Coronavirus: ITBP ದಿಗ್ಬಂಧನದಲ್ಲಿ ಇರಿಸಿದ್ದ 200 ಭಾರತೀಯರ ಬಿಡುಗಡೆ

ನವದೆಹಲಿ, ಫೆಬ್ರವರಿ.17: ಇಂಡೋ-ಟಿಬೆಟಿಯನ್ ಭದ್ರತಾ ಪಡೆಯ ದಿಗ್ಬಂಧನದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ 406 ಮಂದಿ ಭಾರತೀಯರಿಗೆ ಕೊರೊನಾ ವೈರಸ್ ಇಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸೋಮವಾರ 200 ಮಂದಿಯ ಮೊದಲ ತಂಡವನ್ನು ದಿಗ್ಬಂಧನದಿಂದ ಬಿಡುಗಡೆ ಮಾಡಲಾಯಿತು.

ನವದೆಹಲಿಯ ಹೊರಭಾಗದ ಚೌಲ್ವಾ ಪ್ರದೇಶದಲ್ಲಿ ಇಂಡೋ-ಟಿಬೆಟ್ ಗಡಿ ಭದ್ರತಾ ಸಿಬ್ಬಂದಿಯ ದಿಗ್ಬಂಧನದಲ್ಲಿ ಇರಿಸಿದ್ದ ಭಾರತೀಯರಿಗೆ ನಿರಂತರ ಚಿಕಿತ್ಸೆ ನೀಡಲಾಗಿತ್ತು. ನಂತರದಲ್ಲಿ ಕಳೆದ ಭಾನುವಾರ 406 ಮಂದಿಯ ರಕ್ತ ತಪಾಸಣೆ ನಡೆಸಲಾಯಿತು. ಈ ವೇಳೆ 406 ಮಂದಿಯಲ್ಲಿ ಸೋಂಕು ಪತ್ತೆಯಾಗಿರಲಿಲ್ಲ.

ಫೆಬ್ರವರಿ ಮೊದಲ ವಾರ ಚೀನಾದಲ್ಲಿದ್ದ 650 ಭಾರತೀಯರು ಹಾಗೂ 7 ಮಂದಿ ಮಾಲ್ಡೀವ್ಸ್ ಪ್ರಜೆಗಳನ್ನು ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ವಾಪಸ್ ಕರೆ ತರಲಾಗಿತ್ತು. ನಂತರ ನುರಿತ ವೈದ್ಯರ ತಂಡ ಚೌಲ್ವಾದಲ್ಲಿ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು.

Coronavirus: 200 Peoples First Batch Released From ITBP Camp In Delhi

ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆ ಸೂಚನೆಗಳ ಮೇರೆಗೆ 17 ದಿನಗಳ ಕಾಲ ದಿಗ್ಬಂಧನದಲ್ಲಿ ಇರಿಸಿರುವ 406 ಮಂದಿ ಭಾರತೀಯರನ್ನು ಸೋಮವಾರ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಈ ಪೈಕಿ 200 ಮಂದಿಯ ಆರೋಗ್ಯ ಸ್ಥಿರವಾಗಿದ್ದು, ಮೊದಲ ತಂಡವನ್ನು ಬಿಡುಗಡೆ ಮಾಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+