ವಿದೇಶ ಪ್ರಯಾಣಕ್ಕೆ ಕೋರ್ಟ್ ಆಕ್ಷೇಪ: ಮನವಿ ಹಿಂಪಡೆದ ಜಾಕ್ವೆಲಿನ್ ಫರ್ನಾಂಡೀಸ್

ದೆಹಲಿ ಡಿಸೆಂಬರ್ 22: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನು ಪಡೆದಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ವಿದೇಶಕ್ಕೆ ಪ್ರಯಾಣಿಸಲು ಕೋರ್ಟ್ ಅಕ್ಷೇಪ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಜಾಕ್ವೆಲಿನ್ ಫರ್ನಾಂಡೀಸ್ ವಿದೇಶ ಪ್ರಯಾಣದ ಮನವಿಯನ್ನು ಹಿಂಪಡೆದಿದ್ದಾರೆ.

ಜಾಕ್ವೆಲಿನ್ ಫರ್ನಾಂಡೀಸ್ ಬಹ್ರೇನ್‌ನಲ್ಲಿರುವ ತಮ್ಮ ಅನಾರೋಗ್ಯದ ತಾಯಿಯನ್ನು ಭೇಟಿ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ ನ್ಯಾಯಾಲಕ್ಕೆ ಅವರು ತಮ್ಮ ಪ್ರಯಾಣಕ್ಕೆ ಅನುಮತಿಸಲು ಮನವಿ ಮಾಡಿದ್ದರು. ಆದರೆ ಕೋರ್ಟ್ ಅದಕ್ಕೆ ಅನುಮತಿಯನ್ನು ನೀಡಿಲ್ಲ. ಇದರಿಂದ ಜಾಕ್ವೆಲಿನ್ ಅವರ ವಕೀಲರು ಸೋಮವಾರ ಸಲ್ಲಿಸಿದ್ದ ಮನವಿಯನ್ನು ಹಿಂಪಡೆದಿದ್ದಾರೆ.

ಸುಕೇಶ್ ಚಂದ್ರಶೇಖರ್ ಅವರ 215 ಕೋಟಿ ರೂಪಾಯಿ ಸುಲಿಗೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ ನಟಿಯ ವಕೀಲರು, ಜಾಕ್ವೆಲಿನ್ ತಾಯಿ ಡಿಸೆಂಬರ್ 2021 ರಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಅವರೀಗ ತುಂಬಾ ಅಸ್ವಸ್ಥರಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

Court objection to travel abroad: Jacqueline Fernandez withdrew the plea

ಈ ವೇಳೆ ನಟಿ ವೀಸಾ ಪಡೆಯುವಲ್ಲಿ ಹೇಗೆ ಯಶಸ್ವಿಯಾದರು ಎಂದು ಕೋರ್ಟ್ ಕೇಳಿದೆ. ಜಾಕ್ವೆಲಿನ್ ಫರ್ನಾಂಡೀಸ್ ಅವರ ವಕೀಲರು ಆಕೆಯ ಪೋಷಕರು ಅಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು ಈಗಾಗಲೇ ವೀಸಾ ಹೊಂದಿದ್ದಾರೆ ಎಂದು ಹೇಳಿದರು. ಆದಾಗ್ಯೂ, ನ್ಯಾಯಾಲಯವು ಆಕೆಯ ಮನವಿಯನ್ನು ವಿರೋಧಿಸಿತು ಮತ್ತು ಪ್ರಸ್ತುತ ವಿಚಾರಣೆಯು ಬಹುಮುಖ್ಯವಾಗಿದೆ ಎಂದು ಹೇಳಿದೆ. ಇದು ಭಾವನಾತ್ಮಕ ವಿಷಯ ಎಂದು ನನಗೆ ತಿಳಿದಿದೆ ಆದರೆ ಈ ಪ್ರಕರಣವು ನಿರ್ಣಾಯಕ ಹಂತದಲ್ಲಿದೆ ಎಂದು ನ್ಯಾಯಾಲಯ ಹೇಳಿದೆ.

ನಟಿಯ ವಕೀಲರು ಮುಂದಿನ ವಿಚಾರಣೆಯ ದಿನಾಂಕ ಜನವರಿ 6 ಇದೆ, ಜಾಕ್ವೆಲಿನ್ ಫರ್ನಾಂಡಿಸ್ ಜನವರಿ 5 ರೊಳಗೆ ಹಿಂತಿರುಗುತ್ತಾರೆ ಎಂದು ನಮೂದಿಸುವ ಮೂಲಕ ವಿದೇಶ ಪ್ರವಾಸಕ್ಕೆ ಅನುಮತಿ ಪಡೆಯಲು ಪ್ರಯತ್ನಿಸಿದರು. ಜೊತೆಗೆ ಜಾಕ್ವೆಲಿನ್ ವಿಚಾರಣೆಯನ್ನು ತಪ್ಪಿಸುವುದಿಲ್ಲ. ಎರಡನೆಯದಾಗಿ, ಜಾಕ್ವೆಲಿನ್ ಆರೋಪಿ ನಂ. 10. ಜನವರಿ 6 ರಂದು ಆರೋಪಿ ನಂ. 1 ಆರೋಪದ ಬಗ್ಗೆ ವಾದವನ್ನು ಪ್ರಾರಂಭಿಸುತ್ತಾನೆ. ನನ್ನ ಸರದಿ ಬರಲು ಸಮಯ ತೆಗೆದುಕೊಳ್ಳುತ್ತದೆ ಎಂದು ನಟಿ ಪರ ವಕೀಲರು ಹೇಳಿದ್ದಾರೆ.

"ಪ್ರಯಾಣಕ್ಕೆ ಅನುಮತಿ ಪಡೆಯಲು ನೀವು ಜಾರಿ ನಿರ್ದೇಶನಾಲಯ (ED) ಸೇರಿದಂತೆ ಸರ್ಕಾರಿ ಏಜೆನ್ಸಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೀರಿ. ನೀವು ಕೂಲಿಂಗ್ ಪರಿಣಾಮವನ್ನು ಪಡೆಯಲು ಬಯಸುತ್ತಿರುವಂತೆ ತೋರುತ್ತಿದೆ. ಯಾವ ಪ್ರಕ್ರಿಯೆಯ ಅಡಿಯಲ್ಲಿ ನೀವು ಪ್ರಯಾಣ ಅನುಮತಿಗಾಗಿ ED ಅನ್ನು ಸಂಪರ್ಕಿಸಿದ್ದೀರಿ?" ಎಂದು ನ್ಯಾಯಾಲಯ ಕೇಳಿದೆ.

ಕೇಂದ್ರೀಯ ತನಿಖಾ ಸಂಸ್ಥೆಯ ಪರವಾಗಿ ಹಾಜರಾದ ವಕೀಲರು ಪ್ರಯಾಣಿಸಲು ಆಕೆಯ ಮನವಿಯನ್ನು ವಿರೋಧಿಸಿದರು. ಅವರನ್ನು ಭಾರತಕ್ಕೆ ಮರಳಿ ಪಡೆಯುವಲ್ಲಿ ಸಂಭವನೀಯ ಅಡಚಣೆಯ ಬಗ್ಗೆ ಸುಳಿವು ನೀಡಿದರು. ಜೊತೆಗೆ ಅವರು ನಟಿ ಕೂಡ ವಿದೇಶಿ ಪ್ರಜೆ ಎಂದು ಅವರು ಉಲ್ಲೇಖಿಸಿದ್ದಾರೆ. ಜಾಕ್ವೆಲಿನ್ ಫೆರ್ನಾಂಡಿಸ್ ಅವರು ಬಹ್ರೇನ್‌ನಲ್ಲಿ ಹುಟ್ಟಿ ಬೆಳೆದರು ಮತ್ತು ಅವರು ಶ್ರೀಲಂಕಾ, ಮಲೇಷಿಯನ್ ಮತ್ತು ಕೆನಡಾ ಮೂಲದ ಬಹುಜನಾಂಗೀಯ ಕುಟುಂಬದಲ್ಲಿ ಬೆಳೆದವರಾಗಿದ್ದು ಅವರು ದೇಶಕ್ಕೆ ಹಿಂತಿರುಗುವ ಸಾಧ್ಯತೆಗಳ ಸಮಸ್ಯೆಯ ಬಗ್ಗೆ ವಕೀಲರು ವಾದಿಸಿದರು. ಹೀಗಾಗಿ ನ್ಯಾಯಾಲಯ ವಿದೇಶ ಪ್ರಯಾಣವನ್ನು ಆಕ್ಷೇಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+