ಭಾರತಕ್ಕೆ ಶೀಘ್ರ ಕೊರೊನಾ ಲಸಿಕೆ, ಆದರೆ ಎಲ್ಲರಿಗೂ ಕಡ್ಡಾಯವಲ್ಲ

ಬೆಂಗಳೂರು, ಡಿಸೆಂಬರ್ 19: ಭಾರತಕ್ಕೆ ಶೀಘ್ರ ಕೊರೊನಾ ಲಸಿಕೆ ದೊರೆಯಲಿದ್ದು, ಲಸಿಕೆ ಎಲ್ಲರಿಗೂ ಕಡ್ಡಾಯವಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಕೊರೊನಾದಿಂದ ಗುಣಮುಖವಾದವರೂ ಲಸಿಕೆ ತೆಗೆದುಕೊಳ್ಳಬೇಕು ಮತ್ತು ಲಸಿಕೆಯ 2ನೇ ಡೋಸ್ ತೆಗೆದುಕೊಂಡ 2 ವಾರಗಳ ನಂತರ ದೇಹದಲ್ಲಿ ಕೊರೊನಾ ವಿರುದ್ಧ ಹೋರಾಡುವ ಪ್ರತಿಕಾಯಗಳು ಅಭಿವೃದ್ಧಿಯಾಗತೊಡಗುತ್ತದೆ.

ಕೊರೊನಾ ಲಸಿಕೆಯ ಕುರಿತು ದೇಶದಾದ್ಯಂತ ಸಾಕಷ್ಟು ಊಹಾಪೋಹಗಳು ಹಾಗೂ ಸುಳ್ಳು ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.

ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯ ಪಲ್ಮೊನೊಲಜಿ ವಿಭಾಗದ ಮುಖ್ಯಸ್ಥ ಡಾ. ಸತ್ಯನಾರಾಯಣ ಮೈಸೂರು ಅವರು ಮಾತನಾಡಿ, ಲಸಿಕೆ ಕೇಂದ್ರಗಳಿಂದಲೇ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಾಗಿರುವ ಸಾಧ್ಯತೆಗಳಿವೆ. ಲಸಿಕೆ ತೆಗೆದುಕೊಳ್ಳುವ ವೇಳೆ ಯಾವುದೇ ವ್ಯಕ್ತಿಗಳಲ್ಲಿ ಲಕ್ಷಣಗಳು ಇದ್ದಿದ್ದೇ ಆದರೆ, ಅವರ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

ಈಗ ದೇಶದಲ್ಲಿ ಆರು ಕೊರೊನಾ ಲಸಿಕೆಗಳ ಟ್ರಯಲ್ ನಡೆಯುತ್ತಿದೆ. ಅವು-ಭಾರತ್ ಬಯೋಟೆಕ್'ನ ಕೋವ್ಯಾಕ್ಸಿನ್, ಜೈಡಸ್ ಕ್ಯಾಡಿಲಾ ಲಸಿಕೆ, ಜೆನೋವಾ ಲಸಿಕೆ, ಆಕ್ಸ್'ಫರ್ಡ್'ನ ಕೋವಿಶೀಲ್ಡ್, ರಷ್ಯಾದ ಸ್ಪುಟ್ನಿಕ್-5, ಬಯೋಲಾಜಿಕಲ್ ಇ.ಲಿ. ಲಸಿಕೆಯಾಗಿವೆ.

ಲಸಿಕೆ ತೆಗೆದುಕೊಂಡ ಮಹಿಳೆಯರಿಗೊಂದು ಸೂಚನೆ

ಲಸಿಕೆ ತೆಗೆದುಕೊಂಡ ಮಹಿಳೆಯರಿಗೊಂದು ಸೂಚನೆ

ಲಸಿಕೆ ತೆಗೆದುಕೊಂಡ 2 ತಿಂಗಳುಗಳ ಕಾಲ ಗರ್ಭಿಣಿಯಾಗದಂತೆ ಸೂಚನೆ ನೀಡಲಾಗುತ್ತಿದೆ. ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡಿದ್ದೇ ಆದರೆ, ಆ ಲಸಿಕೆಯು ಹುಟ್ಟಲಿರುವ ಮಗು ಹಾಗೂ ತಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಲಸಿಕೆ ಪಡೆದ ಮಹಿಳೆಯರು ಕೆಲ ತಿಂಗಳ ಕಾಲ ಗರ್ಭ ಧರಿಸಕೂಡದು
ಈ ನಡುವೆ ಲಸಿಕೆ ಕುರಿತು ತಜ್ಞರು ಹೇಳಿಕೆ ನೀಡಿದ್ದು, ಲಸಿಕೆ ತೆಗೆದುಕೊಂಡ ಬಳಿಕ ಮಹಿಳೆಯರು ಕೆಲ ತಿಂಗಳುಗಳ ಕಾಲ ಗರ್ಭ ಧರಿಸದಂತೆ ನೋಡಿಕೊಳ್ಳಬೇಕು. ಬ್ರಿಟನ್ ನಲ್ಲಿ ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡಲಾಗುತ್ತಿಲ್ಲ.
ನಿಮ್ಮಿಂದ ಬೇರೆಯವರಿಗೆ ಕೊರೊನಾ ಹರಡಬಾರದೆಂದರೆ ಹೀಗೆ ಮಾಡಿ

ನಿಮ್ಮಿಂದ ಬೇರೆಯವರಿಗೆ ಕೊರೊನಾ ಹರಡಬಾರದೆಂದರೆ ಹೀಗೆ ಮಾಡಿ

ಲಸಿಕೆಯಿಂದ ನಮಗೆ ಪ್ರಯೋಜನವಾಗಬೇಕು ಹಾಗೂ ನಮ್ಮಿಂದ ಬೇರೆಯವರಿಗೆ ಕೊರೊನಾ ಹರಡಬಾರದು ಅಂದರೆ 28 ದಿನಗಳ ಅಂತರದಲ್ಲಿ ಎರಡು ಡೋಸ್ ತೆಗೆದುಕೊಳ್ಳಬೇಕು. ದೇಶದಲ್ಲಿ ಲಸಿಕೆಯ ಟ್ರಯಲ್'ಗಳು ಇನ್ನೂ ಬೇರೆ ಬೇರೆ ಹಂತಗಳಲ್ಲಿವೆ. ಲಸಿಕೆಯ ದಕ್ಷತೆ ಹಾಗೂ ಸುರಕ್ಷತೆ ಸಾಬೀತಾದ ನಂತರವೇ, ಸಾಧ್ಯವಾದಷ್ಟು ಬೇಗ, ಸರ್ಕಾರ ಲಸಿಕೆ ಬಿಡುಗಡೆ ಮಾಡಲಿದೆ.

ಲಸಿಕೆಯಿಂದ ಅಡ್ಡಪರಿಣಾಮ

ಲಸಿಕೆಯಿಂದ ಅಡ್ಡಪರಿಣಾಮ

ಎಲ್ಲಾ ಲಸಿಕೆಗಳಿಂದಲೂ ಇರುವಂತೆ ಕೊರೊನಾ ಲಸಿಕೆಯಿಂದಲೂ ಕೆಲವರಲ್ಲಿ ಸಣ್ಣ ಜ್ವರ, ನೋವು ಇತ್ಯಾದಿ ಅಡ್ಡಪರಿಣಾಮಗಳು ಉಂಟಾಗಬಹುದು ಎಂದು ತಿಳಿಸಿದೆ.

ಯಾರು ಈ ಲಸಿಕೆ ತೆಗೆದುಕೊಳ್ಳಬಹುದು

ಯಾರು ಈ ಲಸಿಕೆ ತೆಗೆದುಕೊಳ್ಳಬಹುದು

ಮೊದಲಿಗೆ ಆರೋಗ್ಯ ಸೇವೆಯಲ್ಲಿರುವವರು, ಹೈ-ರಿಸ್ಕ್ ವರ್ಗದವರು ಹಾಗೂ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು. ಕೊರೋನಾ ಲಕ್ಷಣ ಇರುವವರಿಗೆ ಲಸಿಕೆ ನೀಡಲಾಗುವುದಿಲ್ಲ. ಆನ್'ಲೈನ್ ನಲ್ಲಿ ನೋಂದಣಿ ಮಾಡಿಕೊಂಡವರ ಮೊಬೈಲ್'ಗೆ ಲಸಿಕೆ ನೀಡುವ ಸ್ಥಳ, ಸಮಯ ಮುಂದಾದ ವಿವರಗಳ ಸಂದೇಶ ಕಳುಹಿಸಲಾಗುತ್ತದೆ. ಎಂದು ಹೇಳಿದೆ.

ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ ಮುಂತಾದ ಸಮಸ್ಯೆಗಳಿಗೆ ಔಷಧ ಸೇವಿಸುತ್ತಿರುವವರೂ ಲಸಿಕೆ ತೆಗೆದುಕೊಳ್ಳಬಹುದು. ವಾಸ್ತವವಾಗಿ ಇವರು ಕೊರೋನಾದಿಂದ ಹೆಚ್ಚು ಅಪಾಯಕ್ಕೆ ತುತ್ತಾಗುವುದರಿಂದ ಲಸಿಕೆ ತೆಗೆದುಕೊಳ್ಳುವುದೇ ಒಳ್ಳೆಯದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+