• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಡಿಯಲ್ಲಿ 40 ಸಾವಿರ ಸೈನಿಕರು: ಭಾರತಕ್ಕೆ ಕೊಟ್ಟ ಮಾತು ಮರೆತ ಚೀನಾ

|

ನವದೆಹಲಿ, ಜುಲೈ 22: ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ ನಡುವೆ ಘರ್ಷಣೆ ಸಂಭವಿಸಿದ ಬಳಿಕ ಎಲ್‌ಎಸಿಯಿಂದ ಸೇನೆಯನ್ನು ಹಿಂದಕ್ಕೆ ಪಡೆಯುವ ಭರವಸೆಯನ್ನು ಚೀನಾ ನೀಡಿತ್ತು.

ಇದೀಗ ಎಲ್‌ಎಸಿಯಲ್ಲಿ 40 ಸಾವಿರ ಚೀನಾ ಸೈನಿಕರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಚೀನಾ ಭಾರತಕ್ಕೆ ಕೊಟ್ಟ ಮಾತನ್ನು ಮುರಿಯಿತೇ ಎಂಬ ಅನುಮಾನ ಎದುರಾಗಿದೆ.

ಭಾರತ-ಚೀನಾ ಗಡಿಯಲ್ಲಿ ಸನ್ನದ್ಧರಾಗಿರಿ: ರಾಜನಾಥ್ ಸಿಂಗ್

ಲಡಾಖ್‌ನಲ್ಲಿ ಘರ್ಷಣೆ ನಡೆದ ಬಳಿಕ ಸೇನೆ ಹಂತದಲ್ಲಿ ಸಾಕಷ್ಟು ಬಾರಿ ಮಾತುಕತೆ ನಡೆದಿದ್ದರೂ ಸೇನೆಯನ್ನು ಹಿಂದಕ್ಕೆ ಪಡೆದುಕೊಳ್ಳಲು ಚೀನಾ ಸಿದ್ಧವಿರಲಿಲ್ಲ. ಹಲವು ಸುತ್ತಿನ ಮಾತುಕತೆ ಬಳಿಕ ಒಪ್ಪಿಕೊಂಡು ಸ್ವಲ್ಪ ದಿನಗಳ ಕಾಲ ಗಡಿಯಿಂದ ದೂರ ನೆಲೆಸಿತ್ತು. ಆದರೆ ಇದೀಗ ಲಡಾಖ್‌ ಎಲ್‌ಎಸಿ ಬಳಿ ಚೀನಾದ 40 ಸಾವಿರಕ್ಕೂ ಅಧಿಕ ಸೈನಿಕರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಚೀನಾವು ಹಿಂದೆ ಸರಿಯುವಂತೆ ನಡೆದುಕೊಂಡರೂ ಯಾಕೆ 40 ಸಾವಿರ ಸೈನಿಕರನ್ನು ನೇಮಿಸಿದೆ ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಜುಲೈ 14-15ರಂದು ಕಮಾಂಡರ್ ಹಂತದ ಮಾತುಕತೆಯಲ್ಲಿ ಎರಡೂ ದೇಶದ ಸೈನಿಕರು ಆ ಪ್ರದೇಶದಲ್ಲಿ ಇರಕೂಡದು, ತಮ್ಮ ಶಾಶ್ವತ ನೆಲೆಗೆ ತೆರಳಬೇಕು. ಒಂದು ವಾರದ ಬಳಿಕ ಮತ್ತೆ ಎರಡೂ ಸೇನೆಯು ಮರು ಪರಿಶೀಲನೆ ಮಾಡಬೇಕು ಎಂದು ಹೇಳಿತ್ತು.

ಇಂದು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಮಾತನಾಡಿ, ಚೀನಾ ಯಾವಾಗ ಬೇಕಾದರೂ ದಾಳಿ ಮಾಡಬಹುದು ಎಲ್‌ಎಸಿ ಬಳಿ ಸನ್ನದ್ಧರಾಗುವಂತೆ ಭಾರತೀಯ ಸೈನಿಕರಿಗೆ ಸೂಚನೆ ನೀಡಿದ್ದರು.

English summary
It seems that the People's Liberation Army (PLA) is not in a mood to de-escalate the situation on the Line of Actual Control (LAC) as it has continued deployment of around 40,000 troops in its front and depth areas for the Eastern Ladakh sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X