ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಧ್ವನಿ ಬದಲಾವಣೆಯೂ ಕೊರೊನಾ ಸೋಂಕಿನ ಒಂದು ಲಕ್ಷಣ

|
Google Oneindia Kannada News

ನವದೆಹಲಿ, ಏಪ್ರಿಲ್ 28: ದೇಶಾದ್ಯಂತ ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗಿದೆ, ಮೊದಲ ಅಲೆಯಲ್ಲಿ ಹಿರಿಯ ನಾಗರಿಕರು, ಗರ್ಭಿಣಿಯರಿಗೆ ಹೆಚ್ಚಿನ ತೊಂದರೆ ಎಂದು ಹೇಳಲಾಗಿದ್ದರೆ ಈ ಎರಡನೇ ಅಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಸೋಂಕು ತಗುಲುತ್ತಿದೆ.

ಕಳೆದ ಸೋಂಕು ಕಾಣಿಸಿಕೊಂಡರೂ ಎಲ್ಲರಿಗೂ ದೊಡ್ಡ ಪ್ರಮಾಣದಲ್ಲಿ ಲಕ್ಷಣಗಳಿರಲಿಲ್ಲ, ಕೆಲವರಿಗೆ ತಲೆ ನೋವು, ಇನ್ನೂ ಕೆಲವರಿಗೆ ಜ್ವರ, ಮೈಕೈ ನೋವು, ಗಂಟಲು ನೋವು ಹೀಗೆ ಕ್ರಮೇಣವಾಗಿ ಕಡಿಮೆಯಾಗುತ್ತಿತ್ತು ಎಲ್ಲರೂ ಆಸ್ಪತ್ರೆಗೆ ದಾಖಲಾಗುತ್ತಿರಲಿಲ್ಲ.

ಕೊರೊನಾ 2ನೇ ಅಲೆ, ಮಕ್ಕಳಿಗೂ ಹೆಚ್ಚು ಅಪಾಯಕಾರಿ: ವೈದ್ಯರ ಎಚ್ಚರಿಕೆಕೊರೊನಾ 2ನೇ ಅಲೆ, ಮಕ್ಕಳಿಗೂ ಹೆಚ್ಚು ಅಪಾಯಕಾರಿ: ವೈದ್ಯರ ಎಚ್ಚರಿಕೆ

ಆದರೆ ಈ ಬಾರಿ ಬಹುತೇಕ ಮಂದಿಗೆ ಉಸಿರಾಟದ ತೊಂದರೆಯಾಗುತ್ತಿದ್ದು, ಹಲವರು ಕೃತಕ ಆಮ್ಲಜನಕ ಸಿಗದೆ ಮೃತಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೊರೊನಾ ಸೋಂಕು ಹೆಚ್ಚಾಗುವ ಮುನ್ನವೇ ಸಣ್ಣ ಪ್ರಮಾಣದ ಲಕ್ಷಣಗಳ ಕುರಿತು ಹೆಚ್ಚು ಗಮನಹರಿಸುವ ಅಗತ್ಯವಿದೆ.

ಭಾರತವು ಸೋಂಕಿನ ವಿರುದ್ಧ ಹೋರಾಡುತ್ತಿದೆ

ಭಾರತವು ಸೋಂಕಿನ ವಿರುದ್ಧ ಹೋರಾಡುತ್ತಿದೆ

ಭಾರತದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಶುರುವಾಗಿದ್ದು, ಸೋಂಕು ಕಡಿಮೆ ಮಾಡಲು ದೇಶ ಹೋರಾಟ ನಡೆಸುತ್ತಿದೆ. ರೂಪಾಂತರಿ ಸೋಂಕು ತೀವ್ರ ತರದ ತೊಂದರೆಗಳನ್ನು ಉಂಟು ಮಾಡುತ್ತಿದೆ. ಕಫ, ವಾಸನೆ ಗ್ರಹಿಕೆ ಇಲ್ಲದಿರುವುದು, ರುಚಿ ಇಲ್ಲದಿರುವುದು ಪ್ರಮುಖ ಲಕ್ಷಣಗಳಾಗಿವೆ.

