ಶಾಲೆಗಳ ಪುನರಾರಂಭಕ್ಕೆ ಸಂಬಂಧಿಸಿ ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟ

ನವದೆಹಲಿ, ಫೆಬ್ರವರಿ 04: ದೇಶಾದ್ಯಂತ ಶಾಲಾ-ಕಾಲೇಜುಗಳನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. 11 ರಾಜ್ಯಗಳಲ್ಲಿ ಶಾಲೆಗಳು ಸಂಪೂರ್ಣವಾಗಿ ಮತ್ತು 16 ರಾಜ್ಯಗಳಲ್ಲಿ ಉನ್ನತ ತರಗತಿಗಳಿಗೆ ಭಾಗಶಃ ತೆರೆಯಲು ಸರ್ಕಾರವು ಘೋಷಣೆ ಮಾಡಿದೆ. ಈ ಬಗ್ಗೆ ಹೊಸ ಆರೋಗ್ಯ ಮತ್ತು ಸುರಕ್ಷತೆಯಲ್ಲಿ ಉಲ್ಲೇಖ ಮಾಡಿದೆ.

ಒಂಬತ್ತು ರಾಜ್ಯಗಳಲ್ಲಿ ಶಾಲೆಗಳು ಮುಚ್ಚಿಯೇ ಇರಲಿದೆ. ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಶಾಲಾ ವಿದ್ಯಾರ್ಥಿಗಳು ದೈಹಿಕ ತರಗತಿಗಳಿಗೆ ಹಾಜರಾಗಲು ಪೋಷಕರ ಒಪ್ಪಿಗೆ ಅಗತ್ಯವಿದೆಯೇ ಎಂಬುದನ್ನು ನಿರ್ಧರಿಸಲು ಕೇಂದ್ರವು ರಾಜ್ಯಗಳಿಗೆ ಅವಕಾಶ ಇದೆ.

"ಭೌತಿಕ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಪೋಷಕರ ಒಪ್ಪಿಗೆಯನ್ನು ತಮ್ಮ ಶಾಲೆಗಳು ತೆಗೆದುಕೊಳ್ಳಬೇಕೇ ಎಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳೇ ನಿರ್ಧಾರ ಮಾಡಬಹುದು," ಎಂದು ಹೊಸ ಮಾರ್ಗಸೂಚಿಗಳು ತಿಳಿಸಿವೆ. ಈ ಹಿಂದೆ ಕೊರೊನಾ ವೈರಸ್‌ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಮಕ್ಕಳು ಶಾಲೆಗೆ ಹೋಗಬೇಕಾದರೆ ಪೋಷಕರ ಒಪ್ಪಿಗೆ ಕಡ್ಡಾಯವಾಗಿತ್ತು. ಕೇಂದ್ರವು ಎಲ್ಲಾ ರಾಜ್ಯ ಸರ್ಕಾರಗಳನ್ನು 'ಸಾಮಾಜಿಕ ಅಂತರ' ಪದದ ಬದಲಿಗೆ 'ದೈಹಿಕ ಅಂತರ' ಎಂಬ ಪದವನ್ನು ಬಳಸಬೇಕು ಎಂದು ಕೂಡಾ ಕೇಂದ್ರ ಸರ್ಕಾರವು ಸೂಚನೆ ನೀಡಿದೆ.

Covid-19: Centre issues new guidelines for reopening of schools

ಶಾಲೆಗಳನ್ನು ಪುನರಾರಂಭಿಸಲು ಹೊಸ ಮಾರ್ಗಸೂಚಿ

* ಶಾಲೆಯಲ್ಲಿ ಇನ್ನೂ ಕೂಡಾ ಶೇಕಡ 100 ಹಾಜರಾತಿ ನಿಯಮ ಜಾರಿಯಾಗಿಲ್ಲ
* ಶಾಲೆಯಲ್ಲಿ ಸರಿಯಾದ ನೈರ್ಮಲ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಮತ್ತು ಮೇಲ್ವಿಚಾರಣೆ ಮಾಡಬೇಕು
* ತರಗತಿಯಲ್ಲಿ ವಿದ್ಯಾರ್ಥಿಗಳು ಕೂರುವಾಗ ಕನಿಷ್ಠ ಆರು ಅಡಿ ಅಂತರ ಇರಬೇಕು
* ಸಿಬ್ಬಂದಿ ಕೊಠಡಿಗಳು, ಕಚೇರಿ ಪ್ರದೇಶಗಳು, ಅಸೆಂಬ್ಲಿ ಹಾಲ್‌ಗಳು ಮತ್ತು ಇತರ ಸಾಮಾನ್ಯ ಪ್ರದೇಶಗಳಲ್ಲಿ ದೈಹಿಕ ಅಂತರ ಕಾಪಾಡಬೇಕು

