ಆಮ್ ಆದ್ಮಿಗೆ ಡಬಲ್ ಷಾಕ್ ನೀಡಿದ ಕಾಂಗ್ರೆಸ್

cng-prices-hiked-in-new-delhi-arvind-kejriwal-smells-foul
ನವದೆಹಲಿ, ಡಿ. 27- ಆಮ್‌ ಆದ್ಮಿ ಪಕ್ಷವು ದಿಲ್ಲಿಯಲ್ಲಿ ಅಧಿಕಾರ ಸ್ಥಾಪಿಸಲು 2 ದಿನ ಬಾಕಿಯಿರುವಾಗ ಕಾಂಗ್ರೆಸ್ ಪಕ್ಷವು ತನ್ನ ಅನುಭವಾಮೃತದಿಂದ ಎರಡೇ ಎರಡು ಹನಿಗಳನ್ನು AAPಯತ್ತ ಚಿಮುಕಿಸಿದೆ. ಇದರಿಂದ ಹೌಹಾರಿರುವ ದೆಹಲಿ ನಿಯೋಜಿತ ಮುಖ್ಯಮಂತ್ರಿ ಕಾಂಗ್ರೆಸ್ಸನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಏನಪ್ಪಾ ಅಂದರೆ ದೆಹಲಿಯಲ್ಲಿ ದಿಢೀರನೆ ಕೊಳವೆ ಮೂಲಕ ಸರಬರಾಜು ಮಾಡುವ ಅಡುಗೆ ಅನಿಲ ಮತ್ತು ಆಟೋ ಗ್ಯಾಸ್ ದರವನ್ನು ದಢೀರನೆ ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.

compressed natural gas (CNG) ದರವನ್ನು 4.50 ರೂ. ನಷ್ಟು ಹೆಚ್ಚಿಸಲಾಗಿದೆ. ದಿಲ್ಲಿಯಲ್ಲೀಗ CNG ದರ ಕೆಜಿಗೆ 50.10 ರೂ ಆಗಿದೆ. ಇದರಿಂದ ಸಾರಿಗೆ ದರಗಳು ತಕ್ಷಣಕ್ಕೆ ಹೆಚ್ಚಾಗಲಿದೆ. ಇದು ಅಧಿಕಾರಕ್ಕೇರುವ ಘಳಿಗೆಯಲ್ಲಿ AAPಗೆ ನೀಡಿದ ಚಿಕ್ಕ ಶಾಕ್ ಆಗಿದೆ.

ಹಾಗೆಯೇ, ಅಡುಗೆ ಅನಿಲದ ದರವನ್ನೂ ಏರಿಸಲಾಗಿದೆ. ಕೆಜಿಗೆ 5.15 ರೂ. ನಷ್ಟು ಏರಿಸಲಾಗಿದೆ ಎಂದು ಇಡೀ ದಿಲ್ಲಿಗೆ ಅನಿಲ ಪೂರೈಸುವ ಏಕೈಕ ಸಂಸ್ಥೆಯಾದ Indraprastha Gas Ltd ಪ್ರಕಟಿಸಿದೆ.

ಒಂದು ಘನ ಮೀಟರ್ (scm) ಅಡುಗೆ ಅನಿಲದ ಬೆಲೆ piped natural gas (PNG) ದಿಲ್ಲಿಯಲ್ಲೀಗ 30 ರೂ. ಆಗಿದೆ. ಇದು 2 ತಿಂಗಳಾವಧಿಯಲ್ಲಿ 30 scm ಅನಿಲವನ್ನು ಇದೇ ದರದಲ್ಲಿ ಪೂರೈಸಲಾಗುತ್ತದೆ. ಆನಂತರದ ಬಳಕೆಗೆ 52 ರೂ ವಿಧಿಸಲಾಗುತ್ತಿದೆ.

