ಇಂಡಿಗೋ ವಿಮಾನದಲ್ಲಿ ಸೀಟ್, ತಿಂಡಿ ತಿನ್ನುತ್ತಿದ್ದ ಟ್ರೇ ಟೇಬಲ್ ಮೇಲೆ ಹರಿದಾಡಿದ ಜಿರಳೆಗಳು: ವಿಡಿಯೋ

ಸಾಮಾನ್ಯವಾಗಿ ಜಿರಳೆಗಳು ಇಲ್ಲದ ಸ್ಥಳವನ್ನು ನಾವು ನೋಡಿರಲು ಸಾಧ್ಯವಿಲ್ಲ. ಒಂದು ಪಕ್ಷ ಜಿರಳೆಗಳು ಇಲ್ಲವಾದರೆ ಆ ಸ್ಥಳ ಸ್ವಚ್ಚವಾಗಿದೆ ಅಂತಲೇ ಅರ್ಥ. ಹೀಗಾಗಿ ಜಿರಳೆಗಳು ಬಾರದಿರಲು ಸ್ವಚ್ಚತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಪದೇ ಪದೇ ಕೀಟ ನಾಶಕಗಳಿಂದ ಮನೆ, ಆಫೀಸ್, ಇತ್ಯಾದಿ ಸ್ಥಳಗಳನ್ನು ಸ್ವಚ್ಚಗೊಳಿಸುವುದು ಇದೇ ಕಾರಣಕ್ಕೆ. ಆದರೆ ಹೀಗೊಂದು ವೈರಲ್ ವಿಡಿಯೋದಲ್ಲಿ ವಿಮಾನದಲ್ಲಿ ಜಿರಳೆಗಳು ಎಲ್ಲಂದರಲ್ಲಿ ಕಾಣಿಸಿಕೊಂಡಿದ್ದು ನೋಡುಗರ ಮೈ ಝುಂ ಎನಿಸಿದೆ.

ಹೇಳಿಕೇಳಿ ಇದು ವಿಮಾನ. ಪ್ರಯಾಣಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಇದರ ಪ್ರಮುಖ ಆಧ್ಯತೆ. ಹೀಗಾಗಿನ ಪ್ರಯಾಣ ದರದಲ್ಲಿ ಆಗಾಗ ಹೆಚ್ಚಳವೂ ಆಗುತ್ತಿರುತ್ತದೆ. ಪ್ರಯಾಣ ದರ ಹೆಚ್ಚಾದಂತೆ ವಿಮಾನದಲ್ಲಿ ಹೆಚ್ಚಿನ ವ್ಯವಸ್ಥೆಗಳನ್ನು ಪ್ರಯಾಣಿಕರು ನಿರೀಕ್ಷಿಸುತ್ತಾರೆ.

Cockroaches roaming around inside the flight: Watch video

ಆದರೆ ಭಾರತೀಯ ವಿಮಾನಯಾನ ಸಂಸ್ಥೆಗಳ ಸೇವೆಗಳು ಉತ್ತಮ ಮಟ್ಟದಲ್ಲಿಲ್ಲದ ಕಾರಣ ಪ್ರಯಾಣಿಕರು ಅವರ ಸೇವೆಯಿಂದ ಬೇಸರ ವ್ಯಕ್ತಪಡಿಸಿದ್ದಾರೆ. ವಿಮಾನಯಾನ ಸಂಸ್ಥೆಗಳು ವಿಮಾನದಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆಗಳ ಬಗ್ಗೆ ಖಚಿತ ಪಡಿಸಿಕೊಳ್ಳುವುದರಲ್ಲಿ ವಿಫಲವಾಗಿವೆ ಎಂದು ದೂರಲಾಗುತ್ತಿವೆ.

