Minister MB Patil: ಮಹಿಳೆಯರಿಗೆ ತಿಂಗಳಿಗೆ ₹3000 ಆರ್ಥಿಕ ನೆರವು; ಕಾಂಗ್ರೆಸ್ ದಿಗ್ವಿಜಯ: ಎಂ ಬಿ ಪಾಟೀಲ್
ಗ್ಯಾರಂಟಿ ಯೋಜನೆಗಳ ಮೂಲಕ ಕರ್ನಾಟಕ ದೇಶದಲ್ಲೇ ಪ್ರಗತಿಯ ಮುಂಚೂಣಿಯಲ್ಲಿರುವಂತೆ ಮಹಾರಾಷ್ಟ್ರದಲ್ಲಿಯೂ ಕಾಂಗ್ರೆಸ್ ನೇತೃತ್ವದ ಗ್ಯಾರಂಟಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಪಣ ನಮ್ಮದು. ಪಕ್ಷ ನೀಡಿದ ಜವಾಬ್ದಾರಿಯಂತೆ ಮಹಾರಾಷ್ಟ್ರ ಪಶ್ಚಿಮ ಭಾಗದ ವೀಕ್ಷಕನಾಗಿ ಕೊಲ್ಹಾಪುರ, ಪುಣೆ, ಸಾಂಗ್ಲಿ ಮುಂತಾದೆಡೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಪಾಲ್ಗೊಂಡೆ ಎಂದು ಕರ್ನಾಟಕ ಸಚಿವ ಎಂ ಬಿ ಪಾಟೀಲ್ ಅವರು ಹೇಳಿದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ
— M B Patil (@MBPatil) November 13, 2024
ಗ್ಯಾರಂಟಿ ಬಲ; ಕಾಂಗ್ರೆಸ್ ದಿಗ್ವಿಜಯ!#ಗ್ಯಾರಂಟಿ ಯೋಜನೆಗಳ ಮೂಲಕ ಕರ್ನಾಟಕ ದೇಶದಲ್ಲೇ ಪ್ರಗತಿಯ ಮುಂಚೂಣಿಯಲ್ಲಿರುವಂತೆ ಮಹಾರಾಷ್ಟ್ರದಲ್ಲಿಯೂ ಕಾಂಗ್ರೆಸ್ ನೇತೃತ್ವದ ಗ್ಯಾರಂಟಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಪಣ ನಮ್ಮದು. ಪಕ್ಷ ನೀಡಿದ ಜವಾಬ್ದಾರಿಯಂತೆ ಮಹಾರಾಷ್ಟ್ರ ಪಶ್ಚಿಮ ಭಾಗದ ವೀಕ್ಷಕನಾಗಿ… pic.twitter.com/AoliMzNKWS
ಈ ಕುರಿತು ಟ್ವೀಟ್ ಮಾಡಿರುವ ಎಂ ಬಿ ಪಾಟೀಲ್ ಅವರು, ಮಹಾರಾಷ್ಟ್ರದಲ್ಲಿಯೂ ಕರ್ನಾಟಕದಂತೆ ಕಾಂಗ್ರೆಸ್ ವತಿಯಿಂದ ಗ್ಯಾರಂಟಿಗಳನ್ನು ಘೋಷಿಸಲಾಗಿದೆ. ಮಹಿಳೆಯರಿಗೆ ತಿಂಗಳಿಗೆ ₹3000 ಆರ್ಥಿಕ ನೆರವು, ₹500ಗೆ ಅಡುಗೆ ಅನಿಲ ಸಿಲಿಂಡರ್ ಹಾಗೂ ಉಚಿತ ಬಸ್ ಪ್ರಯಾಣವನ್ನು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಬಿಜೆಪಿ ಮತ್ತು ಮಿತ್ರಪಕ್ಷಗಳ ದುರಾಡಳಿತದಿಂದ ಬೇಸತ್ತಿರುವ ಮಹಾರಾಷ್ಟ್ರದ ಜನತೆ ಈ ಬಾರಿ ಗ್ಯಾರಂಟಿಯ ಭರವಸೆ ನೀಡುವ ನಮ್ಮ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುತ್ತಿದ್ದಾರೆ. ಈ ಗ್ಯಾರಂಟಿ ಬಲದ ಮೂಲಕ ಕಾಂಗ್ರೆಸ್ ಮೈತ್ರಿಕೂಟ ಮಹಾರಾಷ್ಟ್ರದಲ್ಲಿ ದಿಗ್ವಿಜಯ ಸಾಧಿಸಿ, ಸಾರ್ವಜನಿಕರಿಗೆ ನೆಮ್ಮದಿಯ ಬದುಕು ಕಲ್ಪಿಸಿಕೊಡಲಿದೆ ಎಂದು ಎಂ ಬಿ ಪಾಟೀಲ್ ಹೇಳಿದರು.

