ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉತ್ತರಾಖಂಡ ನ್ಯಾಯಮೂರ್ತಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ
ಡೆಹರಾಡೂನ್ (ಉತ್ತರಾಖಂಡ), ಜೂನ್ 12: ಉತ್ತರಾಖಂಡದ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧವೇ ಅಲ್ಲಿನ ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗಿದೆ.
ನಿವೃತ್ತ ನ್ಯಾಯಮೂರ್ತಿ, ಮಹಿಳಾ ನ್ಯಾಯವಾದಿ ಸೇರಿದಂತೆ ಇತರೆ ವಕೀಲರ ವಿರುದ್ಧ ಅಸಭ್ಯ ಪದ ಬಳಸಿದ ಆರೋಪದಲ್ಲಿ ನ್ಯಾಯಮೂರ್ತಿ ಲೋಕಪಾಲ್ ಸಿಂಗ್ ಅವರ ವಿರುದ್ಧ ಮಂಗಳವಾರ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.
70 ವರ್ಷದಿಂದ ಆಹಾರವಿಲ್ಲದ, ನೀರೂ ಕುಡಿಯದ ಯೋಗಿಯ ಕತೆ ಕೇಳಿ
ವಕೀಲ ಕೆ.ಸಿ. ಶರ್ಮಾ ಅವರು ಈ ಪ್ರಕರಣವನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿ ಸಿಂಗ್ ಅವರು ಶರ್ಮಾ ಅವರ ವಿರುದ್ಧ ನ್ಯಾಯಾಲಯದಲ್ಲಿಯೇ ಕೆಟ್ಟ ಪದಗಳನ್ನು ಬಳಸಿ ಅವಮಾನಿಸಿದ್ದಲ್ಲದೆ, ಜೈಲಿಗೆ ಕಳುಹಿಸುವ ಬೆದರಿಕೆ ಹಾಕಿದ್ದರು ಎಂದು ವರದಿಗಳು ತಿಳಿಸಿವೆ.
ವಕೀಲರ ವಿರುದ್ಧ ವೈಯಕ್ತಿಕವಾದ ಹೇಳಿಕೆ ನೀಡಿದ್ದನ್ನು ವಿರೋಧಿಸಿ ನ್ಯಾಯಮೂರ್ತಿ ವಿರುದ್ಧ ಉತ್ತರಾಖಂಡ ಹೈಕೋರ್ಟ್ ವಕೀಲರು ಜನವರಿ ತಿಂಗಳಿನಲ್ಲಿ ಪ್ರತಿಭಟನೆ ನಡೆಸಿದ್ದರು.
Comments
uttarakhand high court court lawyers contempt of court ಉತ್ತರಾಖಂಡ ಹೈಕೋರ್ಟ್ ನ್ಯಾಯಾಲಯ ವಕೀಲ ನ್ಯಾಯಾಂಗ ನಿಂದನೆ
English summary
A case of criminal contempt was filed against Justice Lokpal Singh in UttaraKhand High Court on Tuesday for using inappropriate language against lawyers.
Story first published: Tuesday, June 12, 2018, 12:52 [IST]