ಪಿಎಂ ಮೋದಿ ಬಗ್ಗೆ ದಿನೇಶ್ ಅಮಿನ್ ಮಟ್ಟು ಕಾಮೆಂಟ್ ಸರಿಯೆ?

Posted By:
Subscribe to Oneindia Kannada

ಹಿರಿಯ ಪತ್ರಕರ್ತ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ಈಗ ವ್ಯಾಪಕ ಚರ್ಚೆಗೊಳಗಾಗಿದೆ. ಎಂದಿನಂತ ಮಟ್ಟು ಅವರ ಪೋಸ್ಟ್ ಅನ್ನು ಸಮರ್ಥಿಸಿಕೊಳ್ಳುವವರು ಒಂದೆಡೆಯಾದರೆ, ವಿರೋಧಿಸುವವರು ಇನ್ನೊಂದೆಡೆ.

ಪಠಾಣ್ ಕೋಟ್ ವಾಯುನೆಲೆಯಲ್ಲಿ ಉಗ್ರಗಾಮಿಗಳ ವಿರುದ್ದ ಭಾರತದ ರಕ್ಷಣಾ ಪಡೆಯ ದಾಳಿಯ ವೇಳೆ ದೇಶದ ಭದ್ರತೆಗೆ ದಕ್ಕೆಯುಂಟಾಗಿದೆ ಎಂದು ಎನ್ಡಿಟಿವಿ ಹಿಂದಿ ವಾಹಿನಿಯನ್ನು ನ 9ರಂದು ಒಂದು ದಿನ ಸ್ಥಗಿತಗೊಳಿಸಲು ಕೇಂದ್ರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಮಟ್ಟು ತಮ್ಮ ಟೈಂಲೈನಿನಲ್ಲಿ ಬರೆದುಕೊಂಡಿದ್ದರು. [ಹೈಗ್ರೌಂಡ್ಸ್ ನಲ್ಲಿ ಮಟ್ಟು ವಿರುದ್ಧ ಕೇಸ್ ದಾಖಲಿಸಿದ ಬಿಜೆಪಿ]

ಮಟ್ಟು ಅವರ ಸ್ಟೇಟಸಿಗೆ ಪರ, ವಿರೋಧ ಕಾಮೆಂಟುಗಳು ಬರಲಾರಂಭಿಸಿತು. ಸಿದ್ದರಾಮಯ್ಯ ಸರಕಾರ ಈ ಹಿಂದೆ ಟಿವಿ9 ವಾಹಿನಿಯನ್ನು ಸ್ಥಗಿತಗೊಳಿಸಲು ಆದೇಶಿಸಿದ್ದು ಸರಿಯೇ, ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ್ದು ಮರೆತು ಬಿಟ್ರಾ ಹೇಗೆ ಎನ್ನುವ ಕಾಮೆಂಟುಗಳೂ ಬಂದಿದ್ದವು.

ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಕಾಮೆಂಟಿಗೆ ಮಟ್ಟು ಅವರು ಪ್ರತಿಕ್ರಿಯಿಸುತ್ತಾ, ಇಂದಿರಾ ಗಾಂಧಿಗೆ ಕೊನೆಗೆ ಏನಾಯಿತು, ಗೊತ್ತಲ್ವಾ? ಅದೇ ನಿಮ್ಮ ಮೋದಿಯವರಿಗೂ ಅಗಬೇಕೆಂದು ನಿಮ್ಮ ಆಸೆಯೇ ಎಂದು ಮಟ್ಟು ಕಾಮೆಂಟಿಗೆ ಉತ್ತರಿಸಿದ್ದರು. ಮುಂದೆ ಓದಿ...

ಮಟ್ಟು ಫೇಸ್ ಬುಕ್ ಸ್ಟೇಟಸ್

ಮಟ್ಟು ಫೇಸ್ ಬುಕ್ ಸ್ಟೇಟಸ್

'ನಿಮ್ಮ ಮೋದಿಯವರಿಗೂ ಆಗಬೇಕೆಂದು ನಿಮ್ಮ ಆಸೆಯೇ' ಎನ್ನುವ ಮಟ್ಟು ಪ್ರತಿಕ್ರಿಯೆಗೆ ಭಾರೀ ಪ್ರತಿರೋಧ ವ್ಯಕ್ತವಾಗುತ್ತಿದ್ದು, ಪ್ರತಿಕ್ರಿಯೆಯ ಆಯ್ದ ಭಾಗವನ್ನಷ್ಟೇ ಕತ್ತರಿಸಿ ಅದಕ್ಕೆ ಕಲ್ಪಿತ ವ್ಯಾಖ್ಯಾನಗಳನ್ನು ಸೇರಿಸಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಮಟ್ಟು ಮತ್ತೊಂದು ಪೋಸ್ಟ್ ಹಾಕಿದ್ದಾರೆ.

