• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾಗೆ ಪತಂಜಲಿಯ ಆಯುರ್ವೇದ ಮದ್ದು: ಕೈ ಎತ್ತಿದ ಬಾಬಾ ರಾಮ್‌ದೇವ್

|
Google Oneindia Kannada News

ಹರಿದ್ವಾರ, ಜುಲೈ 1: ಸದ್ಯ ದೇಶ ಎದುರಿಸುತ್ತಿರುವ ಮೆಡಿಕಲ್ ಎಮರ್ಜೆನ್ಸಿ ಪರಿಸ್ಥಿತಿಯನ್ನು ಪರಿಹಾಸ್ಯ ಮಾಡುವಂತೆ, ಕೊರೊನಾಗೆ ಆಯುರ್ವೇದ ಮದ್ದು ಕಂಡು ಹಿಡಿದಿದ್ದೇವೆ ಎಂದಿದ್ದ ಪತಂಜಲಿ ಸಂಸ್ಥೆ ಈಗ ಉಲ್ಟಾ ಹೊಡೆದಿದೆ.

"ಕೊವಿಡ್ 19 ರೋಗದ ವಿರುದ್ಧ ಹೋರಾಡಲು ಮೊದಲ ಬಾರಿಗೆ ಆಯುರ್ವೇದದಲ್ಲಿ ಔಷಧಿ ಕಂಡುಹಿಡಿದಿದ್ದೇವೆ" ಎಂದು ತುಂಬಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ಪತಂಜಲಿ ಯೋಗಪೀಠದ ಬಾಬಾ ರಾಮ್‌ದೇವ್ ಈಗ ನಾವು ಹಾಗೆ ಹೇಳಿಲ್ಲ ಎಂದಿದ್ದಾರೆ.

ಕೊರೊನಾ ವೈರಸ್‌ಗೆ ಪತಂಜಲಿಯಿಂದ ಆಯುರ್ವೇದ ಔಷಧ ಬಿಡುಗಡೆಕೊರೊನಾ ವೈರಸ್‌ಗೆ ಪತಂಜಲಿಯಿಂದ ಆಯುರ್ವೇದ ಔಷಧ ಬಿಡುಗಡೆ

ಪತಂಜಲಿ ಆಯುರ್ವೇದ ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ, "ಕೊರೊನಾ ಸೋಂಕಿಗೆ ಮೊದಲ ಔಷಧ ಕೊರೊನಿಲ್ ಅನ್ನು ಸಂಪೂರ್ಣ ವೈಜ್ಞಾನಿಕ ದಾಖಲೆಗಳೊಂದಿಗೆ ಬಿಡುಗಡೆ ಮಾಡಲಿದ್ದೇವೆ" ಎಂದು ಹೇಳಿದ್ದರು.

ಪತಂಜಲಿಯ'ಕೊರೊನಿಲ್' ಔಷಧ ಮಾರಾಟಕ್ಕೆ ಕೇಂದ್ರ ಸರ್ಕಾರ ತಡೆಪತಂಜಲಿಯ'ಕೊರೊನಿಲ್' ಔಷಧ ಮಾರಾಟಕ್ಕೆ ಕೇಂದ್ರ ಸರ್ಕಾರ ತಡೆ

ರಾಮ್‌ದೇವ್, ಔಷಧ ಕಂಡುಹಿಡಿದಿದ್ದು ಉತ್ತಮ ವಿಚಾರ, ಆದರೆ ಅದು ಆಯುಷ್ ಮಂತ್ರಾಲಯದಡಿ ಬರುತ್ತದೆ ಎಂದು ಕೇಂದ್ರ ಸರಕಾರ ಕೊರೊನಿಲ್ ಔಷಧ ಮಾರಾಟಕ್ಕೆ ತಡೆನೀಡಿತ್ತು. ಬಾಬಾ ರಾಮ್‌ದೇವ್ ಹೇಳಿದ್ದೇನು?

ಕೊರೊನಾ ಕಿಟ್ ಹೆಸರಿನ ಯಾವುದೇ ಔಷಧಿಯನ್ನು ನಾವು ತಯಾರಿಸಿಲ್ಲ

ಕೊರೊನಾ ಕಿಟ್ ಹೆಸರಿನ ಯಾವುದೇ ಔಷಧಿಯನ್ನು ನಾವು ತಯಾರಿಸಿಲ್ಲ

ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಬಾಬಾ ರಾಮ್‌ದೇವ್, "ಈ ವರದಿಯನ್ನು ನಾವು ನಿರಾಕರಿಸುತ್ತೇವೆ. ಕೊರೊನಾ ಕಿಟ್ ಹೆಸರಿನ ಯಾವುದೇ ಔಷಧಿಯನ್ನು ನಾವು ತಯಾರಿಸಿಲ್ಲ" ಎಂದು ಹೇಳಿದ್ದಾರೆ. ಉತ್ತರಾಖಂಡ ಸರಕಾರದ ನೊಟೀಸ್ ಗೆ ಲಿಖಿತ ರೂಪದಲ್ಲಿ ಪತಂಜಲಿ ಈ ರೀತಿ ಉತ್ತರಿಸಿದೆ.

