕೆ ಆಗಿಲ್ಲ,ಈ ವ್ಯವಸ್ಥೆಯು ಒಟಿಪಿ ಆಧಾರಿತವಾಗಿದ್ದು, ಕಳ್ಳತನವಾಗಿಲ್ಲ ಎಂದು ಹೇಳಿತ್ತು.

ಟೆಲಿಗ್ರಾಂ ಬಾಟ್‌ನಲ್ಲಿ ಹರಿದಾಡಿತ್ತು ಕೋವಿನ್ ಮಾಹಿತಿ
ಟೆಲಿಗ್ರಾಂಗಳಲ್ಲಿ ಬಾಟ್‌ನಲ್ಲಿ ಮೊಬೈಲ್ ಸಂಖ್ಯೆಗಳನ್ನು ನಮೂದಿಸಿದರೆ CoWIN ಅಪ್ಲಿಕೇಶನ್ ನಲ್ಲಿನ ವಿವರಗಳನ್ನು ಲಭ್ಯವಾಗುತ್ತದೆ ಎಂಬ ಒಂದಷ್ಟು ಮೊಬೈಲ್ ಸ್ಕ್ರೀನ್ ಶಾಟ್‌ಗಳು ಹರಿದಾಡಿದವು. ಈ ಬಗ್ಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದರು, 'ಸೋರಿಕೆಯಾಗಿದೆ ಎನ್ನಲಾಗುತ್ತಿರುವ ಮಾಹಿತಿ/ಅಂಶಗಳನ್ನು ನೋಡಿದರೆ ಅದು ಕೋವಿನ್ ಅಪ್ಲಿಕೇಶನ್ ಅಥವಾ ಸರ್ಕಾರದ ಡೇಟಾಬೇಸ್ ಅನ್ನು ನೇರವಾಗಿ ಉಲ್ಲಂಘಿಸಿ ಸೋರಿಕೆ ಮಾಡಿದಂತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಕೋವಿನ್ ಆರೋಗ್ಯ ಸೇತು ಮತ್ತು UMANG ಅಪ್ಲಿಕೇಶನ್‌ಗ ಜೊತೆ ಸಂಯೋಜಿಸಲ್ಪಟ್ಟಿದೆ. UMANG ಕೇಂದ್ರ ಸರ್ಕಾರ ವ್ಯಾಪ್ತಿಯಿಂದ ಸ್ಥಳೀಯ ಸರ್ಕಾರಿ ಸಂಸ್ಥೆಗಳ ವರೆಗಿನ ಪ್ಯಾನ್ ಇಂಡಿಯಾ ಇ-ಗೌವ್ ಸೇವೆಗಳಿಗೆ ಪ್ರವೇಶಕ್ಕಾಗಿ ಒಂದೇ ವೇದಿಕೆ ಹೊಂದಿದೆ ಎನ್ನಲಾಗಿದೆ.












Click it and Unblock the Notifications