ಇಂಡಿಗೋ ಏರ್‌ಲೈನ್ಸ್ ಪ್ರಯಾಣಿಕರೊಬ್ಬರು ಮುಂಬೈ-ಭುವನೇಶ್ವರ ವಿಮಾನದಲ್ಲಿ ಟ್ರೇ ಟೇಬಲ್‌ನಲ್ಲಿ ಜಿರಳೆ ಓಡಾಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಪ್ರಯಾಣಿಕರು ತಿಂಡಿ ತಿನ್ನುತ್ತಿದ್ದ ಟ್ರೇ ಟೇಬಲ್ ಮೇಲೆ ಜಿರಳೆ ಓಡಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.

ಪ್ರಯಾಣಿಕರು ನಿರಾಶೆ

ವಿಡಿಯೋ ಕಂಡು ವಿಮಾನಯಾನ ಸೇವೆಯ ಬಗ್ಗೆ ಪ್ರಯಾಣಿಕರು ತುಂಬಾ ನಿರಾಶೆಗೊಂಡಿದ್ದಾರೆ. "ಇದು ನಿಜವಾಗಿಯೂ ಅನೈರ್ಮಲ್ಯ ಮತ್ತು ಸ್ವೀಕಾರಾರ್ಹವಲ್ಲ ಸಂಗತಿ" ಎಂದು ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರ ಮಧ್ಯಾಹ್ನ ಪ್ರಯಾಣಿಕರು ಭುವನೇಶ್ವರಕ್ಕೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ದೃಶ್ಯ ಕಂಡು ಬಂದಿದೆ ಎಂದು ವಿಡಿಯೋ ಶೀರ್ಷಿಕೆ ಹೇಳುತ್ತದೆ.

Cockroaches roaming around inside the flight: Watch video

ವಿಮಾನದಲ್ಲಿ ಕೀಟಗಳು ಪತ್ತೆಯಾಗಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಘಟನೆಗಳ ಬಗ್ಗೆ ಪ್ರಯಾಣಿಕರು ದೂರು ನೀಡಿದ್ದರು.

ಇಂಡಿಗೋ ವಿಮಾನದಲ್ಲಿ ಜಿರಳೆ ಪತ್ತೆ

ಇದಕ್ಕೂ ಮೊದಲು, ಗ್ರ್ಯಾಮಿ-ವಿಜೇತ ಸಂಯೋಜಕ ರಿಕಿ ಕೇಜ್ ಟ್ವಿಟರ್‌ನಲ್ಲಿ ಇಂಡಿಗೋ ವಿಮಾನದಲ್ಲಿ ಸಣ್ಣ ಜಿರಳೆ ತೋರಿಸಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಅಕ್ಟೋಬರ್ 13, 2022 ರಂದು ಪಾಟ್ನಾದಿಂದ ದೆಹಲಿಗೆ ವಿಮಾನದಲ್ಲಿದ್ದಾಗ ಕೇಜ್ ಅವರು ಕೀಟವನ್ನು ಗುರುತಿಸಿದರು. "ಅಕ್ಟೋಬರ್ 13 ರಂದು ಪಾಟ್ನಾದಿಂದ ದೆಹಲಿಗೆ @IndiGo6E ಫ್ಲೈಟ್ 6E2064 ನಲ್ಲಿ ನಮ್ಮೊಂದಿಗೆ ಜಿರಳೆ ಪ್ರಯಾಣಿಸುತ್ತಿದೆ. ಅದಕ್ಕೆ ಬೇಕಾದ ಊಟ ಸಿಕ್ಕಿದೆ ಎಂದು ನನಗೆ ಖಾತ್ರಿಯಿದೆ'' ಎಂದು ಅವರು ಬರೆದಿದ್ದರು.

