ಭಾರತದಲ್ಲಿ 24 ಗಂಟೆಗಳಲ್ಲಿ 704 ಕೊರೊನಾ ಸೋಂಕಿತ ಪ್ರಕರಣ

ನವದೆಹಲಿ, ಏಪ್ರಿಲ್ 6: ಭಾರತದಲ್ಲಿ 24 ಗಂಟೆಗಳಲ್ಲಿ 704 ಕೊರೊನಾ ಹೊಸ ಪ್ರಕರಣಗಳು ದಾಖಲಾಗಿವೆ.

24 ಗಂಟೆಯಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ. 291 ಜನ ಸೋಂಕಿನಿಂದ ಗುಣ ಮುಖರಾಗಿದ್ದಾರೆ. 1,445 ಕೇಸುಗಳು ಜಮಾತ್‍ಗೆ ಸಂಬಂಧಿಸಿದ್ದು, ತಬ್ಲಿಘಿಗಳು ಮತ್ತು ಅವರ ಸಂಪರ್ಕದಲ್ಲಿರುವ 25,500 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ 1,750 ತಬ್ಲಿಘಿ ಕಾರ್ಯಕರ್ತರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಇದೇ ವೇಳೆ 5 ಲಕ್ಷ ರ‍್ಯಾಪಿಡ್ ಟೆಸ್ಟ್ ಕಿಟ್‌ಗಳಿಳಿಗೆ ಆರ್ಡರ್ ಮಾಡಲಾಗಿದ್ದು, 2.5 ಲಕ್ಷ ಕಿಟ್‌ಗಳು ಈ ತಿಂಗಳಲ್ಲಿ ಬರಲಿವೆ ಅಂತ ಐಸಿಎಂಆರ್ ಹೇಳಿದೆ. ಮುಂಬೈನ ವೋಕ್ಹಾರ್ಡ್ ಆಸ್ಪತ್ರೆಯ 26 ನರ್ಸ್ ಗಳು, ಮೂವರು ವೈದ್ಯರಿಗೆ ಕೊರೊನಾ ಸೋಂಕಾಗಿದ್ದು, ಆಸ್ಪತ್ರೆಯನ್ನೇ ಬಂದ್ ಮಾಡಲಾಗಿದೆ.

Coronavirus India Sees Record 704 New Cases In 24 Hours

ಕೊರೊನಾಗೆ ಬಲಿಯಾದವರ ಪೈಕಿ ಶೇ.63ರಷ್ಟು 60 ವರ್ಷ ಮೇಲ್ಪಟ್ಟವರೇ ಆಗಿದ್ದಾರೆ. ಸೋಂಕಿತರ ಪೈಕಿ ಶೇ.76 ರಷ್ಟು ಪುರುಷರು, ಶೇ.24 ರಷ್ಟು ಮಹಿಳೆಯರು ಇದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವಿವರ ನೀಡಿದೆ.

ಈ ಮಧ್ಯೆ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್, ಕೊರೊನಾ ಸೋಂಕಿನಿಂದ ಚೇತರಿಕೆ ಕಂಡಿದ್ದು ಡಿಸ್ಚಾರ್ಜ್ ಆಗಿದ್ದಾರೆ. 6ನೇ ಬಾರಿ ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.

ಕೊರೊನಾ ವೈರಸ್ ಎರಡು ಹಾಗೂ ಮೂರನೇ ಹಂತದಲ್ಲಿ ಅತ್ಯಧಿಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಶೇ.73ರಷ್ಟು ಪುರುಷರು, ಶೇ.27ರಷ್ಟು ಮಹಿಳೆಯರು ಕೊರೊನಾಗೆ ತುತ್ತಾಗಿದ್ದಾರೆ.

ಶೇ.63ರಷ್ಟು ಮಂದಿ 60ವರ್ಷಕ್ಕಿಂತ ಮೇಲ್ಪಟ್ಟವರು, ಶೇ.30 ರಷ್ಟು ಮಂದಿ 40-60 ವರ್ಷ ಆಸುಪಾಸಿನಲ್ಲಿರುವವರು, ಶೇ.7ರಷ್ಟು ಮಂದಿ 40 ವರ್ಷಕ್ಕಿಂತ ಕಡಿಮೆ ಇರುವವರಲ್ಲಿ ಹೆಚ್ಚಾಗಿ ಕೊರೊನಾ ಕಾಣಿಸಿಕೊಂಡಿದೆ. ಒಟ್ಟು 4 ಸಾವಿರ ಕೊರೊನಾ ಪ್ರಕರಣಗಳಲ್ಲಿ 1445 ಪ್ರಕರಣಗಳು ತಬ್ಲಿಘಿ ಜಮಾತ್ ಕಾರ್ಯಕರ್ತರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+