Corona updates: ಕೊರೊನಾ ರೋಗಿಯ ಕಾಲು "ನೀಲಿ ಬಣ್ಣ'ಕ್ಕೆ ತಿರುಗುವ ಲಕ್ಷಣ ಪತ್ತೆ
ನವದೆಹಲಿ, ಆಗಸ್ಟ್ 13: ಕೊರೊನಾ ಬಂದು ಹೋದ ಬಳಿಕವು ಅದರ ದುಷ್ಪರಿಣಾಮ ಅನೇಕರು ಅನುಭವಿಸಿದ್ದಾರೆ. ಇನ್ನೂ ಕೋವಿಡ್ 19ನ ಹೊಸ ಹೊಸ ರೂಪಾಂತರಿಗಳು ಸಹ ಸಾಕಷ್ಟು ಅನಾರೋಗ್ಯ ಸೃಷ್ಟಿಗೆ ಕಾರಣವಾಗಿವೆ. ಆದರೆ, ಕೋವಿಡ್ ಸಾರ್ಸ್ ಕೋವ್ 2 (PASC) ಪೋಸ್ಟ್-ಅಕ್ಯೂಟ್ ಸೀಕ್ವೆಲೆ ಎಂದೂ ಕರೆಯಲ್ಪಡುವ ಲಾಂಗ್ ಕೋವಿಡ್, ರೋಗಗಳ ಊಹಿಸಲಾಗ ಲಕ್ಷಣವೊಂದು ಪತ್ತೆಯಾಗಿದೆ.
ಈ ಕುರಿತು ಅಧ್ಯಯನವೊಂದರ ವರದಿಗೆ ಸಂಬಂಧಿತ ವಿಷಯವೊಂದು ದಿ ಲ್ಯಾನ್‌ಸೆಟ್ ಜರ್ನಲ್ ನಲ್ಲಿ ಪ್ರಕಟಗೊಂಡಿದೆ. ಇದರಿಂದಾಗಿ ಕೋವಿಡ್ ರೋಗಿಯೊಬ್ಬರು ಎಲ್ಲಾದರೂ ಒಂದು ಕಡೆ ಸುಮಾರು ಹತ್ತು ನಿಮಿಷಯಗಳ ಕಾಲ ನಿರಂತರವಾಗಿ ನಿಂತಲ್ಲೆ ನಿಂತುಕೊಂಡರೆ ಆತನ ಕಾಲುಗಳು ನೀಲಿ ಬಣ್ಣಕ್ಕೆ ತಿರುಗುತ್ತವೆ ಎನ್ನಲಾಗುತ್ತಿದೆ.

