Cigarettes, Pan Masala Price: ಇಂದಿನಿಂದಲೇ ಸಿಗರೇಟು, ಪಾನ್ ಮಸಾಲಾ ದುಬಾರಿ: ಬಾಯಿ ಜೊತೆ ಜೇಬು ಸುಡಲಿದೆ ಈ ದರಗಳು
Cigarettes, Pan Masala Price: ಹೊಸ ಅಬಕಾರಿ ಸುಂಕ ಜಾರಿಗೆ ಬಂದ ಹಿನ್ನೆಲೆ ಇಂದಿನಿಂದ ಸಿಗರೇಟು ಮತ್ತು ಪಾನ್ ಮಸಾಲಾ ಉತ್ಪನ್ನಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಕೇಂದ್ರ ಬಜೆಟ್ 2026 ಮಂಡನೆಗೂ ಮುನ್ನವೇ ಇವುಗಳ ದರ ದುಬಾರಿಯಾಗಿದೆ. ಹಾಗಾದ್ರೆ, ಯಾವುದರ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸರ್ಕಾರ ವಿಧಿಸಿರುವ ಹೆಚ್ಚುವರಿ ಸುಂಕದ ಪರಿಣಾಮವಾಗಿ ತಂಬಾಕು ಉತ್ಪನ್ನಗಳ ದರದಲ್ಲಿ ಹೆಚ್ಚಳವಾಗಿದ್ದು, ಇದರಿಂದ ವ್ಯಸನಿಗಳ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದಿನಿಂದ (ಫೆಬ್ರವರಿ 1) ಸಿಗರೇಟು, ತಂಬಾಕು ಮತ್ತು ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈಗಾಗಲೇ ಅತಿ ಹೆಚ್ಚು ಜಿಎಸ್ಟಿ (GST) ಶ್ರೇಣಿಯಲ್ಲಿ ತೆರಿಗೆ ವಿಧಿಸಲಾಗುತ್ತಿದ್ದ ಈ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಹಾಗೂ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಅನ್ನು ವಿಧಿಸಲಾಗಿದೆ.
ಈ ಕ್ರಮದೊಂದಿಗೆ ತಂಬಾಕು ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗಿದೆ ಎನ್ನಲಾಗುತ್ತಿದೆ. ಸಾರ್ವಜನಿಕ ಆರೋಗ್ಯ ಮತ್ತು ಭದ್ರತೆ ಸಂಬಂಧಿತ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಈ ಕ್ರಮವು 2017ರಲ್ಲಿ ಜಿಎಸ್ಟಿ ಜಾರಿಗೆ ಬಂದ ಬಳಿಕ "ಸಿನ್ ಗುಡ್ಸ್" ಎಂದು ಕರೆಯಲಾಗುವ ಉತ್ಪನ್ನಗಳ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ನಡೆದ ಅತ್ಯಂತ ಮಹತ್ವದ ಹಾಗೂ ದೊಡ್ಡ ಮಟ್ಟದ ಬದಲಾವಣೆಯಾಗಿ ಪರಿಗಣಿಸಲಾಗುತ್ತಿದೆ.
ಹೊಸ ಪರಿಷ್ಕೃತ ತೆರಿಗೆ ರಚನೆಯಡಿ, ಈಗಿರುವ 28 ಶೇಕಡಾ ಜಿಎಸ್ಟಿ ಹಾಗೂ ಪರಿಹಾರ ಸೆಸ್ ಬದಲು 40 ಶೇಕಡಾ ಜಿಎಸ್ಟಿ ವಿಧಿಸಲಾಗುತ್ತದೆ. ಇದರ ಜೊತೆಗೆ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಎಕ್ಸೈಸ್ ಸುಂಕ ಹಾಗೂ ಪಾನ್ ಮಸಾಲಾಗೆ ಪ್ರತ್ಯೇಕ ಸೆಸ್ ಜಾರಿಗೆ ತರಲಾಗಿದೆ.
ಅಲ್ಲದೆ, ಚ್ಯೂಯಿಂಗ್ ತಂಬಾಕು, ಫಿಲ್ಟರ್ ಖೈನಿ, ಜರ್ದಾ ಸುಗಂಧಿತ ತಂಬಾಕು ಹಾಗೂ ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳಿಗೆ ಹೊಸ ಎಂಆರ್ಪಿ (ಗರಿಷ್ಠ ಚಿಲ್ಲರೆ ಬೆಲೆ) ಆಧಾರಿತ ಮೌಲ್ಯ ನಿರ್ಧಾರ ವ್ಯವಸ್ಥೆಯನ್ನು ಸರ್ಕಾರ ಅಧಿಸೂಚನೆ ಮೂಲಕ ಜಾರಿಗೆ ತಂದಿದೆ.
