Breaking: ಭಾರತದಲ್ಲಿ ಒಂದೇ ದಿನ 7240 ಮಂದಿಗೆ ಕೊರೊನಾ ವೈರಸ್!

ನವದೆಹಲಿ, ಜೂನ್ 9: ಭಾರತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಮತ್ತೆ ಮತ್ತೆ ತಾನಿರುವುದನ್ನು ಅಂಕಿ-ಸಂಖ್ಯೆಗಳ ಮೂಲಕವೇ ಎಚ್ಚರಿಸುತ್ತಿದೆ. ದೇಶದಲ್ಲಿ ನಿರಂತರ ಎರಡನೇ ದಿನವೂ ಸೋಂಕಿತರ ಸಂಖ್ಯೆಯಲ್ಲಿ ಶೇ.40ರಷ್ಟು ಏರಿಕೆಯಾಗಿದೆ.

ಮೂರು ತಿಂಗಳ ನಂತರ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಸತತ ಎರಡನೇ ದಿನವೂ ಶೇ.40ರಷ್ಟು ಹೆಚ್ಚಳವಾಗಿದ್ದು, ಸೋಂಕಿತರ ಸಂಖ್ಯೆಯು 7,000 ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 7240 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ.

ಇದೇ ಅವಧಿಯಲ್ಲಿ 8 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದರೆ, 3,591 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಒಟ್ಟು ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ 43,197,522ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ, ಇದುವರೆಗೂ 42,640,301 ಸೋಂಕಿತರು ಗುಣಮುಖರಾಗಿದ್ದು, 524,723 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 32,498ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ಕೋವಿಡ್-19 ಹೊಸ ದಾಖಲೆ

ಭಾರತದಲ್ಲಿ ಕೋವಿಡ್-19 ಹೊಸ ದಾಖಲೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಕಡಿಮೆ ಆಯ್ತು ಎನ್ನುವಷ್ಟರಲ್ಲೇ ಮಹಾಮಾರಿ ಆಟ ಶುರು ಮಾಡಿದೆ. ಕಳೆದ 95 ದಿನಗಳ ನಂತರದಲ್ಲಿ ಕೋವಿಡ್-19 ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 7,000ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಿಲಿಸಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 32,498ಕ್ಕೆ ಏರಿಕೆ ಆಗುವಂತೆ ಮಾಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಮಾಹಾರಾಷ್ಟ್ರದಲ್ಲಿ ಹೆಚ್ಚಿದ ಮಹಾಮಾರಿ ಹಾವಳಿ

ಮಾಹಾರಾಷ್ಟ್ರದಲ್ಲಿ ಹೆಚ್ಚಿದ ಮಹಾಮಾರಿ ಹಾವಳಿ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಆರಂಭದಿಂದಲೂ ಮಹಾರಾಷ್ಟ್ರವನ್ನು ಬೆನ್ನು ಬಿಡದ ಭೂತದಂತೆ ಕಾಡುತ್ತಿದೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರವೊಂದರಲ್ಲೇ 2701 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿದೆ. ಇದು ಜನವರಿ 25ರ ನಂತರ ರಾಜ್ಯದಲ್ಲಿ ವರದಿ ಆಗಿರುವ ಗರಿಷ್ಠ ಸೋಂಕಿತರ ಸಂಖ್ಯೆಯಾಗಿದೆ. ಈ ಪೈಕಿ ಶೇ.42ರಷ್ಟು ಹೊಸ ಪ್ರಕರಣಗಳು ಮುಂಬೈ ನಗರವೊಂದರಲ್ಲೇ ಪತ್ತೆಯಾಗುತ್ತಿವೆ. ಇದರ ಮಧ್ಯೆ ರಾಜ್ಯದ ಪಶ್ಚಿಮ ಭಾಗದಲ್ಲಿ ಒಂದು ಕೊರೊನಾವೈರಸ್ ಸೋಂಕಿನ ಓಮಿಕ್ರಾನ್ ರೂಪಾಂತರದ B.A.5 ತಳಿಯ ಪ್ರಕರಣ ವರದಿಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕರುನಾಡಿನಲ್ಲೂ ಕೋವಿಡ್-19 ಅಪಾಯ ತಪ್ಪಿದ್ದಲ್ಲ

