ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಲಸಿಕೆ ವಿತರಣೆಗಾಗಿ, ಭಾರತೀಯ ವಿಮಾನಯಾನ ಸಂಸ್ಥೆಗಳು ಸಜ್ಜು

|
Google Oneindia Kannada News

ನವದೆಹಲಿ, ನವೆಂಬರ್ 20: ವಿಶ್ವದಾದ್ಯಂತ ಕೊರೊನಾ ಲಸಿಕೆಗಳು ಸಿದ್ಧಗೊಳ್ಳುತ್ತಿದ್ದು, ಅದರ ವಿತರಣೆಗೆ ಭಾರತೀಯ ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣಗಳು ಸಜ್ಜಾಗಿವೆ.

ದೇಶದಲ್ಲಿ ತಾಪಮಾನ ಸೂಕ್ಷ್ಮ ಲಸಿಕೆಗಳ ವಿತರಣೆ ಕಾರ್ಯಕ್ಕಾಗಿ ಸಿದ್ಧಗೊಳ್ಳುತ್ತಿವೆ.ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಜಿಎಂಆರ್ ಹೈದ್ರಾಬಾದ್ ವಿಮಾನ ನಿಲ್ದಾಣಗಳು ತಾಪಮಾನ ಸೂಕ್ಷ್ಮ ವಿತರಣೆ ವ್ಯವಸ್ಥೆ ಹಾಗೂ ಹೊಸತನದೊಂದಿಗೆ ಕೋವಿಡ್-19 ಲಸಿಕೆ ವಿತರಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲು ಸಿದ್ದಗೊಂಡಿವೆ.

ಕೊವಿಡ್ 19: ಡಿಸೆಂಬರ್ 31ರವರೆಗೂ ಮುಂಬೈನ ಶಾಲೆಗಳು ಬಂದ್ಕೊವಿಡ್ 19: ಡಿಸೆಂಬರ್ 31ರವರೆಗೂ ಮುಂಬೈನ ಶಾಲೆಗಳು ಬಂದ್

ಕೊವಿಡ್- 19 ಲಸಿಕೆ ವಿತರಣೆ ಕಾರ್ಯಕ್ಕಾಗಿ ಸಂಪೂರ್ಣವಾಗಿ ಸಿದ್ಧಗೊಂಡಿರುವುದಾಗಿ ಸ್ಪೈಸ್ ಜೆಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗಾಗಲೇ ರಕ್ತದ ಮಾದರಿಗಳನ್ನು ಸಾಗಿಸಿದ ಅನುಭವ ವಿರುವುದಾಗಿ ಸ್ಟೈಸ್ ಜೆಟ್ ವಿಮಾನಯಾನ ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದ್ದಾರೆ.

Covid Vaccine: How Indian Airlines, Airports Are Preparing For Distribution

ದೆಹಲಿ ವಿಮಾನ ನಿಲ್ದಾಣ ವಿಶ್ವ ಗುಣಮಟ್ಟದ ಮೂಲಸೌಕರ್ಯದೊಂದಿಗೆ ಎರಡು ಸರಕು ಟರ್ಮಿನಲ್ ಹೊಂದಿದ್ದು, ತಾಪಮಾನ ಸೂಕ್ಷ್ಮ ಸರಕು ನಿರ್ವಹಣೆಗಾಗಿ ಪ್ರಮಾಣೀಕೃತ ತಾಪಮಾನ-ನಿಯಂತ್ರಿತ ಸೌಲಭ್ಯವನ್ನು ಹೊಂದಿದೆ.ವಾರ್ಷಿಕವಾಗಿ 1.5 ಲಕ್ಷ ಮೆಟ್ರಿಕ್ ಟನ್ ನಿರ್ವಹಿಸುವ ಸಾಮರ್ಥ್ಯದೊಂದಿಗೆ ಅತ್ಯಾಧುನಿಕ ತಾಪಮಾನ-ನಿಯಂತ್ರಿತ ವಲಯಗಳನ್ನು ಹೊಂದಿದ್ದು, +25 ರಿಂದ -20 ಡಿಗ್ರಿ ಸೆಲ್ಸಿಯಸ್ ವರೆಗಿನ ಪ್ರತ್ಯೇಕ ತಂಪಾದ ಕೊಠಡಿಗಳೊಂದಿಗೆ ಕೋವಿಡ್ ಲಸಿಕೆ ವಿತರಣೆಗೆ ಅತ್ಯಂತ ಅನುಕೂಲಕರವಾಗಿದೆ ಎಂದು ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ವಕ್ತಾರರು ತಿಳಿಸಿದ್ದಾರೆ.

ಜಿಎಂಆರ್ ಹೈದರಾಬಾದ್ ವಿಮಾನ ನಿಲ್ದಾಣದ ಟರ್ಮಿನಲ್ -20 ರಿಂದ +25 ಡಿಗ್ರಿ ಸೆಲ್ಸಿಯಸ್ ವರೆಗಿನ ಅತ್ಯಾಧುನಿಕ ಉಪಕರಣಗಳು ಮತ್ತು ಉತ್ಪನ್ನ-ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸಲು ತಂಪಾದ ಕಂಟೈನರ್ ಗಳನ್ನು ಹೊಂದಿರುವುದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

Recommended Video

ICC World Test Chamionship : ದಿಢೀರ್ ಎರಡನೇ ಸ್ಥಾನಕ್ಕೆ ಕುಸಿದ ಭಾರತ ತಂಡ !! | Oneindia Kannada

English summary
As some of the coronavirus vaccine trials across the world are in their final stages, Indian airports and airlines have geared up to to handle the distribution of temperature-sensitive vaccines in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X