ಧ್ವನಿ ಮೇಲೆ ಸೋಂಕಿನ ಪರಿಣಾಮ

ಧ್ವನಿ ಮೇಲೆ ಸೋಂಕಿನ ಪರಿಣಾಮ

ಕೊರೊನಾ ಸೋಂಕಿನ ಅಧ್ಯಯನ ಕುರಿತು ಇತ್ತೀಚೆಗೆ ಲಭ್ಯವಾಗಿರುವ ವರದಿ ಪ್ರಕಾರ ಕೊರೊನಾ ಸೋಂಕು ತಗುಲಿದರೆ ನಿಮ್ಮ ಧ್ವನಿಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಒರಟಾದ ಧ್ವನಿ ಕೂಡ ಕೊರೊನಾ ಸೋಂಕಿನ ಒಂದು ಲಕ್ಷಣ ಎಂದು ವಿವರಿಸಿದ್ದಾರೆ.

ಒರಟು ಧ್ವನಿ ಜತೆಗಾಗುವ ಮತ್ತಷ್ಟು ಬದಲಾವಣೆಗಳು

ಒರಟು ಧ್ವನಿ ಜತೆಗಾಗುವ ಮತ್ತಷ್ಟು ಬದಲಾವಣೆಗಳು

ತಜ್ಞರು ಹೇಳುವ ಪ್ರಕಾರ ಒರಟು ಧ್ವನಿಯನ್ನು ಕೊರೊನಾ ಸೋಂಕಿನ ಆರಂಭಿಕ ಲಕ್ಷಣ ಎಂದು ಗುರುತಿಸಲಾಗಿದೆ. ಅಮೆರಿಕದ ತಜ್ಞರು ಕೊರೊನಾ ಸೋಂಕು ಆರಂಭದಲ್ಲಿ ನಿಮ್ಮ ಧ್ವನಿಯಲ್ಲಿ ಬಹಳಷ್ಟು ವ್ಯತ್ಯಾಸವಾಗಲಿದೆ, ಆದರೆ ವ್ಯಕ್ತಿಯಿಂದ ವ್ಯಕ್ತಿಗೆ ಲಕ್ಷಣದಲ್ಲಿ ಬದಲಾವಣ ಇರುತ್ತದೆ. ಹಾಗೆಯೇ ಕೊರೊನಾ ಸೋಂಕು ಶ್ವಾಸಕೋಶ ಮಾತ್ರವಲ್ಲದೆ ಧ್ವನಿ ಪೆಟ್ಟಿಗೆಗೂ ಸಮಸ್ಯೆ ಉಂಟುಮಾಡುತ್ತದೆ ಎಂದು ಹೇಳಲಾಗಿದೆ.

ನೀವು ಏನು ಮಾಡಬೇಕು

ನೀವು ಏನು ಮಾಡಬೇಕು

ನಿಮಗೆ ಈ ರೀತಿಯ ಯಾವುದೇ ಲಕ್ಷಣಗಳು ಕಂಡು ಬಂದರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಾಗೆಯೇ ಯಾರನ್ನೂ ಭೇಟಿಯಾಗಬೇಡಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಬೆಚ್ಚಗಿನ ನೀರಿನಲ್ಲಿ ಗಾರ್ಗ್ಲಿಂಗ್ ಮಾಡಿ, ಯಾವುದೇ ಕಾರಣಕ್ಕೂ ತಂಪಾದ ಆಹಾರ ಅಥವಾ ಪಾನೀಯವನ್ನು ಸೇವಿಸಬೇಡಿ.

ಕೊರೊನಾ ಸೋಂಕಿನ ಲಕ್ಷಣಗಳು

ಕೊರೊನಾ ಸೋಂಕಿನ ಲಕ್ಷಣಗಳು

ಜ್ವರ
ಕಫ
ಗಂಟಲು ನೋವು
ಶೀತ
ಎದೆನೋವು, ಉಸಿರಾಟದ ತೊಂದರೆ
ಆಯಾಸ

Recommended Video

RAT ಪರೀಕ್ಷೆಯಲ್ಲಿ ನೆಗೆಟಿವ್‌, RTPCR ಪರೀಕ್ಷೆ ಮಾಡಿಸದಿದ್ದರೂ ಪಾಸಿಟಿವ್‌.....! ಆರೋಗ್ಯ ಸಿಬ್ಬಂದಿ ಯಡವಟ್ಟು ಬಯಲು | Oneindia Kannada

English summary
Coronavirus symptoms in Voice: Data from millions of app contributors has shown that a hoarse voice can be a symptom of COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X