ಕರುನಾಡಿನಲ್ಲೂ ಕೋವಿಡ್-19 ಅಪಾಯ ತಪ್ಪಿದ್ದಲ್ಲ

ಕರ್ನಾಟಕದಲ್ಲಿ ಕೊರೊನಾವೈರಸ್ ಅಪಾಯ ತಪ್ಪಿದ್ದಲ್ಲ ಎನ್ನುವುದನ್ನು ಪ್ರಕರಣಗಳ ಸಂಖ್ಯೆಯು ಪದೇ ಪದೆ ಎಚ್ಚರಿಸುತ್ತಿವೆ. ಕಳೆದ 24 ಗಂಟೆಗಳಲ್ಲೇ 376 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 231 ಸೋಂಕಿತರು ಗುಣಮುಖರಾಗಿದ್ದಾರೆ. ಬುಧವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 3954313 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 3911582 ಸೋಂಕಿತರು ಗುಣಮುಖರಾಗಿದ್ದು, 40,066 ಜನರು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಇದರ ಹೊತರಾಗಿ ರಾಜ್ಯದಲ್ಲಿ 2623 ಸಕ್ರಿಯ ಪ್ರಕರಣಗಳಿವೆ.

ದೇಶದಲ್ಲಿ ಹೇಗಿತ್ತು ಲಕ್ಷದಿಂದ ಲಕ್ಷಕ್ಕೆ ಪ್ರಕರಣಗಳ ಸಂಖ್ಯೆ?

ದೇಶದಲ್ಲಿ ಹೇಗಿತ್ತು ಲಕ್ಷದಿಂದ ಲಕ್ಷಕ್ಕೆ ಪ್ರಕರಣಗಳ ಸಂಖ್ಯೆ?

ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಏಕಾಏಕಿ ಏರಿಕೆಯಾಗದ ಉದಾಹರಣೆಗಳನ್ನೂ ಭಾರತ ಈ ಹಿಂದೆ ಕಂಡಿದೆ. ದೇಶದಲ್ಲಿ 2020ರ ಆಗಸ್ಟ್ 7ರಂದು 20 ಲಕ್ಷ ಕೋವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದವು. ಅಲ್ಲಿಂದ ಸೋಂಕಿತರ ಸಂಖ್ಯೆಯು ಗಣನೀಯವಾಗಿ ಏರಿಕೆ ಆಯಿತು. ಆಗಸ್ಟ್ 23ರ ಹೊತ್ತಿಗೆ ಈ ಸಂಖ್ಯೆ 30 ಲಕ್ಷ ತಲುಪಿತು. ಸೆಪ್ಟಂಬರ್ 5ರ ವೇಳೆಗೆ 40 ಲಕ್ಷವಾದರೆ, ಅದೇ ಸೆಪ್ಟಂಬರ್ 16ರ ವೇಳೆಗೆ 50 ಲಕ್ಷದ ಗಡಿ ದಾಟಿತು. ಸೆಪ್ಟಂಬರ್ 28ಕ್ಕೆ ಸೋಂಕಿತ ಪ್ರಕರಣಗಳ ಸಂಖ್ಯೆ 60 ಲಕ್ಷದ ಗಡಿ ದಾಟಿತು. ಅಕ್ಟೋಬರ್ 11ಕ್ಕೆ 70 ಲಕ್ಷ ಸೋಂಕಿತ ಪ್ರಕರಣಗಳಾದರೆ, ಆ ಸಂಖ್ಯೆಯು ಅಕ್ಟೋಬರ್ 29ರ ಹೊತ್ತಿಗೆ 80 ಲಕ್ಷ ತಲುಪಿತು. ಅದೇ ರೀತಿ ನವೆಂಬರ್ 20ರ ವೇಳೆಗೆ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 90 ಲಕ್ಷ ತಲುಪಿದರೆ, ಡಿಸೆಂಬರ್ 19ರ ಹೊತ್ತಿಗೆ ಒಂದು ಕೋಟಿಯ ಗಡಿ ದಾಟಿತು.

2021ರ ಮೇ 4ರ ವೇಳೆಗೆ ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯು ಒಂದು ಕೋಟಿಯಿಂದ ಎರಡು ಕೋಟಿಗೆ ಜಿಗಿಯಿತು. ಅದೇ ರೀತಿ 2021ರ ಜೂನ್ 23ರ ಹೊತ್ತಿಗೆ ಸೋಂಕಿತ ಪ್ರಕರಣಗಳ ಸಂಖ್ಯೆಯು ಮೂರು ಕೋಟಿ ಗಡಿ ಮುಟ್ಟಿತು ಎಂಬುದನ್ನು ಅಂಕಿ-ಸಂಖ್ಯೆಗಳು ವಿವರಿಸುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+