ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ 3ನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ, ಕೇಂದ್ರ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಮೇ 22: ಕೊರೊನಾದ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇದಕ್ಕೆ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಕೋವಿಡ್-19 2ನೇ ಅಲೆಯಿಂದಾಗಿ ತತ್ತರಿಸಿ ಹೋಗಿರುವ ಭಾರತದಲ್ಲಿ ಇದೀಗ ಮಾರಕ ಸೋಂಕಿನ 3ನೇ ಅಲೆಯ ಭೀತಿ ಕಾಡುತ್ತಿದ್ದು, ಪ್ರಮುಖವಾಗಿ ಮಕ್ಕಳ ಆರೋಗ್ಯದ ಕುರಿತು ಪೋಷಕರಿಗೆ ಭಾರಿ ಚಿಂತೆ ಕಾಡುತ್ತಿದೆ.

ಇದರ ನಡುವೆಯೇ ಕೇಂದ್ರ ಸರ್ಕಾರ ಮೂರನೇ ಅಲೆ ಕುರಿತಂತೆ ಸ್ಪಷ್ಟನೆ ನೀಡಿದ್ದು, ಮಾರಕ ಕೊರೊನಾವೈರಸ್ ಸಾಂಕ್ರಾಮಿಕದ 3ನೇ ಅಲೆಯಿಂದ ಮಕ್ಕಳು ಸುರಕ್ಷಿತವಾಗಿಲ್ಲ.

VK Paul

ಆದರೆ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಕೋವಿಡ್ ಸೋಂಕಿನ ಪರಿಣಾಮ ಕಡಿಮೆ ಇರುತ್ತದೆ ಎಂದು ನೀತಿ ಆಯೋಗ (ಆರೋಗ್ಯ)ದ ಸದಸ್ಯ ವಿಕೆ ಪಾಲ್ ಹೇಳಿದ್ದಾರೆ.

ಮೂರನೇ ಅಲೆ ಸಂಪೂರ್ಣವಾಗಿ ಮಕ್ಕಳ ಮೇಲೆ ಮಾತ್ರ ಪ್ರಭಾವ ಬೀರುತ್ತದೆ ಎಂದು ನಾವು ಭಾವಿಸಬಾರದು. ಕೋವಿಡ್ ನಿಯಮಾವಳಿಗಳನ್ನು ತಪ್ಪದೇ ಪಾಲಿಸಬೇಕು ಎಂದು ಹೇಳಿದರು.

ಕೋವಿಡ್-19 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದ್ದು, ಮಕ್ಕಳಿಗೆ ಸೋಂಕು ತಗುಲಬಹುದು, ಅವರಿಂದ ಇತರರಿಗೆ ವೇಗವಾಗಿ ಪ್ರಸರಣ ಕೂಡ ಆಗಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

'ಮಕ್ಕಳಿಗೆ ಸೋಂಕು ತಗುಲಬಹುದು. ಅವರಿಂದ ಇತರರಿಗೆ ಪ್ರಸರಣ ಕೂಡ ಆಗಬಹುದು. ಅದರೆ ಮಕ್ಕಳಲ್ಲಿ ಸೋಂಕಿನ ಕನಿಷ್ಠ ಲಕ್ಷಣಗಳು ಕಂಡುಬರುತ್ತದೆ. ಸಾಮಾನ್ಯವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯ ಬೀಳುವುದಿಲ್ಲ. ಮನೆಯಲ್ಲೇ ಅವರಿಗೆ ಚಿಕಿತ್ಸೆ ನೀಡಬಹುದು ಎಂದು ಪಾಲ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಸಾಕಷ್ಟು ಜಿಲ್ಲೆಗಳಲ್ಲಿ ದೈನಂದಿನ ಸೋಂಕು ಪ್ರಮಾಣ ಒಂದಂಕಿಗೆ ಕುಸಿದಿದೆ. ಸೋಂಕು ಸಕಾರಾತ್ಮಕ ದರ ಕೂಡ ಕ್ರಮೇಣ ಇಳಿಕೆಯಾಗುತ್ತಿದೆ. ಇದೀಗ ಎಲ್ಲ ಸರ್ಕಾರಗಳೂ ಮೂರನೇ ಅಲೆಯತ್ತ ಗಮನ ಕೇಂದ್ರೀಕರಿಸಬೇಕು.

English summary
Amid concerns over a probable third wave of the Coronavirus pandemic, the Centre on Saturday said children are not immune from the infection, but the impact is minimal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X