ಕೊರೊನಾ ಎಫೆಕ್ಟ್: ಹೋಳಿ ಬಣ್ಣಗಳ ಬೆಲೆ ದುಬಾರಿ ಸಾಧ್ಯತೆ

ಕೊರೊನಾ ವೈರಸ್ ನಿಂದಾಗಿ ಚೀನಾದಲ್ಲಿ ಮರಣ ಮೃದಂಗ ಮುಂದುವರೆದಿದೆ. ಕೊರೊನಾ ವೈರಸ್ ನಿಂದ ಚೀನಾದಲ್ಲಿ ವ್ಯವಹಾರ, ವಹಿವಾಟು ಬಹುತೇಕ ಸ್ಥಗಿತಗೊಂಡಿದೆ. ಪರಿಣಾಮ, ಈ ಬಾರಿಯ ಹೋಳಿ ಹಬ್ಬಕ್ಕೆ ಭಾರತೀಯರ ಜೇಬಿಗೆ ಕತ್ತರಿ ಬೀಳಲಿದೆ. ಯಾಕಂದ್ರೆ, ಹೋಳಿ ಬಣ್ಣಗಳ ಬೆಲೆಯಲ್ಲಿ 50% ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಕೊರೊನಾ ವೈರಸ್ ನಿಂದ ನಲುಗಿರುವ ಚೀನಾ ಬಹುತೇಕ ಉತ್ಪಾದನಾ ಘಟಕಗಳನ್ನು ನಿಲ್ಲಿಸಿದೆ. ಇದರಿಂದ ಭಾರತದಲ್ಲಿ ಹೋಳಿ ಬಣ್ಣಗಳು ಮತ್ತು ನೀರಿನ ಆಟಿಕೆಗಳ ಸರಬರಾಜಿನಲ್ಲಿ ಕೊರತೆ ಉಂಟಾಗಿದ್ದು, ಸಹಜವಾಗಿ ಬಣ್ಣಗಳು ಮತ್ತು ಆಟಿಕೆಗಳ ಬೆಲೆ ಜಾಸ್ತಿ ಆಗಲಿದೆ.

ಭಾರತದಲ್ಲಿ ಸುಮಾರು 90% ಮಂದಿ ಚೀನಾದ ಹೋಳಿ ಬಣ್ಣಗಳು ಮತ್ತು ನೀರಿನ ಆಟಿಕೆಗಳನ್ನು ಬಳಸುತ್ತಾರೆ. ಅಸಲಿಗೆ, ಭಾರತಕ್ಕೆ ಹೋಳಿ ಬಣ್ಣಗಳು ಮತ್ತು ಆಟಿಕೆಗಳನ್ನು ಅತಿ ಹೆಚ್ಚು ರಫ್ತು ಮಾಡುವ ದೇಶ ಚೀನಾ. ಆದರೆ ಈ ಬಾರಿ ಕೊರೊನಾ ವೈರಸ್ ನಿಂದಾಗಿ ಚೀನಾ ರಫ್ತು ಮಾಡುವ ಉತ್ಪನ್ನಗಳ ಮೇಲೆ ಹೊಡೆತ ಬಿದ್ದಿರುವುದರಿಂದ ಎಲ್ಲವೂ ದುಬಾರಿಯಾಗಲಿದೆ.

Coronavirus May Make Holi Colours Costlier By 50 Percent This Year

ಚೀನಾದ ಆಟಿಕೆ ಮತ್ತು ಬಣ್ಣಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಇದೆ. ಮುಂಬೈ ಒಂದರಲ್ಲೇ 20-25 ರಷ್ಟು ಆಮದುದಾರರು 300-500 ರೂಪಾಯಿ ಬೆಲೆಯ ಸುಮಾರು ಐದು ಲಕ್ಷದಷ್ಟು ಫ್ಯಾನ್ಸಿ ವಾಟರ್ ಗನ್ ಪೀಸ್ ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+