CJP: ಅಕ್ರಮ ಪ್ರವೇಶ, ಸಿಜೆಪಿ ನಾಯಕರ ಬಂಧನ, 5 ದಿನ ತಿಹಾರ ಜೈಲಿಗೆ! ಅಜಿಂಕ್ಯ ಶಿಂಧೆ ಬಿಡುಗಡೆ

ನವದೆಹಲಿ: ದೆಹಲಿಯ ಜಂತರ್ ಮಂತರ್‍‌ಗೆ ಅಕ್ರಮವಾಗಿ ಪ್ರವೇಶ ಮಾಡಿ, ಬಾಂಡ್ ಷರತ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಮೂವರನ್ನು ಬಂಧಿಸಲಾಗಿದೆ. ಸಿಜೆಪಿ ಮುಖಂಡರಾದ ಸೌರವ್ ದಾಸ್, ಅಶುತೋಷ್ ರಂಕಾ ಮತ್ತು ಅಜಿಂಕ್ಯ ಶಿಂಧೆ ಅವರಿಗೆ 5 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಪೊಲೀಸರು ಅವರನ್ನು ತಿಹಾರ್ ಜೈಲಿಗೆ ಕಳುಹಿಸಿದ್ದಾರೆ. ಇದರಲ್ಲಿ ಅಜಿಂಕ್ಯ ಅವರು ಬಿಡುಗಡೆ ಆಗಿದೆ.

ದೆಹಲಿಯ ಜಂತರ್ ಮಂತರ್ ಪ್ರತಿಭಟನಾ ಸ್ಥಳವಾಗಿತ್ತು. ಅಕ್ಟೋಬರ್ 13ರಂದು ಕೇಂದ್ರ ಚುನಾವಣಾ ಆಯೋಗ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಾಗಿ ಜಂತರ್ ಮಂತರ್‌ ಪ್ರವೇಶಿಸಿದ್ದರು. ಕೇಂದ್ರ ಸರ್ಕಾರ ಜಂತರ್ ಮಂತರ್ ಸ್ಥಳ ಪ್ರತಿಭಟನಾ ಸ್ಥಳವಲ್ಲ ಎಂದು ಆದೇಶ ಹೊರಡಿಸಿದ ಮರುದಿನವೇ ಪ್ರತಿಭಟನೆ ಹೆಸರಲ್ಲಿ ನಿಯಮ ಉಲ್ಲಂಘಿಸಿದ್ದರಿಂದ ಸಿಜೆಪಿ ಮುಖಂಡರನ್ನು ಇಂದು ಬುಧವಾರ ಬಂಧನವಾಗಿದೆ.

CJP Saurav Das

ಬಂಧಿತ ಸಿಜೆಪಿ ನಾಯಕರನ್ನು ಇಂದು ಬೆಳಗ್ಗೆ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ಅವರ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಅವರಿಗೆ 5 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದರು ಎಂದು ಪಿಟಿಐ ವರದಿ ಮಾಡಿದೆ.

ಸಿಜೆಪಿ ಬಂಧಿತ ನಾಯಕರ ವಿರುದ್ಧ ಜಂತರ್ ಮಂತರ್ ಅತಿಕ್ರಮ ಪ್ರವೇಶ, ನಿಷೇಧಾಜ್ಞೆಗಳ ಉಲ್ಲಂಘನೆ, ಶಾಂತಿ ಪಾಲನೆಯ ಮುಚ್ಚಳಿಕೆ ಉಲ್ಲಂಘನೆ ಮತ್ತು ಸರ್ಕಾರಿ ನೌಕರರು ತಮ್ಮ ಕರ್ತವ್ಯ ನಿರ್ವಹಿಸುವುದಕ್ಕೆ ಅಡ್ಡಿಪಡಿಸಿದ ಆರೋಪಗಳು ಕೇಳಿ ಬಂದಿವೆ.

ಅಜಿಂಕ್ಯ ಶಿಂಧೆ ಬಿಡುಗಡೆ ಹೇಗೆ?

ಸಿಜೆಪಿ ಬಂಧಿತ ಮೂವರು ನಾಯಕರ ಪೈಕಿ ಅಜಿಂಕ್ಯ ಶಿಂಧೆ ಅವರು ಶಾಂತಿ ಬಾಂಡ್‌ಗೆ ಸಹಿ ಹಾಕಿದ್ದಾರೆ. ಬಾಂಡ್ ಪ್ರಕ್ರಿಯೆ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಅವರನ್ನು ಬಿಡುಗಡೆ ಮಾಡಿ ಕಳುಹಿಸಲಾಗಿದ್ದು, ಉಳಿದಿಬ್ಬರು ತಿಹಾರ ಜೈಲಿನಲ್ಲಿದ್ದಾರೆ.

ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್ ಐ ಆರ್) ವಿರೋಧಿಸಿ, ಇಸಿಐ ಮುಖ್ಯ ಚನಾವಣಾಧಿಕಾರಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ಪ್ರತಿಭಟನೆಗೆ ನಿರ್ಧರಿಸಲಾಗಿತ್ತು. ಈ ವೇಳೆ ಅಕ್ರಮವಾಗಿ ಜಂತರ್ ಮಂತರ್ ಅನ್ನು ಸಿಜೆಪಿ ನಾಯಕರು ಪ್ರವೇಶಿಸಿದ್ದರು.

ಜ್ಞಾನೇಶ್ ರಾಜೀನಾಮೆ ಬಗ್ಗೆ ಸಿಜೆಪಿ ಎಚ್ಚರಿಕೆ

ಈ ಹಿಂದೆ ನೀಟ್ ಪರೀಕ್ಷಾ ಅಕ್ರಮ ವಿರುದ್ಧ ಇದೇ ಸಿಜೆಪಿ ಪಕ್ಷದಿಂದ ದೆಹಲಿ ಜಂತರ್ ಮಂತರ್‌ನಲ್ಲಿ ತೀವ್ರ ಪ್ರತಿಭಟನೆ ನಡೆದಿತ್ತು. ಆಗಲೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ನೀಡುವಂತೆ ಮಾಡಲಾಯಿತು. ಈ ಬಾರಿಯು ಜಂತರ್ ಮಂತರ್‌ನಿಂದಲೇ ಜ್ಞಾನೇಶ್ ಕುಮಾರ್ ರಾಜೀನಾಮೆ ಖಚಿತ ಎಂದು ಸಿಜೆಪಿ ಎಚ್ಚರಿಕೆ ಕೊಟ್ಟಿತ್ತು. ಪ್ರತಿಭಟನೆಗೂ ಮುನ್ನ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸಿಜೆಪಿ ನಾಯಕರನ್ನು, ನಿಯಮ ಉಲ್ಲಂಘಿಸಿದವರನ್ನು ಬಂಧಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+