ಛತ್ತೀಸಗಡ: ಪೊಲೀಸ್ ಎನ್‌ಕೌಂಟರ್‌ಗೆ 14 ನಕ್ಸಲರು ಬಲಿ

ಸುಕ್ಮಾ, ಆಗಸ್ಟ್ 6: ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ಸೋಮವಾರ ಭರ್ಜರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕನಿಷ್ಠ 14 ನಕ್ಸಲರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.

ಕೊಂಟಾ ಮತ್ತು ಕೊಲಪಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಎನ್‌ಕೌಂಟರ್ ನಡೆದಿದ್ದು, ನಕ್ಸಲರಿಂದ 16 ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸೋಮವಾರ ಬೆಳಿಗ್ಗೆ ಪೊಲೀಸರು ಗಸ್ತುಪಡೆ ಪತ್ತೆ ಕಾರ್ಯಾಚರಣೆ ನಡೆಸುವ ವೇಳೆ ಈ ಗುಂಡಿನ ಚಕಮಕಿ ನಡೆದಿದೆ ಎಂದು ಸುಕ್ಮಾದ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಮೀನಾ ತಿಳಿಸಿದ್ದಾರೆ.

chhattisgarh: 14 naxals killed in an encounter

ಎನ್‌ಕೌಂಟರ್ ನಡೆದ ಪ್ರದೇಶದ ಸುತ್ತಮುತ್ತ ಇನ್ನೂ ನಕ್ಸಲರು ಇರಬಹುದು ಎಂಬ ಅನುಮಾನದ ಮೇರೆಗೆ ವ್ಯಾಪಕ ಹುಡುಕಾಟ ನಡೆಸಲಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ತಮ್ಮ 247 ಸದಸ್ಯರನ್ನು ಕಳೆದುಕೊಂಡಿರುವುದಾಗಿ ಮಾವೋವಾದಿಗಳು ಇತ್ತೀಚೆಗೆ ಬಿಡುಗಡೆ ಮಾಡಿರುವ ಕರಪತ್ರದಲ್ಲಿ ತಿಳಿಸಿದ್ದರು ಎಂದು ಛತ್ತೀಸಗಡ ಪೊಲೀಸರು ಹೇಳಿದ್ದಾರೆ.

ಆದರೆ, 2016ರ ಆಗಸ್ಟ್‌ನಿಂದ 2018ರ ಜುಲೈವರೆಗೆ ನಕ್ಸಲರೊಂದಿಗೆ ನಡೆದ 500ಕ್ಕೂ ಹೆಚ್ಚು ಎನ್‌ಕೌಂಟರ್‌ಗಳಲ್ಲಿ 208 ನಕ್ಸಲರ ದೇಹಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ ಎಂದು ನಕ್ಸಲ್ ನಿಗ್ರಹ ಕಾರ್ಯಾಚರಣೆಯ ವಿಶೇಷ ಮಹಾನಿರ್ದೇಶಕ ಡಿ.ಎಂ. ಅವಾಸ್ತಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+