ಫೆಬ್ರವರಿ ಅಪಾಯ: ಭಾರತದಲ್ಲಿ ದಿನಕ್ಕೆ 1.5 ಲಕ್ಷ ಜನರಿಗೆ ಓಮಿಕ್ರಾನ್ ಸೋಂಕು!?

ನವದೆಹಲಿ, ಡಿಸೆಂಬರ್ 21: ಭಾರತದಲ್ಲಿ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಭೀತಿ ಹೆಚ್ಚುತ್ತಿದೆ. 2022ರ ಫೆಬ್ರವರಿ ತಿಂಗಳ ಹೊತ್ತಿಗೆ ದೇಶದಲ್ಲಿ ಅತಿಹೆಚ್ಚು ಓಮಿಕ್ರಾನ್ ಪ್ರಕರಣಗಳು ವರದಿಯಾಗುವ ಅಪಾಯವಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.

ಕೊವಿಡ್-19 ಮೂರನೇ ಅಲೆಯು ಮುಂಬರುವ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಹೆಚ್ಚಾಗುವ ಸಾಧ್ಯತೆ ಇದ್ದು, ಅಲ್ಲಿಂದ ಮುಂದಿನ ಒಂದೇ ತಿಂಗಳಿನಲ್ಲಿ ಸೋಂಕಿನ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಕಾನ್ಪುರ ಐಐಟಿಯ ಮಣೀಂದ್ರ ಅಗರವಾಲ್ ಮತ್ತು ಹೈದರಾಬಾದ್‌ ಐಐಟಿಯ ಎಂ ವಿದ್ಯಾಸಾಗರ್, ಮಾದರಿ ಸಹ ಸಂಸ್ಥಾಪಕರಾಗಿದ್ದಾರೆ. 2022ರ ಫೆಬ್ರವರಿ ತಿಂಗಳಿನಲ್ಲಿ ಭಾರತವು ಅತಿಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಈ ಅವಧಿಯಲ್ಲಿ ದೇಶದಲ್ಲಿ ಪ್ರತಿನಿತ್ಯ 1.5 ರಿಂದ 1.8 ಲಕ್ಷ ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗುವ ಸಾಧ್ಯತೆಗಳಿರುತ್ತದೆ. ಭಾರತೀಯರು ಈಗಾಗಲೇ ಪಡೆದಿರುವ ಕೊವಿಡ್-19 ಲಸಿಕೆಯನ್ನು ಮೀರಿ ಓಮಿಕ್ರಾನ್ ಸೋಂಕು ಹರಡುವ ಸಾಮರ್ಥ್ಯವನ್ನು ಹೊಂದಿರುವುದೇ ನಿಜವಾದರೆ, ಫೆಬ್ರವರಿ ಹೊತ್ತಿಗೆ ಪರಿಸ್ಥಿತಿ ಕೈತಪ್ಪುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಪರಿಸ್ಥಿತಿ ಭಾರತಕ್ಕೆ ಎದುರಾಗುತ್ತಾ?

ದಕ್ಷಿಣ ಆಫ್ರಿಕಾದ ಪರಿಸ್ಥಿತಿ ಭಾರತಕ್ಕೆ ಎದುರಾಗುತ್ತಾ?

"ಭಾರತ ಪಾಲಿಗೆ ದಕ್ಷಿಣ ಆಫ್ರಿಕಾದಲ್ಲಿನ ಪರಿಸ್ಥಿತಿಯನ್ನೇ ಅಳತೆಗೋಲಾಗಿ ನೋಡುವುದಾದರೆ ಅಪಾಯ ಹೆಚ್ಚು ದಿನಗಳ ಕಾಲ ಇರುವುದಿಲ್ಲ. ಏಕೆಂದರೆ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಎಷ್ಟು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆಯೋ, ಅದಕ್ಕಿಂತ ವೇಗವಾಗಿ ತನ್ನ ಪ್ರಭಾವವನ್ನು ತಗ್ಗಿಸುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಮೂರು ವಾರಗಳ ಹಿಂದೆ ಗರಿಷ್ಠ ಓಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದು, ಆದರೆ ಈಗಾಗಲೇ ಅಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ," ಎಂದು ಮಣೀಂದ್ರ ಅಗರ್ವಾಲ್ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ಸಂಖ್ಯೆ ಇಳಿಕೆ

ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ಸಂಖ್ಯೆ ಇಳಿಕೆ

ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿನ ಏರಿಕೆಯು ಡಿಸೆಂಬರ್ 15ರ ಸಂದರ್ಭದಲ್ಲಿ ಗರಿಷ್ಠ ಮಟ್ಟದಲ್ಲಿತ್ತು. ಅಂದು ದಕ್ಷಿಣ ಆಫ್ರಿಕಾದಲ್ಲಿ ಪ್ರತಿನಿತ್ಯ 23,000ಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ವರದಿ ಆಗುತ್ತಿದ್ದವು. ಈ ಸಂಖ್ಯೆ ಈಗ 20,000ಕ್ಕಿಂತ ಕಡಿಮೆಯಾಗಿದೆ. ಸಾವಿನ ಸಂಖ್ಯೆ ಎರಡಂಕಿ ಆಸುಪಾಸಿನಲ್ಲಿದ್ದರೂ, ಈಗ ಏರಿಕೆ ಆಗುತ್ತಿದೆ. ಐಐಟಿ ಪ್ರೊಫೆಸರ್‌ಗಳ ಪ್ರಕಾರ, ಅಂಕಿ-ಸಂಖ್ಯೆಗಳಲ್ಲಿನ ಏರಿಳಿತದ ಸಾಮ್ಯತೆ ಮತ್ತು ನೈಸರ್ಗಿಕ ಪ್ರತಿರಕ್ಷೆಯ ಮಟ್ಟವು ಭಾರತ ಮತ್ತು ದಕ್ಷಿಣ ಆಫ್ರಿಕಾವನ್ನು ಒಂದೇ ನಿಟ್ಟಿನಲ್ಲಿ ನೋಡುವಂತೆ ಮಾಡಿದೆ. ಇದರರ್ಥ ಭಾರತವು ಆಶಾವಾದವನ್ನು ಹೊಂದಿರುವುದಕ್ಕೆ ಅದು ಕಾರಣವಾಗಿರುತ್ತದೆ.

