ಹೀನಾಯ ಪ್ರದರ್ಶನ : 9 ರಾಜ್ಯಗಳಲ್ಲಿ ಸೊನ್ನೆ ಹಿಂದೆ ಸುತ್ತಿದ ಕಾಂಗ್ರೆಸ್
ನವದೆಹಲಿ, ಮೇ 23: ಬಹುಷಃ ಈ ರೀತಿಯ ಸೋಲನ್ನು ಕಾಂಗ್ರೆಸ್ ನಿರೀಕ್ಷಿಸಿರಲಿಕ್ಕಿಲ್ಲ. ಒಂಬತ್ತು ರಾಜ್ಯಗಳಲ್ಲಿ ಇದುವರೆಗಿನ ಟ್ರೆಂಡಿಂಗ್ ಪ್ರಕಾರ, ಕಾಂಗ್ರೆಸ್ ಶೂನ್ಯದಿಂದ ಹೊರಬಂದಿಲ್ಲ.
ಆಂಧ್ರಪ್ರದೇಶ, ದೆಹಲಿ, ಗುಜರಾತ್, ಹಿಮಾಚಲ ಪ್ರದೇಶ, ಮಣಿಪುರ, ಒರಿಸ್ಸಾ, ರಾಜಸ್ಥಾನ, ತ್ರಿಪುರಾ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಯಾವ ಕ್ಷೇತ್ರಗಳಲ್ಲೂ ಜಯಸಾಧಿಸಲಿಲ್ಲ ಮತ್ತು ಎಲ್ಲೂ ತಮ್ಮ ಸಮೀಪದ ಸ್ಪರ್ಧಿಯ ಎದುರು ಮುನ್ನಡೆಯನ್ನು ಸಾಧಿಸಲಿಲ್ಲ.
ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ ಅಭೂತಪೂರ್ವ ಜಯದತ್ತ ಸಾಗುತ್ತಿದ್ದರೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. 25ಕ್ಷೇತ್ರಗಳಲ್ಲಿ ಟಿಎಂಸಿ, 16 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು 1ಕ್ಷೇತ್ರದಲ್ಲಿ ಇತರರು ಮುಂದಿದ್ದಾರೆ.

ಇನ್ನು ಗುಜರಾತಿನ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯನ್ನು ಸಾಧಿಸಿದೆ. ಕಳೆದ ಬಾರಿಯ ಚುನಾವಣೆಯಂತೆ ಕ್ಲೀನ್ ಸ್ವೀಪ್ ಮಾಡುವ ಎಲ್ಲಾ ಸಾಧ್ಯತೆಯಿದೆ.
ದೆಹಲಿಯ ಏಳು ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಮುನ್ನಡೆಯನ್ನು ಸಾಧಿಸಿದೆ. ದೆಹಲಿಯಲ್ಲಿ ಬಿಜೆಪಿ-ಆಮ್ ಆದ್ಮಿ ಪಕ್ಷ - ಕಾಂಗ್ರೆಸ್ ನಡುವೆ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದ್ದು, ಬಿಜೆಪಿಗೆ ವರದಾನವಾಗಿ ಪರಿಣಮಿಸಿದೆ.
ರಾಜಸ್ಥಾನದ ಎಲ್ಲಾ 25ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯನ್ನು ಸಾಧಿಸಿದ್ದು, ಜಯದತ್ತ ದಾಪುಗಾಲು ಹಾಕುತ್ತಿದೆ.











Click it and Unblock the Notifications