ಮೋದಿ 'ಬಿಳಿಗಡ್ಡದ ಮುದುಕ' ಎಂದ ಮುಖಂಡನಿಗೆ ಟ್ವಿಟ್ಟಿಗರ ಲಕ್ಷಾರ್ಚನೆ
ಪಕ್ಷಕ್ಕೆ ಮುಜುಗರ ತಂದೊಡ್ಡುವ ಮತ್ತು ಅಸಂಬದ್ದ ಹೇಳಿಕೆಗಳನ್ನು ನೀಡುವ ನಾಯಕರುಗಳು ಎಲ್ಲಾ ಪಕ್ಷದಲ್ಲೂ ಇದ್ದಾರೆ. ಇದರಿಂದ ಬಿಜೆಪಿ, ಕಾಂಗ್ರೆಸ್ ಅಥವಾ ಪ್ರಾದೇಶಿಕ ಪಕ್ಷಗಳೂ ಹೊರತಾಗಿಲ್ಲ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು 'ನೀಚ' ಎಂದು ಜರಿದಿದ್ದ ಮಣಿಶಂಕರ್ ಅಯ್ಯರ್ ಅವರನ್ನು ಗುಜರಾತ್ ಚುನಾವಣಾ ಬಿಸಿಯಲ್ಲಿ ಕಾಂಗ್ರೆಸ್ ಸಸ್ಪೆಂಡ್ ಮಾಡಿತ್ತು. ಈಗ ಕಾಂಗ್ರೆಸ್ಸಿನ ಮತ್ತೋರ್ವ ಹಿರಿಯ ಮುಖಂಡರೊಬ್ಬರು ಮೋದಿಯ ಕಾಲೆಳೆಯಲು ಹೋಗಿ ಟ್ವಿಟ್ಟಿಗರಿಂದ ಸರಿಯಾಗಿ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.
ಕಾಂಗ್ರೆಸ್ಸಿನ ಹಿರಿಯ ಮುಖಂಡ ಮತ್ತು ವಕ್ತಾರ ಮನೀಶ್ ತಿವಾರಿ, ಪ್ರಧಾನಿಯವರನ್ನು ಕೆಣಕುವ ಟ್ವೀಟ್ ಮಾಡಿದ್ದಾರೆ. ಮೋದಿ ಹೆಸರನ್ನು ಪ್ರಸ್ತಾವಿಸದೇ ಪ್ರಧಾನಿಯವರನ್ನು 'ಬಿಳಿಗಡ್ಡದ ಮುದುಕ' ಎಂದು ತಿವಾರಿ ಲೇವಡಿ ಮಾಡಿದ್ದಾರೆ.
ಬಿಜೆಪಿ ಸರಕಾರದ ನೋಟ್ ಬ್ಯಾನ್ ಕ್ರಮವನ್ನು ಪರೋಕ್ಷವಾಗಿ ಉಲ್ಲೇಖಿಸಿ ಟ್ವೀಟ್ ಮಾಡಿದ ತಿವಾರಿ, ಬಿಳಿಗಡ್ಡದ ಮನುಷ್ಯನೋರ್ವ ನಿಮ್ಮ ಮನೆಗೆ ಬಂದು ನಿಮ್ಮಲ್ಲಿರುವ ಹಣವನ್ನೆಲ್ಲಾ ದೋಚಿಕೊಂಡು ಹೋಗುತ್ತಾನೆಂದು, ಮೋದಿಯವರ ವಿರುದ್ದ ಕಿಡಿಕಾರಿದ್ದಾರೆ.
ಮನೀಶ್ ತಿವಾರಿಯವರ ಈ ಟ್ವೀಟ್ ಸುಮಾರು ಮೂರು ಸಾವಿರ ಲೈಕ್, 1,200 ರಿಟ್ವೀಟ್ ಪಡೆದುಕೊಂಡಿದೆ. ಜೊತೆಗೆ, 1,300 ರಿಪ್ಲೈ ಈ ಟ್ವೀಟಿಗೆ ಬಂದಿದೆ. ತಿವಾರಿಯವರ ಈ ಟ್ವೀಟಿಗೆ ರಿಪ್ಲೈ ಮಾಡಿರುವ ಬಹುತೇಕ ಟ್ವಿಟ್ಟಿಗರು, ನೆಹರೂ ಕಾಲದಿಂದ ಹಿಡಿದು ರಾಹುಲ್ ಗಾಂಧಿಯವರ ತನಕ ಎಲ್ಲರನ್ನೂ ಎಳೆದು ತಂದಿದ್ದಾರೆ.

ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಟ್ವೀಟ್
ಪ್ರಪಂಚದಾದ್ಯಂತ ಚಿಮಣಿಯ ಮೂಲಕ ಈ ಸಮಯದಲ್ಲಿ (ಕ್ರಿಸ್ಮಸ್) ಬಿಳಿಗಡ್ಡದ ವ್ಯಕ್ತಿಯೋರ್ವ ಮನೆಗೆ ಬಂದು ಹಣವನ್ನು ಇಟ್ಟು ಹೋದರೆ, ನಮ್ಮ ಭಾರತದಲ್ಲಿನ ಪರಿಸ್ಥಿತಿಯೇ ಬೇರೆ. ಭಾರತದಲ್ಲಿ ಬಿಳಿಗಡ್ಡದ ಮುದುಕನೋರ್ವ ನಿಮ್ಮ ಮನೆಗೆ ಟಿವಿಗಳ ಮೂಲಕ ಆಗಮಿಸಿ, ನಿಮ್ಮ ಬಳಿ ಇರುವ ಹಣವನ್ನೆಲ್ಲಾ ದೋಚಿಕೊಂಡು ಹೋಗುತ್ತಾರೆ ಎಂದು ಅಪನಗದೀಕರಣವನ್ನು ಉಲ್ಲೇಖಿಸಿ, ಪ್ರಧಾನಿಯವರ ಹೆಸರನ್ನು ಪ್ರಸ್ತಾವಿಸಿದೇ ಮನೀಶ್ ತಿವಾರಿ ಮಾಡಿರುವ ಟ್ವೀಟ್.

ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಅನ್ನು ಮೀರಿಸುವ ಪಕ್ಷ ಇನ್ನೊಂದಿಲ್ಲ
ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಅನ್ನು ಮೀರಿಸುವ ಪಕ್ಷ ಇನ್ನೊಂದಿಲ್ಲ. ಇತರ ದೇಶಗಳು ಅಭಿವೃದ್ದಿ ಹೊಂದುತ್ತಿರುವಾಗ, ನಮ್ಮ ನೆಹರೂ ಇನ್ನೊಬ್ಬರ ಹೆಂಡತಿಯ ಜೊತೆ ಬ್ಯೂಸಿಯಾಗಿದ್ದರು. ಇತರ ದೇಶಗಳು ತಮ್ಮ ದೇಶಕ್ಕೆ ಸಂಬಂಧಪಟ್ಟ ಜಾಗಗಳಿಗಿದ್ದ ಗೊಂದಲ ಸರಿಪಡಿಸಿಕೊಳ್ಳುತ್ತಿದ್ದರೆ, ನೆಹರೂ ಮೌಂಟ್ ಬ್ಯಾಟನ್ ಜೊತೆಯಿದ್ದರು.

ಮುದುಕಿಯೋರ್ವಳು ಮನೆಗೆ ನುಗ್ಗಿ ಎಲ್ಲವನ್ನೂ ದೋಚಿದ್ದರು
ಬಿಳಿಗಡ್ಡದ ಮುದುಕನಿಗಿಂತ ಮುನ್ನ ಮುದುಕಿಯೋರ್ವಳು ಮನೆಗೆ ನುಗ್ಗಿ ಎಲ್ಲವನ್ನೂ ದೋಚಿದ್ದರು. ಸುಮಾರು 27 ವರ್ಷದಲ್ಲಿ ಚೀನಾ ಬೆಳವಣಿಗೆಯನ್ನು ಒಮ್ಮೆ ನೋಡಿ ನಮ್ಮ ದೇಶದ ಬೆಳವಣಿಗೆಯನ್ನೊಮ್ಮೆ ನೋಡಿ.

ನಿಮ್ಮ ಮನೆಯ ಅಲ್ಮೇರಾದಲ್ಲಿ ಯಾಕೆ ದುಡ್ಡು ಇಟ್ಟಿದ್ದೀರಾ
ಗಡ್ಡವಿಲ್ಲದ ಮನುಷ್ಯನೊಬ್ಬ ಚೀರುತ್ತಿರುವುದು #Pidi. ನಿಮ್ಮ ಮನೆಯ ಅಲ್ಮೇರಾದಲ್ಲಿ ಯಾಕೆ ದುಡ್ಡು ಇಟ್ಟಿದ್ದೀರಾ, ಲಾಕರ್ ನಲ್ಲಿ ಯಾಕೆ ಇಟ್ಟಿಲ್ಲಾ.. ಈ ರೀತಿಯ ಟ್ವೀಟುಗಳು

ದೇಶವನ್ನು 55ವರ್ಷಗಳಿಂದ ಲೂಟಿ ಮಾಡಿದ್ದಾರೆ
ಮನೀಶ್ ನಿಮ್ಮ ಗ್ರಹಿಕೆ ತಪ್ಪು. ಫಿರೋಜ್ ಗಾಂಧಿ ಕುಟುಂಬ ಮತ್ತು ಅವರ ಚಮಚಾಗಳು ದೇಶವನ್ನು 55ವರ್ಷಗಳಿಂದ ಲೂಟಿ ಮಾಡಿದ್ದಾರೆ. ನಿಮಗೆ ನಾಚಿಕೆಯಾಗಬೇಕು. ಸಂಬಳದಾರರಿಗೆ ಮತ್ತು ಮಧ್ಯಮವರ್ಗದ ಕುಟುಂಬಕ್ಕೆ ಅಪನಗದೀಕರಣದಿಂದ ಏನೂ ತೊಂದರೆಯಾಗಿಲ್ಲ.












Click it and Unblock the Notifications