• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಾಕ್ ಡೌನ್ ತೆರವು ಸನ್ನಿಹಿತ? ಆರಂಭಗೊಂಡ ಟಿಕೆಟ್ ಬುಕ್ಕಿಂಗ್

|

ನವದೆಹಲಿ, ಏಪ್ರಿಲ್ 2: ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿರುವ ದೇಶಾದ್ಯಂತ ಲಾಕ್ ಡೌನ್, ಏಪ್ರಿಲ್ ಹದಿನಾಲ್ಕರಂದೇ ಮುಗಿಯಲಿದೆಯೇ ಎನ್ನುವ ಪ್ರಶ್ನೆಗೆ ಆಶಾದಾಯಕ ಎನ್ನಬಹುದಾದ ಸುದ್ದಿಯೊಂದು ಹೊರಬಿದ್ದಿದೆ.

ಏಪ್ರಿಲ್ 14ರಂದು ಲಾಕ್ ಡೌನ್ ಮುಗಿಯುವ ಯಾವ ಸಾಧ್ಯತೆಗಳೂ ಇಲ್ಲ, ಮತ್ತೆ ಕನಿಷ್ಠ ಇದು ಮಾಸಾಂತ್ಯದವರೆಗಾದರೂ ಮುಂದುವರಿಯಲಿದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯ ವಿಷಯವಾಗಿತ್ತು.

ಕೊರೊನಾ: ನಾಡಿನ ಶಕ್ತಿ ಕ್ಷೇತ್ರ ಯಕ್ಷಿ ಚೌಡೇಶ್ವರಿ ಸನ್ನಿಧಾನದಲ್ಲಿ ಬಂದ ಸೂಚನೆ

ಇವೆಲ್ಲದರ ನಡುವೆ, ರೈಲ್ವೆ ಮತ್ತು ಹಲವು ವಿಮಾನಯಾನ ಸಂಸ್ಥೆಗಳು ಮುಂಗಡ ಸೀಟು ಬುಕ್ಕಿಂಗ್ ಅನ್ನು ಆರಂಭಿಸಿರುವುದರಿಂದ, ಲಾಕ್ ಡೌನ್ ಅಂತ್ಯಗೊಳ್ಳುವ ಸಾಧ್ಯತೆ ಗೋಚರಿಸಲಾರಂಭಿಸಿದೆ.

ಏಪ್ರಿಲ್ 15ರಿಂದ ಸೀಟು ಮುಂಗಡ ಕಾಯ್ದಿರಿಸುವಿಕೆಯನ್ನು ಸ್ವೀಕರಿಸಲು ಭಾರತೀಯ ರೈಲ್ವೆ ಸೇರಿದಂತೆ, ಹಲವು ವಿಮಾನಯಾನ ಸಂಸ್ಥೆಗಳು ಆರಂಭಿಸಿದೆ.

ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾದ ಬಳಿಕ ಎಲ್ಲಾ ರೈಲು ಸಂಚಾರವನ್ನು IRCTC ರದ್ದುಗೊಳಿಸಿತ್ತು. ಈಗ, ಆನ್ಲೈಲ್ ಮೂಲಕ, ಮುಂಗಡ ಟಿಕೆಟ್ ಬುಕ್ ಮಾಡಬಹುದಾಗಿದೆ.

ಪ್ಯಾಸೆಂಜರ್ ರೈಲು ಸಂಚಾರ ಸಂಪೂರ್ಣ ಬಂದ್ ಆಗಿದ್ದರೂ, ಗೂಡ್ಸ್ ರೈಲು ಸೇವೆಯಲ್ಲಿ ವ್ಯತ್ಯಯವಾಗಿರಲಿಲ್ಲ. ಮಾರ್ಚ್ 31ರ ತನಕ ದೇಶದಲ್ಲಿ ಪ್ರಯಾಣಿಕರ ರೈಲು ಸಂಚಾರವನ್ನು ರದ್ದುಗೊಳಿಸಿ ಮೊದಲು ಆದೇಶ ಹೊರಡಿಸಲಾಗಿತ್ತು, ನಂತರ ಅದನ್ನು ಏಪ್ರಿಲ್ 14ರವರೆಗೆ ವಿಸ್ತರಿಸಲಾಗಿತ್ತು.

English summary
Coronavirus: Indian Railways And Other Private Airline Companies Started Advance Booking WEF Apr 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X