ಸಿಹಿಸುದ್ದಿ: 12-15 ವರ್ಷದೊಳಗಿನ ಮಕ್ಕಳಿಗೂ ಬಂತು ಕೊರೊನಾ ಲಸಿಕೆ!

ನವದೆಹಲಿ, ಮಾರ್ಚ್ 31: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಉದ್ದೇಶದಿಂದ 12 ರಿಂದ 15 ವರ್ಷದೊಳಗಿನ ಮಕ್ಕಳ ಮೇಲೆ ತಮ್ಮ ಸಂಸ್ಥೆಯ ಲಸಿಕೆಯು ಶೇ.100ರಷ್ಟು ಪರಿಣಾಮಕಾರಿ ಆಗಿದೆ ಎಂದು ಬಯೋಎನ್‌ಟೆಕ್ ಮತ್ತು ಫೈಜರ್ ಸ್ಪಷ್ಟಪಡಿಸಿದೆ.

ಮುಂದಿನ ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಈ ಲಸಿಕೆಗೆ ಅನುಮೋದನೆ ಪಡೆಯುವತ್ತ ಸಂಸ್ಥೆಯು ಲಕ್ಷ್ಯ ನೆಟ್ಟಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ 2,260 ಮಕ್ಕಳ ಮೇಲೆ ನಡೆಸಿದ 3 ಹಂತದ ಪ್ರಯೋಗಗಳು ಶೇ.100ರಷ್ಟು ಪರಿಣಾಮಕಾರಿಯಾಗಿವೆ ಎಂದು ಕಂಪನಿ ತಿಳಿಸಿವೆ.

ಮುಂದಿನ ವರ್ಷ ಶಾಲೆ ಪ್ರಾರಂಭಕ್ಕೂ ಮೊದಲು ಈ ವಯಸ್ಸಿನವರಿಗೆ ಲಸಿಕೆ ನೀಡಬೇಕಿದೆ. ಹೊಸ ಭರವಸೆಯೊಂದಿಗೆ ಮುಂಬರುವ ವಾರಗಳಲ್ಲಿ ನಮ್ಮ ತುರ್ತು ಬಳಕೆ ದೃಢೀಕರಣ ಹಾಗೂ ವಿಶ್ವದ ಇತರ ನಿಯಂತ್ರಕರಿಗೆ ಪ್ರಸ್ತಾವಿತ ತಿದ್ದುಪಡಿಗಾಗಿ ಈ ದತ್ತಾಂಶವನ್ನು (ಯುಎಸ್ ನಿಯಂತ್ರಕ) ಎಫ್‌ಡಿಎಗೆ ಸಲ್ಲಿಸುವದಕ್ಕೆ ಯೋಜಿಸುತ್ತಿದ್ದೇವೆ ಎಂದು ಫೈಜರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಲ್ಬರ್ಟ್ ಬೌರಿಯಾ ತಿಳಿಸಿದ್ದಾರೆ.

Coronavirus Vaccine Is 100 Percent Effective On 12-15 Year Olds, Says BioNTech-Pfizer Company

ರೂಪಾಂತರ ವೈರಸ್ ಮೇಲೆ ಹೆಚ್ಚು ಪ್ರಭಾವ:

12 ರಿಂದ 15 ವರ್ಷದೊಳಗಿನ ಯುವಕರಲ್ಲಿ ಲಸಿಕೆಯು ಹೆಚ್ಚು ಪ್ರಭಾವಶಾಲಿಯಾಗಿ ಕೆಲಸ ಮಾಡಿದೆ. ಈ ವಯೋಮಾನದವರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವಲ್ಲಿ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಅಲ್ಲದೇ ಇಂಗ್ಲೆಂಡ್ ಮೂಲದ B.1.1.7 ರೂಪಾಂತರ ವೈರಸ್ ವಿರುದ್ಧ ಹೋರಾಡುವುದಕ್ಕೆ ಈ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಜರ್ಮನಿ ಮೂಲದ ಬಯೋಎನ್‌ಟೆಕ್ ಕಂಪನಿ ಮುಖ್ಯಸ್ಥರು ತಿಳಿಸಿದ್ದಾರೆ.

65 ದೇಶಗಳಲ್ಲಿ ಕಂಪನಿಯ ಲಸಿಕೆ ಬಳಕೆ:

ಕಳೆದ ವರ್ಷವಷ್ಟೇ ಕೊರೊನಾವೈರಸ್ ಸೋಂಕಿನ ವಿರುದ್ಧ ರಕ್ಷಣೆ ಪಡೆಯುವುದಕ್ಕಾಗಿ ಬಯೋಎನ್‌ಟೆಕ್ ಮತ್ತು ಫೈಜರ್ ಕಂಪನಿಯ ಲಸಿಕೆ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿತ್ತು. ವಿಶ್ವದ 65ಕ್ಕೂ ಹೆಚ್ಚು ದೇಶಗಳಲ್ಲಿ ಈ ಲಸಿಕೆಯನ್ನು ಬಳಕೆ ಮಾಡಲಾಗುತ್ತಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ರಾಷ್ಟ್ರಗಳಲ್ಲಿ 16 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ತುರ್ತು ಸಂದರ್ಭದಲ್ಲಿ ಈ ಲಸಿಕೆ ಪ್ರಯೋಗಿಸುವುದಕ್ಕೆ ಅನುಮೋದನೆ ನೀಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+