ಭಾರತದಲ್ಲಿ ಯುದ್ಧಗಳ ಸಾವಿಗಿಂತಲೂ ಕೊರೊನಾ ಸಾವಿನ ಸಂಖ್ಯೆ ಹೆಚ್ಚು
ನವದೆಹಲಿ, ಸೆಪ್ಟೆಂಬರ್ 25: ಭಾರತದಲ್ಲಿ ಕೊರೊನಾ ವೈರಸ್ ಸಾವಿನ ಸಂಖ್ಯೆ 92,290ಕ್ಕೆ ಏರಿದೆ. ಪ್ರತಿದಿನ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ನೋಡಿದಾಗ ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಕೋವಿಡ್ ಸಂಬಂಧಿ ಮರಣಗಳ ಪ್ರಮಾಣ ಒಂದು ಲಕ್ಷ ದಾಟುವ ಸಾಧ್ಯತೆ ಇದೆ.
ಕೋವಿಡ್‌ನಿಂದ ಮೃತಪಟ್ಟ ಜನರ ಸಂಖ್ಯೆಯು ಭಾರತ ಇದುವರೆಗೆ ನಡೆಸಿದ ಪ್ರಮುಖ ಯುದ್ಧಗಳಲ್ಲಿ ಉಂಟಾದ ಜೀವ ಹಾನಿಗಿಂತಲೂ ಅಧಿಕ. 1947, 1961-1962, 1965, 1971 ಮತ್ತು 1999ರ ಯುದ್ಧಗಳಲ್ಲಿ ಮೃತಪಟ್ಟ ಸೈನಿಕರ ಸಂಖ್ಯೆಗಿಂತ ಏಳೂವರೆ ಪಟ್ಟು ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಕೋವಿಡ್ ಸಂಖ್ಯೆ ಅತ್ಯಧಿಕವಾಗಿರುವ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮರಣ ಪ್ರಮಾಣ ಕಡಿಮೆ ಇದೆ. ಆದರೆ ಒಟ್ಟಾರೆ ಸಂಖ್ಯೆಯನ್ನು ನೋಡಿದಾಗ ಭಾರತವು ಸೋಂಕಿತರು ಹಾಗೂ ಕೊರೊನಾ ವೈರಸ್ ಮರಣ ಸಂಖ್ಯೆಯಲ್ಲಿ ಅಮೆರಿಕವನ್ನು ಹಿಂದಿಕ್ಕುವ ಭೀತಿ ಮೂಡಿಸಿದೆ.

ಅಮೆರಿಕದಲ್ಲಿ ಕೊರೊನಾ ವೈರಸ್ ಸಾವಿನ ಸಂಖ್ಯೆ ಎರಡು ಲಕ್ಷ ದಾಟಿದೆ. ಇದು ಜಗತ್ತಿನಲ್ಲಿಯೇ ಅತ್ಯಧಿಕ. ಜಗತ್ತಿನ ಜನಸಂಖ್ಯೆಯಲ್ಲಿ ಅಮೆರಿಕವು ಶೇ 4ರಷ್ಟು ಪಾಲು ಹೊಂದಿದೆ. ಆದರೆ ಕೊರೊನಾ ವೈರಸ್ ಸಂಬಂಧಿ ಮರಣ ಸಂಖ್ಯೆಯನ್ನು ಲೆಕ್ಕಹಾಕಿದರೆ ಅದು ವಿಶ್ವದ ಕೊರೊನಾ ವೈರಸ್ ಮರಣ ಸಂಖ್ಯೆಯ ಶೇ 20ರಷ್ಟಿದೆ.












Click it and Unblock the Notifications