ಫೆಬ್ರವರಿ 1ರಿಂದ ಈ ಉತ್ಪನ್ನಗಳ ಮೇಲೆ ವಿಧಿಸಲಾಗುವ ಜಿಎಸ್ಟಿ, ಪ್ಯಾಕೆಟ್ ಮೇಲೆ ಘೋಷಿಸಿರುವ ಚಿಲ್ಲರೆ ಮಾರಾಟ ಬೆಲೆಯ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಕಡಿಮೆ ಮೌಲ್ಯ ತೋರಿಸಿ ತೆರಿಗೆ ತಪ್ಪಿಸುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ.
ಯಾವ ಸಿಗರೇಟ್ಗೆ ಎಷ್ಟು ದರ?: ಸಿಗರೇಟುಗಳ ಮೇಲೆ ಉದ್ದದ ಆಧಾರದಲ್ಲಿ ಎಕ್ಸೈಸ್ ಸುಂಕ ವಿಧಿಸಲಾಗುತ್ತದೆ. 65 ಮಿ.ಮೀ.ವರೆಗೆ ಇರುವ ಚಿಕ್ಕ ನಾನ್-ಫಿಲ್ಟರ್ ಸಿಗರೇಟುಗಳಿಗೆ ಪ್ರತಿ ಸ್ಟಿಕ್ಗೆ ಸುಮಾರು 2.05 ರೂಪಾಯಿ ಹೆಚ್ಚುವರಿ ಸುಂಕ ವಿಧಿಸಲಾಗುತ್ತದೆ.
ಚಿಕ್ಕ ಫಿಲ್ಟರ್ ಸಿಗರೇಟುಗಳಿಗೆ ಸುಮಾರು 2.10 ರೂಪಾಯಿ ಸುಂಕ ಇರಲಿದೆ. 65-70 ಮಿ.ಮೀ. ಉದ್ದದ ಸಿಗರೇಟುಗಳಿಗೆ ಪ್ರತಿ ಸ್ಟಿಕ್ಗೆ 3.6 ರಿಂದ 4 ರೂಪಾಯಿವರೆಗೆ, 70-75 ಮಿ.ಮೀ. ಉದ್ದದ ಸಿಗರೇಟುಗಳಿಗೆ ಸುಮಾರು 5.4 ರೂಪಾಯಿ ಸುಂಕ ವಿಧಿಸಲಾಗುತ್ತದೆ. ವಿಶೇಷ ವಿನ್ಯಾಸದ ಸಿಗರೇಟುಗಳಿಗೆ ಗರಿಷ್ಠ 8.50 ರೂಪಾಯಿ ಪ್ರತಿ ಸ್ಟಿಕ್ಗೆ ಸುಂಕ ವಿಧಿಸಲಾಗಿದೆ.
ಪಾನ್ ಮಸಾಲ ಮೇಲಿನ ಸುಂಕದ ವಿವರ: ಮತ್ತೊಂದೆಡೆ ಚ್ಯೂಯಿಂಗ್ ಟೊಬ್ಯಾಕೊ ಮತ್ತು ಜರ್ದಾ ಸುಗಂಧಿತ ತಂಬಾಕುಗಳ ಮೇಲೆ 82 ಶೇಕಡಾ ಎಕ್ಸೈಸ್ ಸುಂಕ ವಿಧಿಸಲಾಗುತ್ತಿದ್ದು, ಗುಟ್ಕಾದ ಮೇಲೆ 91 ಶೇಕಡಾ ತೆರಿಗೆ ವಿಧಿಸಲಾಗಿದೆ. ಪಾನ್ ಮಸಾಲಾಗೆ ಒಟ್ಟಾರೆ 88 ಶೇಕಡಾ ತೆರಿಗೆ ಮುಂದುವರಿಯಲಿದ್ದು, ಹೊಸ ಸೆಸ್ ಅನ್ನು ಉತ್ಪಾದನಾ ಸಾಮರ್ಥ್ಯದ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ.
ತಯಾರಕರು ಪಾಲಿಸಬೇಕಾದ ನಿಯಮಗಳು: ಪಾನ್ ಮಸಾಲಾ ತಯಾರಕರು ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಕಾಯ್ದೆಯಡಿ ಹೊಸ ನೋಂದಣಿ ಪಡೆಯಬೇಕಾಗಿದ್ದು, ಪ್ಯಾಕಿಂಗ್ ಯಂತ್ರಗಳ ಮೇಲೆ ಸಿಸಿಟಿವಿ ಅಳವಡಿಕೆ, ಕನಿಷ್ಠ 24 ತಿಂಗಳು ದೃಶ್ಯ ಸಂಗ್ರಹಣೆ ಸೇರಿದಂತೆ ಕಠಿಣ ನಿಗಾ ನಿಯಮಗಳನ್ನು ಪಾಲಿಸಬೇಕು.
ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್ಗೆ ಭೇಟಿ ನೀಡಿ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications