Rahul Gandhi: ರೈಲಲ್ಲಿ ರಾಹುಲ್ ಗಾಂಧಿ ಪ್ರಯಾಣ ಹೇಗಿತ್ತು ನೀವೆ ನೋಡಿ

ರಾಹುಲ್ ಗಾಂಧಿ ಈಗ ದೇಶ ಸುತ್ತುತ್ತಿದ್ದು ಸಾಮಾನ್ಯ ಜನರ ಜೊತೆ ಬೆರೆಯುತ್ತಿದ್ದಾರೆ. ಈ ರೀತಿ ಈಗಾಗಲೇ ಲಾರಿಯಲ್ಲಿ ಪ್ರಯಾಣ ಮಾಡಿದ್ದು, ಬೆಂಗಳೂರಿನಲ್ಲಿ ಬೈಕ್ ಹತ್ತಿ ಗಮನ ಸೆಳೆದಿದ್ದರು. ಇದೀಗ ರೈಲಿನಲ್ಲಿ ಪ್ರಯಾಣ ಮಾಡುವ ಮೂಲಕ, ಜನ ಸಾಮಾನ್ಯರ ಜೊತೆ ಕಷ್ಟಸುಖ ಹಂಚಿಕೊಂಡಿದ್ದಾರೆ. ಹಾಗಾದ್ರೆ ರಾಹುಲ್ ರೈಲು ಪ್ರಯಾಣ ಹೇಗಿತ್ತು? ಮುಂದೆ ಓದಿ.

ಅಂದಹಾಗೆ ಇತ್ತೀಚೆಗೆ ಛತ್ತೀಸ್‌ಗಢದ ಬಿಲಾಸ್‌ಪುರದಿಂದ ರಾಜಧಾನಿ ರಾಯ್‌ಪುರಕ್ಕೆ ರೈಲಿನಲ್ಲಿ ಪ್ರಯಾಣ ಮಾಡಿರುವ ರಾಹುಲ್ ಗಮನ ಸೆಳೆದಿದ್ದಾರೆ. ಪ್ರಯಾಣಿಕರ ಜೊತೆ ಸಂವಾದದಲ್ಲಿ ತೊಡಗಿದ್ದ ವಿಡಿಯೋ ರಿಲೀಸ್ ಮಾಡಿರುವ ಎಐಸಿಸಿ ಹಾಗೂ ಕೆಪಿಸಿಸಿ ಈ ಬಗ್ಗೆ ಮಾಹಿತಿ ನೀಡಿದೆ. ಹಾಗೇ ರಾಹುಲ್ ಅವರು ಕೂಡ 13 ನಿಮಿಷಗಳ ವಿಡಿಯೋ ಶೇರ್ ಮಾಡಿದ್ದಾರೆ. ಹಾಗಾದರೆ ತಮ್ಮ ರೈಲು ಪ್ರಯಾಣದ ಬಗ್ಗೆ ರಾಹುಲ್ ಹೇಳಿದ್ದೇನು? ರೈಲಿನಲ್ಲಿ ರಾಹುಲ್ ಪ್ರಯಾಣ ಮಾಡುವಾಗ ಪ್ರಯಾಣಿಕರ ರಿಯಾಕ್ಷನ್ ಹೇಗಿತ್ತು?

congress-reacts-to-rahul-gandhis-train-journey

ಭಾರತೀಯ ರೈಲ್ವೆ ನಿಜವಾಗಿಯೂ...

ಮತ್ತೊಂದು ಕಡೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ರಾಹುಲ್ ಗಾಂಧಿ, ಬಿಲಾಸ್‌ಪುರದಿಂದ ರಾಯ್‌ಪುರಕ್ಕೆ ಹೊದಾಗ ರೈಲು ಪ್ರಯಾಣದಲ್ಲಿ ಕಂಡ ಭಾರತದ ಒಂದು ನೋಟ! ದೇಶದ ವೈವಿಧ್ಯತೆ ಪ್ರತಿಬಿಂಬಿಸುವ, ಕೋಟ್ಯಂತರ ಜನರನ್ನು ಅವರವರ ಸ್ಥಳಕ್ಕೆ ಸಾಗಿಸುವ ಭಾರತೀಯ ರೈಲ್ವೆ ನಿಜವಾಗಿಯೂ ಭಾರತದ ಪ್ರತಿಬಿಂಬ ಎಂದು ರಾಹುಲ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ರಾಹುಲ್ ರೈಲು ಪ್ರಯಾಣ ಮಾಡಿದ್ದೇಕೆ?

ಇದೀಗ ರಾಹುಲ್ ಗಾಂಧಿ ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿ, ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಹೀಗೆ ಸೆಪ್ಟಂಬರ್‌ 25ರಂದು ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಹೀಗೆ ಕಾರ್ಯಕ್ರಮ ಹಿನ್ನೆಲೆ ಛತ್ತೀಸ್‌ಗಢಕ್ಕೆ ತೆರಳಿದ್ದಾಗ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ರಾಹುಲ್ ಗಾಂಧಿ ರೈಲಿನಲ್ಲಿ ರಾಯ್‌ಪುರಕ್ಕೆ ಹೊರಟಿದ್ದರು. ರಾಹುಲ್ ಜೊತೆ ಸಿಎಂ ಭೂಪೇಶ್ ಬಘೇಲ್, ರಾಜ್ಯ ಉಸ್ತುವಾರಿ ಕುಮಾರಿ ಸೆಲ್ಜಾ ಮತ್ತು ರಾಜ್ಯ ಘಟಕದ ಮುಖ್ಯಸ್ಥ ದೀಪಕ್ ಬೈಜ್ ಕೂಡ ಇದ್ದರು.

ರೈಲಿನಲ್ಲಿ ರಾಹುಲ್ ಗಾಂಧಿ ಬಂದಿದ್ದನ್ನು ಕಂಡ ಪ್ರಯಾಣಿಕರು ಕೂಡ ಖುಷ್ ಆಗಿದ್ದರು. ಹಾಗೇ ತಮ್ಮ ಕಷ್ಟಸುಖ ಹಂಚಿಕೊಂಡಿದ್ದಾರೆ. ಇನ್ನು ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾಗೇ ಲೋಕಸಭೆ ಚುನಾವಣೆ ಹಿನ್ನೆಲೆ ರಾಹುಲ್‌ರ ಇಂತಹ ಪ್ರಯಾಣ ಸಾಕಷ್ಟು ಮಹತ್ವ ಪಡೆಯುತ್ತಿವೆ. ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಕೂಡ ರಾಹುಲ್ ಗಾಂಧಿ ಇದೇ ರೀತಿ ಹಲವು ಕಡೆ ಪ್ರಯಾಣ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+