ವಿದೇಶದಿಂದ ಭಾರತಕ್ಕೆ ಬರುವ ಪ್ರಯಾಣಿಕರು ಪಾಲಿಸಬೇಕಾದ ನಿಯಮಗಳು

ಬೆಂಗಳೂರು, ಮಾರ್ಚ್ 19: ಕೊರೊನಾ ವೈರಸ್ ವಿಶ್ವದಾದ್ಯಂತ ಹರಡಿದ್ದು, ಭಾರತದಲ್ಲಿ ಈಗಾಗಲೇ ಮೂರು ಬಲಿ ಪಡೆದಿದೆ.

ದೇಶದಲ್ಲಿ ಮತ್ತಷ್ಟು ಕೊರೊನಾ ಪ್ರಕರಣಗಳು ಹೆಚ್ಚದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಹೀಗಾಗಿ ವಿದೇಶದಿಂದ ಭಾರತಕ್ಕೆ ಬರುವ ಪ್ರಯಾಣಿಕರು ಈ ಮುಂಜಾಗ್ರತಾ ಕ್ರಮವನ್ನು ಅನುಸರಿಸಲೇಬೇಕು.

ಕೇಂದ್ರ ಆರೋಗ್ಯ ಇಲಾಖೆಯು ಈ ಸೂಚನೆಯನ್ನು ನೀಡಿದೆ. ನೀವು ಜನವರಿ 15ರ ಬಳಿಕ ಚೀನಾ ಅಥವಾ ವುಹಾನ್‌ನಿಂದ ದೇಶಕ್ಕೆ ಆಗಮಿಸಿದ್ದರೆ 14 ದಿನಗಳ ಕಾಲ ಗೃಹಬಂಧನದಲ್ಲಿರಬೇಕು.
ಮುಂದಿನ 14 ದಿನಗಳ ಕಾಲ ಕುಟುಂಬ ಸದಸ್ಯರನ್ನಾಗಲಿ ಅಥವಾ ಸ್ನೇಹಿತರು, ಬಂಧುಗಳನ್ನು ಭೇಟಿ ಮಾಡಬೇಡಿ
- ಕೆಮ್ಮುವಾಗ ನಿಮ್ಮ ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ
-ಪದೇ ಪದೇ ಸೋಪಿನಿಂದ ಕೈತೊಳೆಯುತ್ತಿರಿ
-ಕೆಮ್ಮು, ಕಫ, ಜ್ವರ ಇರುವ ವ್ಯಕ್ತಿಯಿಂದ ದೂರವಿರಿ

-ನಿಮಗೆ ಕೆಮ್ಮು, ಕಫ, ಜ್ವರವಿದ್ದರೆ ಉಸಿರಾಟದ ತೊಂದರೆ ಇದ್ದರೆ ದಯಮಾಡಿ ಮೊದಲೇ ನೀವು ಪ್ರಯಾಣಿಸಬೇಕಿರುವ ವೈಮಾನಿಕ ಸಂಸ್ಥೆಗೆ ಮಾಹಿತಿ ನೀಡಿ.

-ನಿಮಗೆ ಮೊದಲೇ ಕಫ, ಕೆಮ್ಮು, ಶೀತ ಜ್ವರವಿದ್ದರೆ ವಿಮಾನದ ಸಿಬ್ಬಂದಿಯ ಬಳಿ ಮಾಸ್ಕ್ ಕೇಳಿ ಪಡೆದುಕೊಳ್ಳಿ.
- ಕುಟುಂಬ ಸದಸ್ಯರು, ಸಹ ಪ್ರಯಾಣಿಕರಿಂದ ದೂರವಿರಿ
-ವಿಮಾನ ಸಿಬ್ಬಂದಿ ಹೇಳುವ ನಿಯಮವನ್ನು ಪಾಲಿಸಿ
-ಏರ್‌ಪೋರ್ಟ್‌ಗೆ ಬಂದ ಬಳಿಕ ನೀವೇ ಖುದ್ದಾಗಿ ತೆರಳಿ ಆರೋಗ್ಯ ಅಧಿಕಾರಿಯನ್ನು ಭೇಟಿ ಮಾಡಿ.
-ಒಂದೊಮ್ಮೆ ನೀವು ಕೊರೊನಾ ವೈರಸ್ ಇರುವ ಬೇರೆ ದೇಶದಿಂದ ಬಂದಿದ್ದರೆ, ನಿಮಗೆ ಕೆಮ್ಮು, ಶೀತ,ಕಫ, ಜ್ವರ ಇಂಥಹ ಯಾವುದೇ ಲಕ್ಷಣಗಳಿದ್ದರೆ +91-11-23978046ಗೆ ಕರೆ ಮಾಡಿ ಇದು ನಿಮ್ಮ ಸಹಾಯವಾಣಿ ಸಂಖ್ಯೆಯಾಗಿರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+