ಬಾಬಾ ರಾಮ್‌ದೇವ್ ಹೇಳಿಕೆ

ಬಾಬಾ ರಾಮ್‌ದೇವ್ ಹೇಳಿಕೆ

"ನಾವು, ದಿವ್ಯಾ ಸ್ವಸರಿ ವಟಿ', ದಿವ್ಯಾ ಕೊರೊನಿಲ್ ಟ್ಯಾಬ್ಲೆಟ್ ಮತ್ತು ದಿವ್ಯಾ ಅನು ತೈಲವನ್ನು ಪ್ಯಾಕ್ ಮಾಡಿದ್ದೆವು. ನಾವು ಕೊರೊನಿಲ್ ಕಿಟ್ ಹೆಸರಿನ ಲ್ಲಿ ಯಾವುದೇ ಲಸಿಕೆಯನ್ನು ಮಾರಾಟ ಮಾಡಿಲ್ಲ ಅಥವಾ ಕೊರೊನಾ ಚಿಕಿತ್ಸೆಗಾಗಿ ಅದನ್ನು ಪ್ರಚಾರ ಮಾಡಿಲ್ಲ"ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ಕೊರೊನಾ ಸೋಂಕು ನಿವಾರಣೆಯಾಗುತ್ತದೆ ಎಂದು ನಾವು ಹೇಳಿಕೊಂಡಿಲ್ಲ

ಕೊರೊನಾ ಸೋಂಕು ನಿವಾರಣೆಯಾಗುತ್ತದೆ ಎಂದು ನಾವು ಹೇಳಿಕೊಂಡಿಲ್ಲ

"ಪ್ರಾಯೋಗಿಕವಾಗಿ ನಾವು ಯಶಸ್ವಿಯಾಗಿದ್ದೇವೆ ಎಂದಷ್ಟೇ ನಾವು ಮಾಧ್ಯಮದ ಮುಂದೆ ಹೇಳಿರುವುದು. ಈ ಮದ್ದಿನಿಂದ ಕೊರೊನಾ ಸೋಂಕು ನಿವಾರಣೆಯಾಗುತ್ತದೆ ಎಂದು ನಾವು ಹೇಳಿಕೊಂಡಿಲ್ಲ"ಎಂದು ಪತಂಜಲಿ ಸಂಸ್ಥೆಯ ಬಾಬಾ ರಾಮ್‌ದೇವ್ ಸ್ಪಷ್ಟನೆಯನ್ನು ನೀಡಿದ್ದಾರೆ.

ಕೊರೊನಾಗೆ ಪತಂಜಲಿಯ ಆಯುರ್ವೇದ ಮದ್ದು: ಕೈ ಎತ್ತಿದ ಬಾಬಾ ರಾಮ್‌ದೇವ್

ಕೊರೊನಾಗೆ ಪತಂಜಲಿಯ ಆಯುರ್ವೇದ ಮದ್ದು: ಕೈ ಎತ್ತಿದ ಬಾಬಾ ರಾಮ್‌ದೇವ್

"ಕೋವಿಡ್ 19 ರೋಗದ ವಿರುದ್ಧ ಹೋರಾಡಲು ಮೊದಲ ಭಾರಿಗೆ ಆಯುರ್ವೇದದಲ್ಲಿ ಔಷಧಿ ಕಂಡುಹಿಡಿದಿದ್ದೇವೆ. ಮೂರು ದಿನಗಳಲ್ಲಿ ಶೇ.69ರಷ್ಟು ಗುಣಮುಖರಾಗುತ್ತಾರೆ. 7 ದಿನಗಳಲ್ಲಿ ಶೇ.100ರಷ್ಟು ರೋಗಿಗಳು ಗುಣಮುಖರಾಗಲಿದ್ದಾರೆ. ಈ ಔಷಧದಿಂದ 1 ಸಾವಿರ ರೋಗಿಗಳನ್ನು 5-14 ದಿನಗಳಲ್ಲಿ ಗುಣಮುಖರನ್ನಾಗಿ ಮಾಡಬಹುದು" ಎಂದು ಆಚಾರ್ಯ ಬಾಲಕೃಷ್ಣ ಹೇಳಿದ್ದರು.

English summary
Yoga Guru Baba Ramdev-led Patanjali Company Denied Claims Of Calling The New Medicine A “Cure” For Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X