ಚರ್ಚೆಯ ಹಾದಿ ತಪ್ಪಿಸಲು ಒಂದಿಷ್ಟು ಬಾಲಿಷ ಪ್ರಶ್ನೆ

ಚರ್ಚೆಯ ಹಾದಿ ತಪ್ಪಿಸಲು ಒಂದಿಷ್ಟು ಬಾಲಿಷ ಪ್ರಶ್ನೆ

ಕೇಂದ್ರ ಸರಕಾರದ ನಡೆಯನ್ನು ವಿರೋಧಿಸುತ್ತಿರುವವರ ಮೇಲೆ ಯಥಾಪ್ರಕಾರ ಒಂದಷ್ಟು ಟ್ರೋಲ್ ಗಳು ಎರಗಿಬೀಳುತ್ತಿದ್ದಾರೆ. ಕೆಲವರು ಚರ್ಚೆಯ ಹಾದಿ ತಪ್ಪಿಸಲು ಒಂದಿಷ್ಟು ಬಾಲಿಷ ಪ್ರಶ್ನೆಗಳನ್ನೂ ಕೇಳುತ್ತಿದ್ದಾರೆ. ಅಂತಹವರಿಗೂ ಕೆಲವು ಪ್ರಶ್ನೆಗಳಿವೆ ಎಂದು ಆರು ಪ್ರಶ್ನೆಗಳನ್ನು ಮಟ್ಟು ತಮ್ಮ ಟೈಂಲೈನಿನಲ್ಲಿ ಬರೆದುಕೊಂಡಿದ್ದರು.

ಬೆಂಗಳೂರು ಪೊಲೀಸ್ ಕಮಿಷನರ್

ಬೆಂಗಳೂರು ಪೊಲೀಸ್ ಕಮಿಷನರ್

ಎನ್ ಡಿಟಿವಿ ವಿರುದ್ದದ ಕ್ರಮವನ್ನು ಖಂಡಿಸುವ ನೀವು ಬೆಂಗಳೂರು ಪೊಲೀಸ್ ಕಮಿಷನರ್ ಟಿವಿ ಚಾನೆಲ್ ಗಳ ವಿರುದ್ಧ ಕೈಗೊಂಡಿರುವ ಕ್ರಮವನ್ನು ಹೇಗೆ ಸಮರ್ಥಿಸುತ್ತೀರಿ ಎಂದು ಕೆಲವರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಪೊಲೀಸ್ ಕಮಿಷನರ್ ಅವರು ಕೇಬಲ್ ಟೆಲಿವಿಷನ್ ನೆಟ್ ವರ್ಕ್ (ರೆಗ್ಯುಲೇಷನ್) 1995ರ ಕಾಯಿದೆಯಡಿ ‘ಸಲಹಾ ಪತ್ರ (Advisory)ವನ್ನು ಟಿವಿ ಚಾನೆಲ್ ಗಳಿಗೆ ಕಳಿಸಿದ್ದಾರೆ ಎಂದು ಮಟ್ಟು ತಮ್ಮ ಸ್ಟೇಟಸ್ ಬಲ್ಲಿ ಬರೆದುಕೊಂಡಿದ್ದರು.

'ಭಕ್ತಿ' ಯ ಜತೆ ಸ್ವಲ್ಪ ಬುದ್ದಿಯನ್ನು ಬೆಳೆಸಿ

'ಭಕ್ತಿ' ಯ ಜತೆ ಸ್ವಲ್ಪ ಬುದ್ದಿಯನ್ನು ಬೆಳೆಸಿ

Advisory ಗಳನ್ನು ಇಂದಿನ ಮತ್ತು ಹಿಂದಿನ ಕೇಂದ್ರ ಸರ್ಕಾರಗಳು ಹಲವಾರು ಬಾರಿ ನೀಡಿವೆ. ಇತ್ತೀಚೆಗೆ ಕಾವೇರಿ ಜಲವಿವಾದ ಸಂಬಂಧಿ ಗಲಭೆಯ ಸಮಯದಲ್ಲಿ ಕೂಡಾ ಕೇಂದ್ರ ಸರ್ಕಾರ ಟಿವಿ ಚಾನೆಲ್ ಗಳಿಗೆ ಇಂತಹ Advisory ಕಳುಹಿಸಿತ್ತು. ಇದನ್ನೇ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಳುಹಿಸಿದ್ದಾರೆ. ಅಂತಹ ಸಂದರ್ಭಗಳಲ್ಲಿ ಯಾವ ಚಾನೆಲ್ ಕೂಡಾ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಪ್ರತಿಭಟಿಸಿರಲಿಲ್ಲ. 'ಭಕ್ತಿ' ಯ ಜತೆ ಸ್ವಲ್ಪ ಬುದ್ದಿಯನ್ನು ಬೆಳೆಸಿಕೊಂಡರೆ ಎಲ್ಲರಿಗೂ ಕ್ಷೇಮ ಎಂದು ದಿನೇಶ್ ಅಮಿನ್ ಮಟ್ಟು ಹೇಳಿದ್ದರು.

ಕಾಂಗ್ರೆಸ್ ಮಾಡಿದ್ದು ಸರೀನಾ

ಕಾಂಗ್ರೆಸ್ ಮಾಡಿದ್ದು ಸರೀನಾ

ಬಿಜೆಪಿ ಸರಕಾರ ಎನ್ಡಿಟಿವಿಯನ್ನು ಒಂದು ದಿನ ಸ್ಥಗಿತಗೊಳಿಸಿದ್ದು ಎಮರ್ಜೆನ್ಸಿ, ಕಾಂಗ್ರೆಸ್ ಸರಕಾರ ಎಎಕ್ಸ್ಎನ್, ಎಫ್ ಟಿವಿ, ಸಿನಿ ವರ್ಲ್ಡ್, ಜನ್ಮತ್ ಟಿವಿಯನ್ನು ಸ್ಥಗಿತಗೊಳಿಸಿದ್ದು ಡೆಮೊಕ್ರೆಸಿಯಾ ಎಂದು ವೆಂಕಟೇಶ್ ಲಕ್ಕನಗೌಡರ್ ಪ್ರತಿಕ್ರಿಯಿಸುತ್ತಿದ್ದರು.

ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ್ದು ಮರೆತು ಬಿಟ್ರಾ ಹೇಗೆ

ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ್ದು ಮರೆತು ಬಿಟ್ರಾ ಹೇಗೆ

ಇದಕ್ಕೆ ಪ್ರತಿಕ್ರಿಯಿಸುತ್ತಾ ಮಟ್ಟು, ' ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ್ದು ಮರೆತು ಬಿಟ್ರಾ ಹೇಗೆ?' ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ನಾನು 'ಇಂದಿರಾಗಾಂಧಿಗೆ ಕೊನೆಗೆ ಏನಾಯಿತು ಗೊತ್ತಲ್ಲ? ಅದೇ ನಿಮ್ಮ ಮೋದಿಯವರಿಗೂ.ಆಗಬೇಕೆಂದು ನಿಮ್ಮ.ಆಸೆಯೇ? ಎಂದು ಕೇಳಿದ್ದೆ . ಈ ಪ್ರತಿಕ್ರಿಯೆಯ.ಆಯ್ದ ಭಾಗವನ್ನಷ್ಟೇ ಕತ್ತರಿಸಿ ಅದಕ್ಕೆ ಕಲ್ಪಿತ ವ್ಯಾಖ್ಯಾನಗಳನ್ನು ಸೇರಿಸಿ ಅಪಪ್ರಚಾರ ಮಾಡಲಾಗುತ್ತಿದೆ. ಈ ಕಂಟಕ ಪ್ರಿಯರಿಗೆ. ಅವರು ನಂಬಿರುವ ದೇವರು ಸದ್ಬುದ್ದಿ ಕರುಣಿಸಲಿ ಎಂದು ಹಾರೈಸುತ್ತೇನೆ. ಎಂದು ಮಟ್ಟು ಪ್ರತ್ಯುತ್ತರ ನೀಡಿದ್ದರು.

ಅರವಿಂದ್ ಲಿಂಬಾವಳಿ

ಅರವಿಂದ್ ಲಿಂಬಾವಳಿ

ಮಟ್ಟು ಅವರ ಉತ್ತರಕ್ಕೆ ಖಾರವಾಗಿ ಉತ್ತರಿಸಿರುವ ಬಿಜೆಪಿ ಮುಖಂಡ ಅರವಿಂದ್ ಲಿಂಬಾವಳಿ, ದಿನೇಶ್ ಅವರನ್ನು ಕೂಡಲೇ ಬಂಧಿಸಬೇಕು, ಬಿಜೆಪಿ ಕಾನೂನು ಘಟಕ ಅವರ ವಿರುದ್ದ ದೂರು ದಾಖಲಿಸಲಿದೆ ಎಂದು ಅಂಬಾವಳಿ ಟ್ವೀಟ್ ಮಾಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief Minister Siddaramaiah's Media adviser and senior journalist Dinesh Mattus Facebook post and the controversy surrounding it. The Flame War!
Please Wait while comments are loading...