"ಏಳು ಮಂದಿ ಭಾರತೀಯರಿಗೆ ಕೊರೊನಾ ವೈರಸ್ ತಗಲಿರುವುದು ಪಕ್ಕಾ"

ನವದೆಹಲಿ, ಫೆಬ್ರವರಿ.19: ಜಪಾನ್ ಹಡಗಿನಲ್ಲಿ ಇರುವ ಏಳು ಮಂದಿ ಭಾರತೀಯರಿಗೆ ಕೊರೊನಾ ವೈರಸ್ ಹರಡಿರುವ ಬಗ್ಗೆ ಟೋಕಿಯೋದಲ್ಲಿ ಇರುವ ಭಾರತೀಯ ರಾಯಭಾರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಬುಧವಾರ ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ಮತ್ತೊಬ್ಬ ಭಾರತೀಯನಲ್ಲಿ ಮಾರಕ ಸೋಂಕು ಪತ್ತೆಯಾಗಿದೆ.

ಮಂಗಳವಾರ ನಡೆಸಿದ ವೈದ್ಯಕೀಯ ತಪಾಸಣೆ ವೇಳೆ ಒಟ್ಟು 88 ಪ್ರಯಾಣಿಕರಲ್ಲಿ ಸೋಂಕು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಇದರಿಂದ ಜಪಾನ್ ತೀರದಲ್ಲಿ ಇರುವ ಡೈಮೆಂಡ್ ಪ್ರಿನ್ಸಸ್ ಹಡಗಿನಲ್ಲಿ ಇರುವ ಒಟ್ಟು ಸೋಂಕಿತರ ಸಂಖ್ಯೆಯು 621ಕ್ಕೆ ಏರಿಕೆಯಾಗಿದೆ.

ಹಾಂಗ್ ಕಾಂಗ್ ನಿಂದ ಹೊರಟ ಡೈಮೆಂಡ್ ಪ್ರಿನ್ಸಸ್ ಎಂಬ ಹಡಗಿನಲ್ಲಿ 138 ಭಾರತೀಯರು ಸೇರಿದಂತೆ 3,711 ಮಂದಿ ಪ್ರಯಾಣಿಕರಿದ್ದು, ಜಪಾನ್ ನ ಯೊಕೊಹಮಾ ಬಂದರಿನಲ್ಲಿ ಹಡಗನ್ನು ತಡೆ ಹಿಡಿಯಲಾಗಿದೆ. ಈ ಹಡಗಿನಲ್ಲಿ ಇರುವ ಮತ್ತೊಬ್ಬ ಭಾರತೀಯನಿಗೆ ಸೋಂಕು ತಗಲಿದ್ದು, ಈವರೆಗೆ ಸೋಂಕಿತ ಭಾರತೀಯರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

 Coronavirus: Seven Indians Get Positive Result From Covid-19

ಹಡಗಿನಲ್ಲಿದ್ದ ಸೋಂಕಿತ ಭಾರತೀಯ ಆಸ್ಪತ್ರೆಗೆ ರವಾನೆ

ಡೈಮೆಂಡ್ ಪ್ರಿನ್ಸಸ್ ಹಡಗಿನಲ್ಲಿ 138 ಮಂದಿ ಭಾರತೀಯರ ಪೈಕಿ 7 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವ ಬಗ್ಗೆ ತಿಳಿದು ಬಂದಿದೆ. ಮಂಗಳವಾರ ಸೋಂಕು ಪತ್ತೆಯಾಗಿರುವ ಭಾರತೀಯನು ಸೇರಿದಂತೆ ಒಟ್ಟು 88 ಪ್ರಯಾಣಿಕರನ್ನು ಹಡಗಿನಿಂದ ಆಸ್ಪತ್ರೆಗೆ ರವಾನೆ ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು, ಹಡಗಿನಲ್ಲಿ ಕೊವಿಡ್-19 ಸೋಂಕಿತರು ಪತ್ತೆಯಾದ ಹಿನ್ನೆಲೆ ಎಲ್ಲ ಪ್ರಯಾಣಿಕರ ವೈದ್ಯಕೀಯ ತಪಾಸಣೆ ಬಳಿಕವಷ್ಟೇ ಜಪಾನ್ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಅಲ್ಲಿವರೆಗೂ ಹಡಗಿನಲ್ಲೇ ಎಲ್ಲ ಪ್ರಯಾಣಿಕರನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಫೆಬ್ರವರಿ.19ರ ನಂತರವಷ್ಟೇ ಹಡಗಿನಲ್ಲಿ ದಿಗ್ಬಂಧನವನ್ನು ತೆರವುಗೊಳಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+