Cockroaches roaming around inside the flight: Watch video

ಇದಕ್ಕೆ ಪ್ರತಿಕ್ರಿಯಿಸಿದ ಏರ್‌ಲೈನ್, "ಮಿಸ್ಟರ್ ಕೇಜ್, ಪ್ರತಿ ಹಾರಾಟದ ಮೊದಲು ಶುಚಿಗೊಳಿಸಲಾಗುತ್ತದೆ. ಕೆಲವೊಮ್ಮೆ, ಈ ಕೀಟಗಳು ಒಳಗೆ ದಾರಿ ಕಂಡುಕೊಳ್ಳುತ್ತವೆ. ಅಂತಹ ಯಾವುದೇ ಸಂದರ್ಭದಲ್ಲಿ, ಗ್ರಾಹಕರು ನಮ್ಮ ಸಿಬ್ಬಂದಿಯನ್ನು ಸಂಪರ್ಕಿಸಬಹುದು. ಅವರು ಸಹಾಯ ಮಾಡಲು ಯಾವಾಗಲೂ ಸಿದ್ದರಿರುತ್ತಾರೆ" ಎಂದು ಸಮರ್ಥಿಸಿಕೊಂಡಿತ್ತು.

ಒಂದು ದಿನದ ನಂತರ, ವಿಮಾನಯಾನ ಸಂಸ್ಥೆಯು ಕ್ಷಮೆಯಾಚಿಸಿತು. "ಮಿಸ್ಟರ್ ಕೇಜ್, ನಿಮಗೆ ಆದ ಅಹಿತಕರ ಅನುಭವಕ್ಕೆ ನಾವು ವಿಷಾದಿಸುತ್ತೇವೆ. ಆನ್‌ಬೋರ್ಡ್‌ನಲ್ಲಿ ಕೀಟವನ್ನು ಗುರುತಿಸುವುದು ಖಂಡಿತವಾಗಿಯೂ ಅಸಮಾಧಾನವನ್ನುಂಟುಮಾಡುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಇದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಪ್ರತಿ ವಿಮಾನ ನಿರ್ಗಮನದ ಮೊದಲು ನಮ್ಮ ಎಲ್ಲಾ ವಿಮಾನಗಳು ಶುಚಿಗೊಳಿಸುತ್ತೇವೆ'' ಎಂದಿತ್ತು.

"ನೀವು ಇದನ್ನು ನಮ್ಮ ಗಮನಕ್ಕೆ ತಂದ ತಕ್ಷಣ ಅದೇ ರೀತಿ ಮಾಡಲಾಗಿದೆ. ನಿಮ್ಮ ಪ್ರೋತ್ಸಾಹವನ್ನು ನಾವು ನಿಜವಾಗಿಯೂ ಗೌರವಿಸುತ್ತೇವೆ ಮತ್ತು ಉತ್ತಮ ಅನುಭವಕ್ಕಾಗಿ ಶೀಘ್ರದಲ್ಲೇ ನಿಮ್ಮನ್ನು ಸ್ವಾಗತಿಸಲು ಎದುರುನೋಡುತ್ತೇವೆ'' ಎಂದು ಪ್ರತಿಕ್ರಿಯೆ ನೀಡಿತ್ತು.

ವಿಸ್ತಾರಾ ಏರ್ಲೈನ್‌ನಲ್ಲಿ ಜಿರಳೆ

ಅಕ್ಟೋಬರ್ 14 ರಂದು ವಿಸ್ತಾರಾ ಏರ್ಲೈನ್ ​​ಪ್ರಯಾಣಿಕರೊಬ್ಬರು ಅಂತಹ ಮತ್ತೊಂದು ಘಟನೆಯನ್ನು ವರದಿ ಮಾಡಿದ್ದಾರೆ. ಪ್ರಯಾಣಿಕರು ತನ್ನ ಪ್ಯಾಕ್ ಮಾಡಿದ ಆಹಾರದಲ್ಲಿ ಜಿರಳೆ ಕಂಡುಬಂದಿದೆ ಎಂದು ಹೇಳಿದ್ದಾರೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ನಿಕುಲ್ ಸೋಲಂಕಿ ಅವರು ತಮ್ಮ ಟ್ವೀಟ್‌ನಲ್ಲಿ 'ಏರ್ ವಿಸ್ತಾರಾ ಊಟದಲ್ಲಿ ಸಣ್ಣ ಜಿರಳೆ ಇತ್ತು' ಎಂದು ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+