ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಉಲ್ಬಣ: ಮಣಿಪುರದ ಶಾಲೆಗಳಿಗೆ ಜುಲೈ 24 ರವರೆಗೆ ರಜೆ

|
Google Oneindia Kannada News

ಮಣಿಪುರ ಜುಲೈ 13: ಹೊಸ ಕೋವಿಡ್-19 ಪ್ರಕರಣಗಳಲ್ಲಿ ತೀವ್ರ ಹೆಚ್ಚಳದ ಮಧ್ಯೆ ಮಣಿಪುರ ರಾಜ್ಯದಾದ್ಯಂತ ಎಲ್ಲಾ ಶಾಲೆಗಳನ್ನು ಮುಚ್ಚಲು ಸರ್ಕಾರದ ಆದೇಶ ನೀಡಿದೆ. ವಿವರಗಳ ಪ್ರಕಾರ, ಜುಲೈ 24 ರವರೆಗೆ ಶಾಲೆಗಳನ್ನು ಮುಚ್ಚಲಾಗಿದೆ.

ಮಣಿಪುರ ಸರ್ಕಾರ ಹೊರಡಿಸಿದ ಅಧಿಸೂಚನೆಯಲ್ಲಿ, "ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಪರೀಕ್ಷಾಯಲ್ಲಿ ಸೋಂಇತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಶೇಕಡಾ 15 ಕ್ಕಿಂತ ಹೆಚ್ಚಿರುವುದರಿಂದ, ರಾಜ್ಯದ ಎಲ್ಲಾ ಶಾಲೆಗಳು (ಸರ್ಕಾರಿ / ಖಾಸಗಿ) ಜುಲೈ 24 ರವರೆಗೆ ಮುಚ್ಚಲ್ಪಡುತ್ತವೆ" ಎಂದು ತಿಳಿಸಿದೆ. ಮಣಿಪುರದಲ್ಲಿ ಮಂಗಳವಾರ 59 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಬುಲೆಟಿನ್ ತಿಳಿಸಿದೆ. ಸೋಮವಾರ 47 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಮಣಿಪುರದಲ್ಲಿ ಕಳೆದ 24 ಗಂಟೆಗಳಲ್ಲಿ 15 ಮಂದಿ ಗುಣಮುಖರಾಗಿದ್ದು ರಾಜ್ಯದಲ್ಲಿ ಈವರೆಗೆ 57,264 ಜನ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಸಂಚಿತ ಪ್ರಕರಣಗಳು ಈಗ 66,135 ತಲುಪಿದ್ದು, ರಾಜ್ಯದಲ್ಲಿ ಇದುವರೆಗೆ ಒಟ್ಟು 2,120 ಜನರು COVID-19 ಗೆ ಬಲಿಯಾಗಿದ್ದಾರೆ. ಪಸಿಟಿವಿಟಿ ದರವು 15.6 ಪ್ರತಿಶತದಷ್ಟಿದೆ.

ICMR ಪರೀಕ್ಷೆ

ICMR ಪರೀಕ್ಷೆ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 13,615 ಹೊಸ COVID-19 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಕೊರೋನವೈರಸ್ ಸಂಖ್ಯೆ 4,36,52,944 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 20 ಹೊಸ ಸಾವುಗಳೊಂದಿಗೆ ಸಾವಿನ ಸಂಖ್ಯೆ 5,25,474 ಕ್ಕೆ ಏರಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಸಕ್ರಿಯ ಪ್ರಕರಣಗಳ ಸಂಖ್ಯೆ 1,31,043 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.30 ಪ್ರತಿಶತವನ್ನು ಒಳಗೊಂಡಿವೆ. ಆದರೆ ರಾಷ್ಟ್ರೀಯ COVID-19 ಚೇತರಿಕೆ ದರ 98.50 ಪ್ರತಿಶತದಷ್ಟು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ 330 ಕೊರೊನಾ ಪ್ರಕರಣಗಳು ದಾಖಲಾಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಜುಲೈ 12 ರವರೆಗೆ ಕೋವಿಡ್-19 ಗಾಗಿ 86,77,69,574 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ಮಂಗಳವಾರ 4,59,302 ಮಾದರಿಗಳನ್ನು ಪರೀಕ್ಷಿಸಲಾಗಿದೆ.

400 ಹೊಸ ಕೇಸ್

400 ಹೊಸ ಕೇಸ್

ದೆಹಲಿಯಲ್ಲಿ ಮಂಗಳವಾರ 400 ಹೊಸ COVID-19 ಪ್ರಕರಣಗಳು 2.92 ಶೇಕಡಾ ಧನಾತ್ಮಕತೆ ಮತ್ತು ಒಂದು ಸಾವು ಸಂಭವಿಸಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಹೊಸ ಸೋಂಕುಗಳು ಮತ್ತು ಸಾವುಗಳೊಂದಿಗೆ, ದೆಹಲಿಯ COVID-19 ಕ್ಯಾಸೆಲೋಡ್ 19,41,415 ಕ್ಕೆ ಏರಿದೆ ಮತ್ತು ಸಾವಿನ ಸಂಖ್ಯೆ 26,285 ಕ್ಕೆ ಏರಿದೆ ಎಂದು ಬುಲೆಟಿನ್ ತಿಳಿಸಿದೆ.