ಓಮಿಕ್ರಾನ್ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಗೊತ್ತಾಗಿಲ್ಲ

ಓಮಿಕ್ರಾನ್ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಗೊತ್ತಾಗಿಲ್ಲ

ಕೊವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿನ ಬಗ್ಗೆ ಇನ್ನೂ ಪ್ರಮುಖ ವಿಷಯವೊಂದು ಸ್ಪಷ್ಟವಾಗಿಲ್ಲ. ಈ ರೂಪಾಂತರಿಯು ನೈಸರ್ಗಿತವಾಗಿ ಹಾಗೂ ಲಸಿಕೆ ಮೂಲಕ ಪಡೆದ ರೋಗ ನಿರೋಧಕ ಶಕ್ತಿಯನ್ನು ಎಷ್ಟರ ಮಟ್ಟಿಗೆ ತಪ್ಪಿಸುತ್ತದೆ. ಮನುಷ್ಯನಲ್ಲಿನ ರೋಗ ನಿರೋಧಕ ಶಕ್ತಿಯನ್ನು ಮೀರಿ ಹರಡುವ ಸಾಮರ್ಥ್ಯವಿದೆಯೇ ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ಗೆ ಸೋಂಕಿತ ಪ್ರಕರಣಗಳು, ಸಾವಿನ ಪ್ರಕರಣ ಮತ್ತು ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಫೆಬ್ರವರಿ ವೇಳೆಗೆ ಇಲ್ಲಿ ಓಮಿಕ್ರಾನ್ ಭೀತಿ ಕಡಿಮೆಯಾಗುವ ಸಾಧ್ಯತೆಯಿದೆ. ಯುಕೆ ಮತ್ತು ಯುಎಸ್ ಒಟ್ಟಾಗಿ ದೈನಂದಿನ ಕೋವಿಡ್ ಪ್ರಕರಣಗಳಲ್ಲಿ ಶೇ.34ರಷ್ಟಿದ್ದು, ಒಟ್ಟು ದೈನಂದಿನ ಕೋವಿಡ್ ಸಾವುಗಳಲ್ಲಿ ಶೇ.20ರಷ್ಟಿದೆ.

ಓಮಿಕ್ರಾನ್ ಸೋಂಕಿಗೆ ಯುಕೆಯಲ್ಲಿ 14 ಸಾವು

ಓಮಿಕ್ರಾನ್ ಸೋಂಕಿಗೆ ಯುಕೆಯಲ್ಲಿ 14 ಸಾವು

ಯುನೈಟೆಡ್ ಕಿಂಗ್‌ಡಮ್ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ದೇಶದಲ್ಲಿ ಡಿಸೆಂಬರ್ 20ರ ವೇಳೆಗೆ 45,000ಕ್ಕೂ ಹೆಚ್ಚು ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 129 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದರೆ, ಮಹಾಮಾರಿಗೆ 14 ಮಂದಿ ಪ್ರಾಣ ಬಿಟ್ಟಿದ್ದಾರೆ. ಯುಕೆಯಲ್ಲಿ ವಾರದಿಂದ ವಾರಕ್ಕೆ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಶೇ.61ರಷ್ಟು ಏರಿಕೆ ಕಂಡು ಬಂದಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಶೇ.6ರಷ್ಟು ಏರಿಕೆಯಾಗಿದೆ.

ಯೂನಿವರ್ಸಿಟಿ ಕಾಲೇಜ್ ಲಂಡನ್‌ನ ವೆಲ್‌ಕಮ್ ಸೆಂಟರ್ ಫಾರ್ ಹ್ಯೂಮನ್ ನ್ಯೂರೋಇಮೇಜಿಂಗ್‌ನ ಪ್ರಕಾರ, ಯುಕೆಯಲ್ಲಿ ಕೋವಿಡ್-ಸಂಬಂಧಿತ ಸಾವುಗಳು ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯು ಜನವರಿ ಮೊದಲ ವಾರದಲ್ಲಿ ಗರಿಷ್ಠ ಮಟ್ಟಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ. ಸದ್ಯ ದಿನಕ್ಕೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ 919ರಷ್ಟಿದ್ದು, ಜನವರಿ 7ರ ವೇಳೆಗೆ ಅದು 1,200ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಅದೇ ರೀತಿ ಸಾವಿನ ಸಂಖ್ಯೆಯು ಇಂದು 112ರ ಆಸುಪಾಸಿನಲ್ಲಿದ್ದು ಅದು, 137ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+