* ಶಾಲೆಗಳಲ್ಲಿ ವಿವಿಧ ತರಗತಿಗಳನ್ನು ನಡೆಸಲು ಸೀಮಿತ ಮತ್ತು ಹೊಂದಿಕೊಳ್ಳುವ ಸಮಯವನ್ನು ನಿಗದಿ ಮಾಡಬೇಕು
* ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗದ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಬಾರದು
* ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಶಾಲಾ ಆವರಣದಲ್ಲಿದ್ದಾಗ ಫೇಸ್ ಕವರ್ ಅಥವಾ ಮಾಸ್ಕ್ ಧರಿಸಬೇಕು.
* ಪೌಷ್ಠಿಕ ಆಹಾರ ವಿತರಣೆಯ ಸಮಯದಲ್ಲಿ (ಮಧ್ಯಾಹ್ನದ ಊಟ) ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
* ಎಲ್ಲಾ ಶಾಲೆಗಳಿಗೆ ನಿಯಮಿತವಾಗಿ ಶಾಲಾ ಸಾರಿಗೆಯ ನೈರ್ಮಲ್ಯೀಕರಣವು ಕಡ್ಡಾಯವಾಗಿ ಮಾಡಿಸಬೇಕು
* ಕಂಟೈನ್‌ಮೆಂಟ್ ವಲಯಗಳಲ್ಲಿ ವಾಸಿಸುವ ಶಾಲಾ ಚಾಲಕರು ಮತ್ತು ಕಂಡಕ್ಟರ್‌ಗಳಿಗೆ ವಾಹನಗಳನ್ನು ಹತ್ತಲು ಅನುಮತಿ ನೀಡಬಾರದು
* ಹಾಸ್ಟೆಲ್‌ಗಳಲ್ಲಿ ಹಾಸಿಗೆಗಳ ನಡುವೆ ಸಾಕಷ್ಟು ಅಂತರ ಇರುವಂತೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು
* ಪೋಷಕರ ಒಪ್ಪಿಗೆಯೊಂದಿಗೆ ಮನೆಯಿಂದಲೇ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳು ಹಾಗೆ ಮಾಡಲು ಅನುಮತಿಸಬಹುದು
* ಬೇರೆ ಅಸ್ವಸ್ಥತೆ ಹೊಂದಿರುವ ಮಕ್ಕಳಿಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಶಾಲೆಗಳಿಗೆ ನಿರ್ದೇಶನ ನೀಡಬೇಕು.

ಕೊರೊನಾವೈರಸ್‌ ಸಾಂಕ್ರಾಮಿಕ ಕಾರಣದಿಂದಾಗಿ ದೇಶದಾದ್ಯಂತ ಲಾಕ್‌ಡೌನ್‌ ಮಾಡಲಾಗಿದ್ದ ಸಂದರ್ಭದಲ್ಲಿ ಶಾಲೆಗಳು ಕೂಡಾ ಮುಚ್ಚಲಾಗಿದೆ. ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಶಾಲೆಗಳನ್ನು ಕೊರೊನಾ ಮಾರ್ಗಸೂಚಿ ಪಾಲನೆಯೊಂದಿಗೆ ಆರಂಭ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 7ರಿಂದ ಶಾಲಾ ಕಾಲೇಜುಗಳು ಪುನರ್‌ ಆರಂಭ ಆಗಲಿದೆ. ಇನ್ನು ಒಡಿಶಾದಲ್ಲಿಯೂ ಫೆಬ್ರವರಿ 7ರಿಂದ ಶಾಲಾ ಕಾಲೇಜುಗಳು ಪುನರ್‌ ಆರಂಭ ಆಗಲಿದೆ. ಇನ್ನು ದೆಹಲಿ ಸರ್ಕಾರವು ಇಂದು ನಡೆಸಿದ ಸಭೆಯಲ್ಲಿ ಶಾಲೆ, ಕಾಲೇಜು, ತರಬೇತಿ ಕೇಂದ್ರಗಳು ಹಾಗೂ ಜಿಮ್‌ಗಳನ್ನು ತೆರೆಯಲು ನಿರ್ಧಾರ ಕೈಗೊಂಡಿದೆ. ನೈಟ್‌ ಕರ್ಫ್ಯೂ ಸಮಯವನ್ನು ಒಂದು ಗಂಟೆಗಳ ಕಾಲ ಕಡಿತ ಮಾಡಲಾಗಿದೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+