ಲಭ್ಯ ಅಧ್ಯಯನ ಮಾಹಿತಿಗಳನ್ನು ನೋಡಿದರೆ, ಕೋವಿಡ್ -19 ರ ದೀರ್ಘಕಾಲದ ದುಷ್ಪರಿಣಾಮ ಹಾಗೂ ಕೊರೊನಾ ರೂಪಾಂತರಿಯ ನೂತನ ಲಕ್ಷಣಗಳ ಇದಾಗಿದೆ. ಇದು ರೋಗಿಯ ದೈಹಿಕ ಮತ್ತು ನರಗಳ ಮೇಲೆ ಪ್ರಭಾವ ಬೀರುವುದರಿಂದ ಇಂತಹ ರೋಗ ಲಕ್ಷಣ ಕಂಡು ಬಂದಿವೆ ಎಂದು ವರದಿ ಮಾಹಿತಿ ನೀಡಿದೆ.
ಲಾಂಗ್ ಕೋವಿಡ್ ವ್ಯಕ್ತಿಯಲ್ಲಿ ಈ ಲಕ್ಷಣ ಪತ್ತೆ
ಸಂಶೋಧನೆಯಲ್ಲಿನ ಅಂಶಗಳನ್ನು ನೋಡುವುದಾದರೆ, ಯಾವ ವ್ಯಕ್ತಿ ಬಹುದಿನಗಳಿಂದ ಕೋವಿಡ್ ಸೋಂಕಿನಿಂದ ಬಳಲುತ್ತಿರುತ್ತಾನೋ ಅಂತಹ ವ್ಯಕ್ತಿಯಲ್ಲಿ ಈ ರೋಗ ಲಕ್ಷಣಗಳು ಪತ್ತೆಯಾಗಿದೆ. ಲಾಂಗ್ ಕೋವಿಡ್ ಸಫರ್ ವ್ಯಕ್ತಿ ನಿಂತಲ್ಲೇ ಹತ್ತು ನಿಮಿಷ ನಿಂತಲ್ಲಿ ಆತನ ಕಾಲುಗಳು ಸಾಮಾನ್ಯವಾಗಿ ಮೂಲ ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗುತ್ತವೆ ಎಂಬುದು ಸಾಬೀತಾಗಿದೆ.
ಇನ್ನೂ ಇದೇ ವಿಚಾರವನ್ನು ವೈದ್ಯಕೀಯವಾಗಿ ನೋಡುವುದಾದರೆ 'ಅವಲಂಬಿತ ರುಬೋರ್' ಎಂದು ಕರೆಯಲ್ಪಡುವ ಈ ವಿದ್ಯಮಾನವು ದುರ್ಬಲ ರಕ್ತ ಪರಿಚಲನೆ ಹೊಂದಿದ ವ್ಯಕ್ತಿಯಲ್ಲಿ ಹೆಚ್ಚು ಕಂಡು ಬರುತ್ತದೆ ಎನ್ನಲಾಗಿದೆ. ಭೂಮಿಯ ಗುರುತ್ವಾಕರ್ಷಣೆ ಶಕ್ತಿಯಿಂದ ಇಂತಹ ರೋಗಿಯ ಕಾಲುಗಳ ರಕ್ತವನ್ನು ಸೆಳೆಯುತ್ತದೆ.

ದೇಹದ ರಕ್ತಪರಿಚಲನಾ ವ್ಯವಸ್ಥೆಯು ಮತ್ತೆ ಮೇಲಕ್ಕೆ ಪಂಪ್ ಮಾಡಲು ಕಷ್ಟವಾಗುತ್ತದೆ. ಇದರಿಂದ ವ್ಯಕ್ತಿ ನಿಂತುಕೊಂಡಾಗ ರಕ್ತ ಕಾಲಿನ ಕೆಳಭಾಗದಲ್ಲಿ ಸಂಗ್ರಹವಾಗುತ್ತದೆ. ಆಗ ಕಾಲ ನೀಲಿಯಾಗಿ ಕಾಣುತ್ತದೆ ಎಂದು ತಿಳಿದು ಬಂದಿದೆ.
ವ್ಯಕ್ತಿಯ ಕಾಲುಗಳು ನೀಲಿ/ನೇರಳೆ ಬಣ್ಣಕ್ಕೆ ತಿರುಗಿದರೆ ಆತನಿಗೆ ಆಕ್ಸಿಜನ್ ಕೊರತೆ ಇದೆ ಅಂತಲೂ ಹೇಳಲಾಗುತ್ತದೆ. ಅಂತವರಿಗೆ ಹೆಚ್ಚು ಆಯಾಸ, ತಲೆತಿರುಗುವುದು, ಸುಸ್ತು ಇನ್ನಿತರ ಲಕ್ಷಣಗಳು ಕಂಡು ಬರುತ್ತವೆ. ಇದು ಪೋಸ್ಟಲ್ ಆರ್ಥೋಸ್ಟಾಟಿಕ್ ಟಾಕಿಕಾರ್ಡಿಯಾ ಚುಕ್ಕೆ (POTS) ಗೆ ಸಂಬಂಧಿಸಿದೆ. ಈ ನೂತನ ರೋಗ ಲಕ್ಷಣ ಕುರಿತು ಯುಕೆ ಲೀಡ್ಸ್ ವಿಶ್ವವಿದ್ಯಾಲಯದ ಅಧ್ಯಯನಗಳು ಸಹ ಒಂದಷ್ಟು ಮಾಹಿತಿ ನೀಡಿದೆ.












Click it and Unblock the Notifications