• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ 3ನೇ ಅಲೆ: ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಗರಿಷ್ಠ ಮಟ್ಟ ತಲುಪಲಿದೆ

|
Google Oneindia Kannada News

ನವದೆಹಲಿ, ಜೂನ್ 21: ಕೊರೊನಾ ಮೂರನೇ ಅಲೆ ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಲಿದೆ ಎಂದು ಕಾನ್ಫುರ ಐಐಟಿಯ ಪ್ರೊಫೆಸರ್ ರಾಜೇಶ್ ರಂಜನ್, ಮಹೇಂದ್ರ ವರ್ಮಾ ಮತ್ತಿತರನ್ನೊಳಗೊಂಡ ತಂಡ ನಡೆಸಿರುವ ಅಧ್ಯಯನದಲ್ಲಿ ಬಹಿರಂಗಗೊಂಡಿದೆ.

ಈ ವರ್ಷದ ಸೆಪ್ಟೆಂಬರ್- ಅಕ್ಟೋಬರ್ ಅವಧಿಯಲ್ಲಿ ಕೋವಿಡ್-ಮೂರನೇ ಅಲೆ ಉತ್ತುಂಗಕ್ಕೇರುವ ಸಾಧ್ಯತೆಯಿದೆ ಎಂದು ಹೇಳಿದರು.

ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ 'ಶಸ್ತ್ರ ಚಿಕಿತ್ಸೆ' ಮುಂದಕ್ಕೆ: ಕಾರಣವೇನು?ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ 'ಶಸ್ತ್ರ ಚಿಕಿತ್ಸೆ' ಮುಂದಕ್ಕೆ: ಕಾರಣವೇನು?

ಜುಲೈ 15 ರ ಹೊತ್ತಿಗೆ ದೇಶದಲ್ಲಿ ಸಂಪೂರ್ಣ ಅನ್ ಲಾಕ್ ಅಂತಾ ಭಾವಿಸಿದರೆ ಸನ್ನಿವೇಶ 1 ( ಸಂಪೂರ್ಣ ಸಹಜ ಪರಿಸ್ಥಿತಿ) ಮೂರನೇ ಅಲೆ ಅಕ್ಟೋಬರ್ ನಲ್ಲಿ ಗರಿಷ್ಠ ಹಂತ ತಲುಪಲಿದೆ. ಆದರೆ, ಎರಡನೇ ಅಲೆಗಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿರುತ್ತದೆ.

 ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ

ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ

ದೇಶದಲ್ಲಿ ಸರಾಸರಿ ದೈನಂದಿನ ಪ್ರಕರಣಗಳಲ್ಲಿ ಗಮನಾರ್ಹ ರೀತಿಯಲ್ಲಿ ಕಡಿಮೆಯಾಗಿದೆ. ಬಹುತೇಕ ರಾಜ್ಯಗಳಲ್ಲಿ ಪಾಸಿಟಿವಿಟಿ ದರ ಶೇಕಡಾ 5ಕ್ಕಿಂತ ಕಡಿಮೆಯಿದೆ. ಆದರೆ, ಕೇರಳ, ಗೋವಾ, ಸಿಕ್ಕಿಂ ಮತ್ತು ಮೇಘಾಲಯದಲ್ಲಿ ಪಾಸಿಟಿವಿಟಿ ದರ ಶೇ. 10 ರಷ್ಟಿದೆ.ಈ ವಾರದ ಅಂತ್ಯದ ವೇಳೆಗೆ, ಐಐಟಿ ಕಾನ್ಪುರದ ಮೂರನೇ ತರಂಗದ ಕುರಿತು ಮತ್ತೊಂದು ಅಧ್ಯಯನ ಹೊರಬರುವ ಸಾಧ್ಯತೆಯಿದೆ.

 ಕೊರೊನಾ ಮೂರನೇ ಅಲೆ ಬಗ್ಗೆ ಆತಂಕ

ಕೊರೊನಾ ಮೂರನೇ ಅಲೆ ಬಗ್ಗೆ ಆತಂಕ

ಮೂರನೇ ಅಲೆ ಬಗ್ಗೆ ಜನರಲ್ಲಿ ಗಮನಾರ್ಹ ರೀತಿಯ ಆತಂಕವಿದೆ. ಇದಕ್ಕಾಗಿ, ಎಸ್‌ಐಆರ್ ಮಾದರಿ ಬಳಸಿಕೊಂಡು, ಎರಡನೇ ತರಂಗದ ಸಾಂಕ್ರಾಮಿಕ ನಿಯತಾಂಕಗಳನ್ನು ಬಳಸಿಕೊಂಡು ಸಂಭವನೀಯ ಮೂರನೇ ತರಂಗದ ಕೆಳಗಿನ ಮೂರು ಸನ್ನಿವೇಶಗಳನ್ನು ನಿರ್ಮಿಸಿದ್ದಾರೆ.

 ಕೊರೊನಾ ಸೋಂಕು ಕಡಿಮೆ

ಕೊರೊನಾ ಸೋಂಕು ಕಡಿಮೆ

ಪ್ರೊ. ರಾಜೇಶ್ ರಂಜನ್ ಮತ್ತು ಮಹೇಂದ್ರ ವರ್ಮಾ, ಐಐಟಿ ಕಾನ್ಪುರದ ತಮ್ಮ ತಂಡದೊಂದಿಗೆ, ದೇಶದಲ್ಲಿನ ದೈನಂದಿನ ಕೋವಿಡ್-19 ಮುನ್ಸೂಚನೆಗಳನ್ನು covid19-forecast.org ನಲ್ಲಿ ಒದಗಿಸುತ್ತಾರೆ. ಐಐಟಿ ಕಾನ್ಪುರ್ ತಂಡದ ಪ್ರಕಾರ, ಕೆಲವು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿದಂತೆ ಎರಡನೇ ಅಲೆಯೂ ಪ್ರತಿಯೊಂದು ರಾಜ್ಯದಲ್ಲೂ ಗಮನಾರ್ಹವಾಗಿ ಕ್ಷೀಣಿಸಿದೆ.

 ಉತ್ತುಂಗಕ್ಕೇರಲಿದೆ ಕೊರೊನಾ

ಉತ್ತುಂಗಕ್ಕೇರಲಿದೆ ಕೊರೊನಾ

ಕೊರೊನಾದ ಮೂರನೇ ಅಲೆಯು ಎರಡನೇ ಅಲೆಗಿಂತ ಭಯಾನಕವಾಗಿರಬಹುದು ಎಂದು ಅಂದಾಜಿಸಲಾಗಿದೆ, ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್‌ನಲ್ಲಿ ಹೆಚ್ಚಾಗಲಿದೆ.

English summary
Union Home Minister Amit Shah on Monday said the central government has decided to increase the pace of vaccination against COVID-19 in July and August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X