ಅನಿಲ ದರ ಏರಿಕೆಯನ್ನು ವಿರೋಧಿಸಿ ಕೆಲ ಆಟೋ ಯೂನಿಯನ್ನುಗಳು ಮುಷ್ಕರ ನಡೆಸುವುದಾಗಿ ಎಚ್ಚರಿಸಿದ್ದರೆ ನಿಯೋಜಿತ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲಾ ಅವರು ನೋಡಿ ಬೆಲೆ ಏರಿಕೆಗೆ ಎಂಥ ಸಂದರ್ಭವನ್ನು ಆರಿಸಿಕೊಂಡಿದ್ದಾರೆ. ಈ ದರ ಏರಿಕೆಯನ್ನು ಬೇಕಂತಲೇ ಮಾಡಲಾಗಿದೆ. ಜತೆಗೆ AAP-ವಿರೋಧಿ ಮತ್ತು ಕಾಂಗ್ರೆಸ್-ಪರ ಒಲವಿರುವ ಕೆಲವೇ ಯೂನಿಯನ್ನುಗಳು ದುರುದ್ದೇಶದಿಂದ ಇಂತಹ ಮುಷ್ಕರಕ್ಕೆ ಕೈಹಾಕುತ್ತಿವೆ. ಅಧಿಕಾರ ಸ್ವೀಕಾರದ ಬಳಿಕ ಮುಂದಿನ ವಾರ ಅನಿಲ ಪೂರೈಕೆ ಸಂಸ್ಥೆ ಜತೆ ಸಮಾಲೋಚಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಪ್ರತಿಕ್ರಿಯಿಸಿದ್ದಾರೆ.

ಮತ್ತೊಂದು ಶಾಕ್ !:
ಇತ್ತ AAP, ಜನ ಲೋಕಪಾಲ್ ಮಸೂದೆಯನ್ನು ಜಾರಿಗೊಳಿಸಿ, ಕಳೆದ 15 ವರ್ಷಗಳ ಆಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಕಾಣಿಸುವ ಆಲೋಚನೆಯಲ್ಲಿರುವಾಗ ಕಾಂಗ್ರೆಸ್ ಪಾರ್ಟಿಯು AAPಗೆ ಸಣ್ಣ ಜರ್ಕ್ ನೀಡಲು ಆಲೋಚಿಸುತ್ತಿದೆ.

ಚುನಾವಣೆ ಪ್ರಚಾರಕ್ಕಾಗಿ AAPಗೆ ವಿದೇಶಿ ದೇಣಿಗೆಗಳು ಅಪಾರ ಪ್ರಮಾಣದಲ್ಲಿ ಹರಿದುಬಂದಿದೆ. ಅದೆಲ್ಲಾ ಕಾನೂನುಬಾಹಿರವಾಗಿದೆ. ಸದ್ಯದಲ್ಲೇ ಆ ದೇಣಿಗೆ ಹರಿವುಗಳ ಬಗ್ಗೆ ತನಿಖೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದು, ತನ್ಮೂಲಕ AAP ಬಾಯಿಮುಚ್ಚಿಸುವ ಸಾಹಸಕ್ಕೆ ಕೈಮುಂದಾಗಿದೆ. ಈ ಸಂಬಂಧ AAP ನೀಡಿರುವ ಉತ್ತರದಿಂದ ಅಸಮಾಧಾನಗೊಂಡಿರುವ ಕೇಂದ್ರ ಗೃಹ ಸಚಿವಾಲಯವು ಮತ್ತಷ್ಟು ವಿವರಣೆ ಕೋರಿ AAP ಪತ್ರ ಬರೆದಿದೆ.

AAP ಮೂಲಗಳ ಪ್ರಕಾರ ನವೆಂಬರ್ 8ರವರೆಗೂ ಆ ಪಕ್ಷವು ಅನೇಕ NRIಗಳು ಸೇರಿದಂತೆ 63,000 ಮಂದಿಯಿಂದ 19 ಕೋಟಿ ರೂ. ಸಂಗ್ರಹಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+