ಪಶ್ಚಿಮ ಬಂಗಾಳ:4 ಹೊಸ ಕೋವಿಡ್ ಉಪತಳಿ ಬಿಎಫ್.7 ಪಾಸಿಟಿವ್ ಕೇಸ್
ಕೋಲ್ಕತ್ತ, ಜನವರಿ 05: ಪಶ್ಚಿಮ ಬಂಗಾಳದಲ್ಲಿ ಕೋವಿಡ್ 19 ಓಮಿಕ್ರಾನ್ ಉಪ ತಳಿಯಾದ ಬಿಎಫ್.7 ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಪಸರಿಸುತ್ತಿರುವ ಕೊರೊನಾ ರೂಪಾಂತರಿ ವೈಸ್ ಬಿಎಫ್. 7 ಇತ್ತೀಚೆಗೆ ಭಾರತದಲ್ಲಿ ಕೆಲವೆಡೆ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಗುಜರಾತ್, ಓಡಿಶಾ ಭಾಗದಲ್ಲಿ ಕಾಣಿಸಿಕೊಂಡಿದ್ದ ಈ ರೂಪಾಂತರಿ ವೈರಸ್ ಇದೀಗ ಪಶ್ಚಿಮ ಬಂಗಾಳ ರಾಜ್ಯಕ್ಕೂ ಕಾಲಿಟ್ಟಿದೆ.
ಪಶ್ಚಿಮ ಬಂಗಾಳದಲ್ಲಿ ನಾಲ್ಕು ಬಿಎಫ್. 7 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ವಿಶೇಷವೆಂದರೆ ಈ ನಾಲ್ಕು ಮಂದಿ ಒಂದೇ ಕುಟುಂಬದ ಸದಸ್ಯರಾಗಿದ್ದಾರೆ. ಇಡಿ ಕುಟುಂಬವೇ ಇತ್ತೀಚೆಗೆ ಅಮೆರಿಕಕ್ಕೆ ತೆರಳಿ ವಾಪಾಸ್ ರಾಜ್ಯಕ್ಕೆ ಮರಳಿದ್ದರು. ಈ ಹಿನ್ನೆಲೆಯಲ್ಲಿ ಅವರು ಬಿಎಫ್. 7 ತಗುಲಿರಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮೆರಿಕದಿಂದ ಒಂದು ಕುಟುಂಬ ನಾಲ್ವರು ಬಂದಿಳಿಯುತ್ತಿದ್ದಂತೆ ಕೋವಿಡ್ ತಪಾಸಣೆ ನಡೆಸಲಾಯಿತು. ಈ ವೇಳೆ ವಿದೇಶಿ ಪ್ರಜೆಗಳು ಸೇರಿದಂತೆ ಇಬ್ಬರು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ 19 ಇರುವುದು ದೃಢವಾಯಿತು.
ನಂತರ ಸೋಂಕಿತರ ಮಾದರಿಗಳನ್ನು ಡಿಸೆಂಬರ್ 29 ರಂದು ಜೀನೋಮ್ ತಳಿ ಪತ್ತೆ ಪ್ರಯೋಗಾಲಕ್ಕೆ ಕಳುಹಿಸಲಾಗಿತ್ತು. ಅವರೆಲ್ಲ ವರದಿ ಇದೀಗ ಬಂದಿದ್ದು, ಅದರಿಂದಲೇ ಆ ನಾಲ್ವರಿಗೆ ಕೊರೊನಾ ಓಮಿಕ್ರಾನ್ ಉಪತಳಿ ಬಿಎಫ್.7 ಇರುವ ಬಗ್ಗೆ ಖಾತ್ರಿಯಾಗಿದೆ.
ಆಸ್ಟ್ರೇಲಿಯಾದಿಂದ ಬಂದಿದ್ದ ವಿದೇಶಿ ಪ್ರಜೆಗಳು ಬಿಹಾರದ ಬೋಧಗಯಾಗೆ ಹೋಗುತ್ತಿದ್ದರು. ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಕೋಲ್ಕತ್ತಾದ ಸಾಂಕ್ರಾಮಿಕ ರೋಗಗಳು ಮತ್ತು ಬಿಜಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತದ ವಿವಿಧ ರಾಜ್ಯಗಳಲ್ಲಿ ಕೋವಿಡ್ 19 ಪ್ರಕರಣದ ಉಲ್ಬಣಗೊಳ್ಳುತ್ತಿದೆ. ಇದರ ಪರಿಣಾಮವಾಗಿ ವೈರಸ್ ಅನ್ನು ನಿಭಾಯಿಸಲು ಪಶ್ಚಿಮ ಬಂಗಾಳ ಸರ್ಕಾರ ಆರು ಅಂಶಗಳ ಯೋಜನೆಯನ್ನು ರೂಪಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಹಿಂದೆ ವರದಿ ಮಾಡಿದೆ.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳನ್ನು ಸರ್ಕಾರ ಈಗಾಗಲೇ ಗುರುತಿಸಿ ಸಜ್ಜುಗೊಳಿಸಿದೆ. ಯೋಜನೆಯ ಭಾಗವಾಗಿ ಪರೀಕ್ಷಾ ಕಿಟ್‌ಗಳನ್ನು ಖರೀದಿಸಲಾಗಿದೆ. ಸಾಂಕ್ರಾಮಿಕ ರೋಗಗಳು ಮತ್ತು ಬಿಜಿ ಆಸ್ಪತ್ರೆ, ಸಂಭು ನಾಥ್ ಪಂಡಿತ್ ಆಸ್ಪತ್ರೆ ಮತ್ತು ಎಂಆರ್ ಬಂಗೂರ್ ಆಸ್ಪತ್ರೆಗಳು ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಗಳು ಎಂಥದ್ದೆ ಪರಿಸ್ಥಿತಿ ಎದುರಾದರೂ ನಿಭಾಯಿಸಲು ಸಿದ್ಧವಾಗಿವೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications