ಮತ್ತಷ್ಟು ಮಾಹಿತಿ ನೀಡಿ: ಸೆರಮ್, ಭಾರತ್ ಬಯೋಟೆಕ್‌ಗೆ ಸೂಚನೆ
ನವದೆಹಲಿ, ಡಿಸೆಂಬರ್ 9: ಭಾರತದಲ್ಲಿ ಕೊರೊನಾ ವೈರಸ್ ಲಸಿಕೆಗಳನ್ನು ತುರ್ತು ಬಳಕೆಗೆ ಅವಕಾಶ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಎರಡು ಪ್ರಮುಖ ಮನವಿಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದು 'ಎನ್‌ಡಿ ಟಿವಿ' ಮಾಡಿದೆ.
ಪುಣೆಯ ಸೆರಮ್ ಸಂಸ್ಥೆಯು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆಗಳ ಸಹಯೋಗದಲ್ಲಿ ತಯಾರಿಸಿದ್ದ 'ಕೋವಿಶೀಲ್ಡ್' ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಸುತ್ತಿದ್ದು, ತುರ್ತು ಸಂದರ್ಭದಲ್ಲಿ ಲಸಿಕೆಯ ಬಳಕೆಗೆ ಅನುಮತಿ ನೀಡುವಂತೆ ಕೋರಿತ್ತು. ಹಾಗೆಯೇ ಹೈದರಾಬಾದ್ ಮೂಲಕ ಭಾರತ್ ಬಯೋಟೆಕ್ ಸಂಪೂರ್ಣ ಸ್ವದೇಶ ನಿರ್ಮಿತ 'ಕೋವ್ಯಾಕ್ಸಿನ್' ಅಭಿವೃದ್ಧಿ ಪಡಿಸಿದ್ದು, ದೇಶದಲ್ಲಿ ತುರ್ತು ಲಸಿಕೆ ಬಳಕೆಗೆ ಅನುಮತಿ ಕೋರಿದ ಮೂರನೇ ಕಂಪೆನಿಯಾಗಿತ್ತು.
ಆದರೆ ಸೆರಮ್ ಸಂಸ್ಥೆ ಮತ್ತು ಭಾರತ್ ಬಯೋಟೆಕ್‌ಗಳ ಮನವಿಯನ್ನು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಪರಿಣತರ ಸಮಿತಿ (ಸಿಡಿಸಿಎಸ್‌ಒ) ಬುಧವಾರ ತಿರಸ್ಕರಿಸಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಎರಡೂ ಕಂಪೆನಿಗಳು ತಮ್ಮ ಲಸಿಕೆಗಳ ಸುರಕ್ಷತೆ ಹಾಗೂ ಪರಿಣಾಮದ ಬಗ್ಗೆ ಅಸಮರ್ಪಕ ದತ್ತಾಂಶ ಹೊಂದಿವೆ. ಈ ಎರಡೂ ಕಂಪೆನಿಗಳಿಗೆ ಮತ್ತಷ್ಟು ದತ್ತಾಂಶಗಳನ್ನು ಒದಗಿಸುವಂತೆ ಸೂಚಿಸಲಾಗಿದೆ ಎಂದು ಸಮಿತಿ ಮೂಲಗಳು ತಿಳಿಸಿವೆ.

ಪರಿಣತರ ಸಮಿತಿಯು ಸೆರಮ್ ಸಂಸ್ಥೆ ಮತ್ತು ಭಾರತ್ ಬಯೋಟೆಕ್‌ನಿಂದ ಮತ್ತಷ್ಟು ದತ್ತಾಂಶಗಳನ್ನು ಬಯಸಿದೆ. ಲಸಿಕೆಯ ತುರ್ತು ಬಳಕೆಗೆ ಇನ್ನೂ ಹೆಚ್ಚಿನ ಪರೀಕ್ಷೆಯ ಫಲಿತಾಂಶದ ವರದಿಗಳನ್ನು ನೀಡುವಂತೆ ಸಮಿತಿ ಸೂಚಿಸಿದೆ.
ಅಮೆರಿಕದ ಬಹುರಾಷ್ಟ್ರೀಯ ಕಂಪೆನಿ ಫೈಜರ್ ಇಂಕ್ ಮತ್ತು ಜರ್ಮನಿಯ ಬಯೋಎನ್‌ಟೆಕ್ ಸಕಂಪೆನಿಗಳು ಜತೆಗೂಡಿ ಅಭಿವೃದ್ಧಿಪಡಿಸಿರುವ ಫೈಜರ್ ಲಸಿಕೆಯನ್ನು ಈಗಾಗಲೇ ಬ್ರಿಟನ್‌ನಲ್ಲಿ ನೀಡುವ ಮೂಲಕ ಅಧಿಕೃತ ಬಳಕೆಗೆ ತರಲಾಗಿದೆ. ಫೈಜರ್ ಕಂಪೆನಿಯು ಭಾರತದಲ್ಲಿಯೂ ಲಸಿಕೆಯ ತುರ್ತು ಬಳಕೆಗೆ ಮನವಿ ಮಾಡಿದೆ. ಆದರೆ ಅದು ಭಾರತದಲ್ಲಿ ಯಾವುದೇ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿಲ್ಲ.












Click it and Unblock the Notifications