ಹಿಂದಿನ ದಿನ ನಡೆಸಿದ 8,548 ಪರೀಕ್ಷೆಗಳಲ್ಲಿ ಹೊಸ ಪ್ರಕರಣಗಳು ಹೊರಬಂದಿವೆ ಎಂದು ಅದು ಹೇಳಿದೆ. ದೆಹಲಿಯು ಸೋಮವಾರ 280 ಹೊಸ ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿದ್ದು, ಶೇಕಡಾ 4.21 ರಷ್ಟು ಧನಾತ್ಮಕತೆಯ ಪ್ರಮಾಣವಿದೆ. ಯಾವುದೇ ಹೊಸ ಸಾವುಗಳು ದಾಖಲಾಗಿಲ್ಲ.

ಎರಡು ಸಾವು ದಾಖಲು

ಎರಡು ಸಾವು ದಾಖಲು

ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ 433 ಹೊಸ COVID-19 ಪ್ರಕರಣಗಳು ಮತ್ತು ಎರಡು ಸಾವುಗಳು ದಾಖಲಾಗಿವೆ. ದೆಹಲಿ ಆಸ್ಪತ್ರೆಗಳಲ್ಲಿನ COVID-19 ರೋಗಿಗಳಿಗೆ 9,471 ಹಾಸಿಗೆಗಳಲ್ಲಿ, ಮಂಗಳವಾರ 119 ಮಾತ್ರ ಭರ್ತಿಯಾಗಿವೆ. ಕೋವಿಡ್ ಕೇರ್ ಸೆಂಟರ್‌ಗಳು ಮತ್ತು ಕೋವಿಡ್ ಆರೋಗ್ಯ ಕೇಂದ್ರಗಳಲ್ಲಿನ ಹಾಸಿಗೆಗಳು ಖಾಲಿಯಾಗಿವೆ ಎಂದು ಬುಲೆಟಿನ್ ಹೇಳಿದೆ. ದೆಹಲಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,960 ಆಗಿದ್ದು, ಹಿಂದಿನ ದಿನ 1,942 ರಿಂದ ಹೆಚ್ಚಾಗಿದೆ. 1,457 ರೋಗಿಗಳು ಹೋಮ್ ಐಸೋಲೇಶನ್‌ನಲ್ಲಿದ್ದಾರೆ ಎಂದು ಅದು ಹೇಳಿದೆ.

ಒಮಿಕ್ರಾನ್ ವೈರಸ್ ಪತ್ತೆ

ಒಮಿಕ್ರಾನ್ ವೈರಸ್ ಪತ್ತೆ

ಮಹಾರಾಷ್ಟ್ರದಲ್ಲಿ ಮಂಗಳವಾರ 2,435 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 13 ಸಾವುಗಳು ದಾಖಲಾಗಿದ್ದು, ಒಟ್ಟು ಸಂಖ್ಯೆ 80,07,648 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ಬುಲೆಟಿನ್‌ನಲ್ಲಿ ತಿಳಿಸಿದೆ. ಮುಂಬೈನಲ್ಲಿ 420 ಪ್ರಕರಣಗಳು ಮತ್ತು ಯಾವುದೇ ಸಾವು ಸಂಭವಿಸಿಲ್ಲ. ಒಂಬತ್ತು ಸೋಂಕುಗಳು- BA.4 ಮತ್ತು BA.5 ನ ಆರು ರೋಗಿಗಳು ಮತ್ತು BA.2.75-ನ ಮೂವರು ಒಮಿಕ್ರಾನ್‌ನ ಉಪ-ವ್ಯತ್ಯಯಗಳು ಸಹ ವರದಿಯಾಗಿದೆ. ಈ ಎಲ್ಲಾ ರೋಗಿಗಳು ಪುಣೆಯವರು. ಸೋಮವಾರ, ರಾಜ್ಯದಲ್ಲಿ 1,189 ಕೋವಿಡ್ -19 ಪ್ರಕರಣಗಳು ಮತ್ತು ಎರಡು ಸಾವುಗಳು ದಾಖಲಾಗಿವೆ.

Recommended Video

Karnataka ದಲ್ಲಿ ಮಳೆರಾಯನ ಆರ್ಭಟ ಮುಗಿದಿಲ್ಲ | *Karnataka | OneIndia Kannada

English summary
Manipur Government has ordered the closure of all schools across the state of Manipur amid a sharp rise in new Covid-19 cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X