ಛತ್ತೀಸ್ ಗಢ: ಎರಡನೆಯ ಹಂತದಲ್ಲಿ ಸುಮಾರು ಶೇ 72ರಷ್ಟು ಮತದಾನ
ರಾಯಪುರ, ನವೆಂಬರ್ 20: ಛತ್ತೀಸ್ ಗಢ ವಿಧಾನಸಭೆಗೆ ಮಂಗಳವಾರ ನಡೆದ ಎರಡನೆಯ ಮತ್ತು ಕೊನೆಯ ಹಂತದ ಮತದಾನದಲ್ಲಿ ಸುಮಾರು ಶೇ 72ರಷ್ಟು ಮಂದಿ ಮತ ಚಲಾಯಿಸಿದ್ದಾರೆ.
2013 ಚುನಾವಣೆಯಲ್ಲಿ ಶೇ 77.8ರಷ್ಟು ಮತದಾನ ನಡೆದಿತ್ತು. ಅಂತಿಮ ಮಾಹಿತಿ ಲಭ್ಯವಾದ ಬಳಿಕ ಇಂದು ನಡೆದಿರುವ ಮತದಾನದ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮತದಾನ ಪ್ರಕ್ರಿಯೆ ಸರಾಗವಾಗಿ ನಡೆಯಲಿ ಎಂಬ ಉದ್ದೇಶದಿಂದ ಒಂದು ಲಕ್ಷಕ್ಕೂ ಹೆಚ್ಚಿನ ಪೊಲೀಸರು, ಸೈನಿಕರನ್ನು, ಹೆಲಿಕಾಪ್ಟರ್, ಡ್ರೋನ್‌ಗಳನ್ನು ನಿಯೋಜಿಸಲಾಗಿತ್ತು.

ನಕ್ಸಲ್ ಪೀಡಿತ ಪ್ರದೇಶಗಳ 18 ಕ್ಷೇತ್ರಗಳಲ್ಲಿ ನ.12ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಶೇ 76.28ರಷ್ಟು ಮಂದಿ ಮತ ಚಲಾಯಿಸಿದ್ದರು.
ಎರಡನೆಯ ಹಂತದಲ್ಲಿ 19 ಜಿಲ್ಲೆಗಳಲ್ಲಿನ 72 ಸೀಟುಗಳಿಗಾಗಿ ಮತದಾನ ನಡೆದಿತ್ತು. 19,000 ಸಾವಿರ ಮತಗಟ್ಟೆಗಳಲ್ಲಿ 1.5 ಕೋಟಿ ಮಂದಿ ಅರ್ಹ ಮತದಾರರಿದ್ದರು.
ಸಂಜೆ ಐದು ಗಂಟೆಗೆ ಮತದಾನ ಕೊನೆಗೊಳ್ಳುತ್ತಿದ್ದರೂ, ಕೆಲವು ಮತಗಟ್ಟೆಗಳಲ್ಲಿ ಆ ವೇಳೆಗೇ ಸಾಕಷ್ಟು ಮಂದಿ ಸರದಿಯಲ್ಲಿ ನಿಂತಿದ್ದರು.
72 ಕ್ಷೇತ್ರಗಳಲ್ಲಿ 119 ಮಹಿಳೆಯರು ಸೇರಿದಂತೆ 1,079 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಕಳೆದ 15 ವರ್ಷಗಳಿಂದ ಬಿಜೆಪಿ ಇಲ್ಲಿ ಅಧಿಕಾರದಲ್ಲಿದೆ.












Click it and Unblock the Notifications