ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಪಿಟೇಷನ್ ಕಮಿಷನ್ ನಿಂದ ಗೂಗಲ್ ಗೆ ರೂ. 136 ಕೋಟಿ ದಂಡ

By Sachhidananda Acharya
|
Google Oneindia Kannada News

ನವದೆಹಲಿ, ಫೆಬ್ರವರಿ 9: ಕಾಂಪಿಟೇಷನ್ ಕಮಿಷನ್ ಗುರುವಾರ ಇಂಟರ್ನೆಟ್ ದೈತ್ಯ ಕಂಪನಿ ಗೂಗಲ್ ಗೆ 136 ಕೋಟಿ ರೂಪಾಯಿ ದಂಡ ವಿಧಿಸಿದೆ.

ಆನ್ಲೈನ್ ಸರ್ಚ್ ನಲ್ಲಿ ತಾರತಮ್ಯದ ನೀತಿ ಅನುಸರಿಸಿದ್ದಕ್ಕೆ ಈ ದಂಡ ವಿಧಿಸಲಾಗಿದೆ. 2012ರಲ್ಲಿ ಸಲ್ಲಿಸಿದ ದೂರಿನ ವಿವರವಾದ ವಿಚಾರಣೆ ನಡೆಸಿ ಆಯೋಗ 136 ಕೋಟಿ ರೂ. ಮೊತ್ತದ ದಂಡ ಹಾಕಿದೆ.

ಜಾಗತಿಕವಾಗಿ ಹಲವು ದೇಶಗಳಲ್ಲಿ ಗೂಗಲ್ ವಿರುದ್ಧ ತಾರತಮ್ಯದ ಉದ್ಯಮ ನೀತಿ ಅನುಸರಿಸಿದ ಸಂಬಂಧ ತನಿಖೆಗಳು ನಡೆಯುತ್ತಿದೆ. ಆದರೆ ದಂಡ ವಿಧಿಸಿದ ಅಪರೂಪದ ಪ್ರಕರಣ ಇದಾಗಿದೆ.

 Competition Commission slaps Rs 136-cr penalty on Google

2010ಕ್ಕೂ ಮೊದಲು ಗೂಗಲ್ ನ ಸ್ಪೆಷಲೈಸ್ಡ್ ಸರ್ಚ್ ಆಯ್ಕೆಯಲ್ಲಿ ಸ್ಪರ್ಧಾತ್ಮಕ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿತ್ತು. ಈ ಸಂಬಂಧ ಮಾಟ್ರಿಮೊನಿ ಡಾಕ್ ಕಾಂ ಮತ್ತು ಕನ್ಸುಮರ್ ಯುನಿಟಿ ಆ್ಯಂಡ್ ಟ್ರಸ್ಟ್ ಸೊಸೈಟಿ (ಸಿಉಟಿಎಸ್) ಕಡೆಯಿಂದ ಕಾಂಪಿಟೇಷನ್ ಕಮಿಷನ್ ಗೆ ದೂರು ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆಸಿದ ಕಾಂಪಿಟೇಷನ್ ಕಮಿಷನ್ ಈ ದಂಡ ವಿಧಿಸಿದೆ.

2013, 2014 ಮತ್ತು 2015ರಲ್ಲಿ ಗೂಗಲ್ ಕಂಪನಿ ಭಾರತದಲ್ಲಿ ಗಳಿಸಿದ ಆದಾಯದ ಶೇಕಡಾ 5ರಷ್ಟು ಮೊತ್ತವನ್ನು ಗೂಗಲ್ ಗೆ ದಂಡ ವಿಧಿಸಲಾಗಿದೆ.

English summary
The Competition Commission today imposed a fine of Rs 136 crore on internet giant Google for unfair business practices in the Indian market for online search.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X