Chhattisgarh Election opinion poll 2023: ಛತ್ತೀಸ್‌ಗಢ ಚುನಾವಣೆಯ ನಿಖರ ಸಮೀಕ್ಷೆ- ಯಾರಿಗೆ ಜಯ? ಅಂಕಿಅಂಶ, ವಿವರ

ಛತ್ತೀಸ್‌ಗಢ ವಿಧಾನಸಭೆಗೆ ನವೆಂಬರ್ 7 ಮತ್ತು 17 ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಯ ಫಲಿತಾಂಶ ಡಿಸೆಂಬರ್ 3ರಂದು ಹೊರಬೀಳಲಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ತೀವ್ರ ಕುತೂಹಲ ಕೆರಳಿಸಿರುವ ಛತ್ತೀಸ್‌ಗಢ ಚುನಾವಣೆ ಸಮೀಕ್ಷೆಯನ್ನು 'ಗ್ರೌಂಡ್‌ ಜಿರೋ ರಿಸರ್ಚ್‌' ಸಂಸ್ಥೆ ಇಂದು ಪ್ರಕಟಿಸಿದೆ.

ಛತ್ತೀಸ್‌ಗಢದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಪೈಪೋಟಿ ಏರ್ಪಟ್ಟಿದೆ. 2018 ರಲ್ಲಿ ಛತ್ತೀಸ್‌ಗಢದ 90 ಕ್ಷೇತ್ರಗಳಲ್ಲಿ 68 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತ್ತು. ಶೇ 43.9ರಷ್ಟು ಮತ ಪ್ರಮಾಣ ಕಾಂಗ್ರೆಸ್‌ ಪಾಲಾಗಿತ್ತು. ಆದರೆ, ಬಿಜೆಪಿ ಕೇವಲ 15 ಸ್ಥಾನಗಳನ್ನು ಗೆದ್ದು ಶೇ 33.6ರಷ್ಟು ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು.

Chhattisgarh assembly Election opinion poll 2023: Who will win this time? Know Stats and details

ನವೆಂಬರ್‌ನಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, 'ಛತ್ತೀಸ್‌ಗಢದ ಜನರು ಈಗಾಗಲೇ ಬಿಜೆಪಿಯ 15 ವರ್ಷಗಳ ಆಡಳಿತವನ್ನು ನೋಡಿದ್ದಾರೆ. ಅದರಿಂದ ಬೇಸರಗೊಂಡು ಕಳೆದ ಬಾರಿ ಕಾಂಗ್ರೆಸ್‌ ಅನ್ನು ಆಯ್ಕೆ ಮಾಡಿದ್ದಾರೆ. ಈ ಭಾರಿಯೂ ಕಾಂಗ್ರೆಸ್‌ ಅನ್ನೇ ಆಯ್ಕೆ ಮಾಡಲಿದ್ದಾರೆ. ಜನರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾವು ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ' ಎಂದು ಹೇಳಿಕೊಂಡಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಬಿಡುಗಡೆ

ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 30 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಪ್ರಕಟಿಸಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಪಟಾನ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಅಲ್ಲಿ ಅವರು ತಮ್ಮ ಸೋದರಳಿಯ ಹಾಗೂ ಬಿಜೆಪಿ ದುರ್ಗ್ ಸಂಸದ ವಿಜಯ್ ಬಾಘೇಲ್ ವಿರುದ್ಧ ಸ್ಪರ್ಧಿಸಲಿದ್ದಾರೆ.

Chhattisgarh assembly Election opinion poll 2023: Who will win this time? Know Stats and details

29 ಒಬಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಿಜೆಪಿ

ಬಿಜೆಪಿ ಛತ್ತಿಸ್‌ಗಢದಲ್ಲಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ. ಅದರಲ್ಲಿ ಹಿಂದುಳಿದ ವರ್ಗದ (ಒಬಿಸಿ) ಸಮುದಾಯಗಳಿಂದ 29 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 2018 ರಲ್ಲಿ ಬಿಜೆಪಿ 28 ಒಬಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ 26 ಜನರಿಗೆ ಟಿಕೆಟ್ ನೀಡಿತ್ತು.

ಗ್ರೌಂಡ್‌ ಜಿರೋ ಸಮೀಕ್ಷೆ ಹೇಳುವುದೇನು?

ಕರ್ನಾಟಕ ವಿಧಾನಸಭೆ ಚುನಾವಣೆಯ ಸಮೀಕ್ಷೆಯನ್ನು ಹೆಚ್ಚುಕಮ್ಮಿ ನಿಖರವಾಗಿ ಹೇಳಿದ್ದ ಗ್ರೌಂಡ್‌ ಜಿರೋ ಸಮೀಕ್ಷೆಯು ಛತ್ತೀಸ್‌ಗಢ ಸಮೀಕ್ಷೆಯನ್ನು ಪ್ರಕಟಿಸಿದೆ.

ಛತ್ತೀಸ್‌ಗಢದಲ್ಲಿ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 15 ರ ವರೆಗೆ ಗ್ರೌಂಡ್‌ ಜಿರೋ ರಿಸರ್ಚ್‌ ಸಮೀಕ್ಷೆಯನ್ನು ನಡೆಸಿದೆ. 60 ಕ್ಷೇತ್ರಗಳಲ್ಲಿ ಇದು ಸಮೀಕ್ಷೆ ನಡೆಸಿದೆ. ಸಮೀಕ್ಷೆಯು 6,000 ಮಾದರಿಯ ಗಾತ್ರವನ್ನು ಹೊಂದಿದೆ. ಎಲ್ಲಾ ಜಾತಿಗಳು, ಸಮೂಹಗಳು ಮತ್ತು ಸಮಸ್ಯೆಗಳನ್ನು ಮುಖಾಮುಖಿ ಸಂದರ್ಶನಗಳ ಮೂಲಕ ಸಮೀಕ್ಷೆ ಮಾಡಲಾಗಿದೆ ಎಂದು ಗ್ರೌಂಡ್‌ ಜಿರೋ ರಿಸರ್ಚ್‌ ತಿಳಿಸಿದೆ.

ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಪಕ್ಷವು 54 ರಿಂದ 58 ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿಗೆ 33 ರಿಂದ 37 ಸ್ಥಾನಗಳು ಬರಲಿವೆ. ಪಕ್ಷೇತರರು 3 ರಿಂದ 5 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಗ್ರೌಂಡ್‌ ಜಿರೋ ಸಮೀಕ್ಷೆ ಹೇಳಿದೆ.

ಶೇ 52 ರಷ್ಟು ಮಂದಿ ಭೂಗೇಶ್‌ ಬಗೇಲ್‌ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಹೇಳಿದ್ದಾರೆ. ಶೇ 21 ರಷ್ಟು ಜನರು ಬಿಜೆಪಿಯ ರಮನ್‌ಸಿಂಗ್ ಅವರು ಮುಖ್ಯಮಂತ್ರಿಯಾಗಬೇಕು ಎಂದು ಬಯಸಿದ್ದಾರೆ. ಶೇ 14 ರಷ್ಟು ಮಂದಿ ಟಿಎಸ್‌ ಸಿಂಗ್‌ಡಿಯೊ ಅವರು ಸಿಎಂ ಆಗಬೇಕು ಎಂದು ಇಚ್ಛಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಶೇ 45 ರಿಂದ 47 ರಷ್ಟು ಜನರು ಕಾಂಗ್ರೆಸ್‌ ಪಕ್ಷಕ್ಕೆ ಮತ ಚಲಾಯಿಸಬಹುದು. ಶೇ 39 ರಿಂದ 41 ರಷ್ಟು ಮಂದಿ ಬಿಜೆಪಿಗೆ ಮತ ನೀಡಬಹುದು ಎಂದು ಸಮೀಕ್ಷೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+