ಪುಣೆ ಜಿಲ್ಲೆಯ ಪುರಂದರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕರಾದ ಸಂಜಯ್ ಜಗತಾಪ್ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿ, ಕೆಲವು ಸಲಹೆಗಳನ್ನು ನೀಡಿದೆ. ನಂತರ ಅವರ ಪರವಾಗಿ ಕ್ಷೇತ್ರದಲ್ಲಿ ಕೈಗೊಳ್ಳಲಾಗಿದ್ದ ಪ್ರಚಾರ ಸಭೆಗಳಲ್ಲಿ ತೊಡಗಿಸಿಕೊಂಡಿದ್ದೆ. ಸಾರ್ವಜನಿಕರ ಬೆಂಬಲ, ಕಾರ್ಯಕರ್ತರ ಉತ್ಸಾಹ ಹಾಗೂ ಮಿತ್ರ ಪಕ್ಷಗಳ ಸಂಪೂರ್ಣ ಸಹಕಾರದಿಂದ ಸಂಜಯ್ ಜಗತಪ್ ಅವರು ಮತ್ತೊಮ್ಮೆ ಶಾಸಕರಾಗುವುದು ಖಚಿತ! ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿಗಳಾದ ಟಿ.ಎಸ್. ಸಿಂಗ್ ದೇವ್, ಎಐಸಿಸಿ ಕಾರ್ಯದರ್ಶಿ ಶ್ರೀ ಖಾಜಿ ನಿಜಾಮುದ್ದೀನ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಜೊತೆಗಿದ್ದರು ಎಂದು ಎಂ ಬಿ ಪಾಟೀಲ್ ಅವರು ತಿಳಿಸಿದ್ದಾರೆ.
ಸಂಗ್ರಾಮ್ ಥೋಪಟೆ ಪರವಾಗಿ ಭೋರ್ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಿಮಿತ್ತ ಪೂಣೆ ಜಿಲ್ಲೆಯ ಭೋರ್ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಹಾಗೂ ಸಕ್ರಿಯ ಶಾಸಕರಾದ ಸಂಗ್ರಾಮ್ ಥೋಪಟೆ ಪರವಾಗಿ ಇಂದು ಭರ್ಜರಿ ಪ್ರಚಾರ ಕೈಗೊಳ್ಳಲಾಗಿತ್ತು.ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಿಂದ ಗ್ಯಾರಂಟಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ತಿಳಿಸಿ, ಮತದಾರರ ಮನ ಗೆಲ್ಲುವ ಕೆಲಸ ಮಾಡುತ್ತಿದ್ದಾರೆ.
ಪಕ್ಷದ ಪರವಾಗಿ ಉತ್ತಮವಾದ ವಾತಾವರಣವಿದ್ದು, ಎಲ್ಲೆಡೆ ನಿರೀಕ್ಷೆಗೂ ಮೀರಿ ಜನ ಬೆಂಬಲ ವ್ಯಕ್ತವಾಗುತ್ತಿದೆ. ಅಭ್ಯರ್ಥಿ ಸಂಗ್ರಾಮ್ ಥೋಪಟೆ ಅವರು ಅತ್ಯಧಿಕ ಮತಗಳ ಅಂತರದಿಂದ ಮತ್ತೊಮ್ಮೆ ಗೆಲುವು ಸಾಧಿಸುವುದು ಖಚಿತ. ಇಂದಿನ ಪ್ರಚಾರ ಸಭೆಗಳಲ್ಲಿ/ ಯಾತ್ರೆಯಲ್ಲಿ ಛತ್ತೀಸ್ ಗಢದ ಮಾಜಿ ಸಿಎಂ ಟಿ.ಎಸ್. ಸಿಂಗ್ ದೇವ್, ಎಐಸಿಸಿ ಕಾರ್ಯದರ್ಶಿ ಶ್ರೀ ಖಾಜಿ ನಿಜಾಮುದ್ದೀನ್ ಸೇರಿದಂತೆ ಹಲವು ಪ್ರಮುಖ ನಾಯಕರು ಪಾಲ್ಗೊಂಡಿದ್ದರು ಎಂದು ತಿಳಿಸಿದರು.












Click it and Unblock the Notifications