ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಕ್ರಿಕೆಟಿಗ ಅಜರುದ್ದೀನ್ ವಿರುದ್ಧ ವಂಚನೆ ದೂರು

|
Google Oneindia Kannada News

ಔರಂಗಾಬಾದ್, ಜನವರಿ 23: ತಮಗೆ 21 ಲಕ್ಷ ರೂ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಟ್ರಾವೆಲ್ ಏಜೆಂಟ್ ಒಬ್ಬರು ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಮಹಮ್ಮದ್ ಅಜರುದ್ದೀನ್ ಮತ್ತು ಇನ್ನಿಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.

ಆದರೆ ಈ ಆರೋಪ ಆಧಾರರಹಿತವಾಗಿದ್ದು, ದೂರುದಾರನ ವಿರುದ್ಧ 100 ಕೋಟಿ ರೂ ಮಾನಹಾನಿ ಪ್ರಕರಣ ದಾಖಲಿಸುವುದಾಗಿ ಅಜರುದ್ದೀನ್ ಹೇಳಿದ್ದಾರೆ.

ವಾಹನಗಳಿಗೆ ವಿಮೆ ಮಾಡಿಸುತ್ತೇನೆಂದ ಈತ ಮಾಡಿದ್ದೇ ಬೇರೆ ಕೆಲಸವಾಹನಗಳಿಗೆ ವಿಮೆ ಮಾಡಿಸುತ್ತೇನೆಂದ ಈತ ಮಾಡಿದ್ದೇ ಬೇರೆ ಕೆಲಸ

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಡ್ಯಾನಿಶ್ ಟೂರ್ಸ್ ಆಂಡ್ ಟ್ರಾವೆಲ್ಸ್ ಏಜೆನ್ಸಿ ಮಾಲೀಕ ಮೊಹಮ್ಮದ್ ಶಹಾಬ್, ಅಜರುದ್ದೀನ್ ಮತ್ತು ಇತರರಿಗಾಗಿ ಕಳೆದ ವರ್ಷದ ನವೆಂಬರ್‌ನಲ್ಲಿ ಸುಮಾರು 20.96 ಲಕ್ಷ ವೆಚ್ಚದಲ್ಲಿ ವಿವಿಧ ಅಂತಾರಾಷ್ಟ್ರೀಯ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿದ್ದೆ. ಮಾಜಿ ಕ್ರಿಕೆಟಿಗ ಅಜರುದ್ದೀನ್ ಅವರ ಆಪ್ತ ಸಹಾಯಕ ಮುಜೀಬ್ ಖಾನ್ ಮನವಿಯಂತೆ ಟಿಕೆಟ್ ಬುಕ್ ಮಾಡಿದ್ದೆ ಎಂದು ತಿಳಿಸಿದ್ದಾರೆ.

 Cheating Case Against Former Cricketer Azharuddin By Travel Agent

ಈ ಟಿಕೆಟ್ ಹಣವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡುವುದಾಗಿ ಅಜರುದ್ದೀನ್ ಪದೇ ಪದೇ ಹೇಳುತ್ತಿದ್ದರೂ ಇದುವರೆಗೂ ಯಾವುದೇ ಹಣ ಬಂದಿಲ್ಲ ಎಂದು ಶಹಾಬ್ ಆರೋಪಿಸಿದ್ದಾರೆ.

ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಕೊಡಿಸುವ ಸೋಗಿನಲ್ಲಿ 20 ಕೋಟಿ ವಂಚನೆಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಕೊಡಿಸುವ ಸೋಗಿನಲ್ಲಿ 20 ಕೋಟಿ ವಂಚನೆ

ಹಣ ಪಾವತಿಗಾಗಿ ಕೇಳಿದಾಗ ಮುಜೀಬ್ ಖಾನ್ ಸಹವರ್ತಿ ಸುದೇಶ್ ಅವಕ್ಕಲ್ ಎಂಬಾತ ತಮಗೆ 10.6 ಲಕ್ಷ ರೂ. ವರ್ಗಾವಣೆ ಮಾಡಿರುವುದಾಗಿ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ. ಆದರೆ ತಮಗೆ ಯಾವುದೇ ಹಣ ಬಂದಿಲ್ಲ. ನವೆಂಬರ್ 24ರಂದು ಅವಕ್ಕಲ್ ಮತ್ತು ನ.29ರಂದು ಮುಜೀಬ್ ಖಾನ್, ಹಣ ಪಾವತಿಯ ಚೆಕ್ ಚಿತ್ರವನ್ನು ವಾಟ್ಸಾಪ್‌ನಲ್ಲಿ ಕಳುಹಿಸಿದ್ದರು. ಆದರೆ ಅಂತಹ ಯಾವುದೇ ಚೆಕ್ ತಮಗೆ ಬಂದಿಲ್ಲ ಎಂದು ಶಹಾಬ್ ದೂರಿನಲ್ಲಿ ಹೇಳಿದ್ದಾರೆ.

ಡಾಟಾ ಎಂಟ್ರಿ ಆಪರೇಟರ್ ಕೈಚಳಕ; ಅರ್ಧ ಎಕರೆಗೆ 10 ಸಾವಿರ ಪರಿಹಾರ, ನಾಲ್ಕು ಎಕರೆಗೆ 7 ಸಾವಿರಡಾಟಾ ಎಂಟ್ರಿ ಆಪರೇಟರ್ ಕೈಚಳಕ; ಅರ್ಧ ಎಕರೆಗೆ 10 ಸಾವಿರ ಪರಿಹಾರ, ನಾಲ್ಕು ಎಕರೆಗೆ 7 ಸಾವಿರ

ಮೊಹಮ್ಮದ್ ಅಜರುದ್ದೀನ್, ಮುಜೀಬ್ ಖಾನ್ ಮತ್ತು ಸುದೇಶ್ ಅವಕ್ಕಲ್ ವಿರುದ್ಧ ಶಹಾಬ್ ಅವರು ಬುಧವಾರ ಔರಂಗಾಬಾದ್ ಸಿಟಿ ಚೌಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿವ ವಿಡಿಯೋ ಹಂಚಿಕೊಂಡಿರುವ ಅಜರುದ್ದೀನ್, 'ಈ ದೂರಿನಲ್ಲಿ ಯಾವುದೇ ಸತ್ಯವಿಲ್ಲ. ಪ್ರಚಾರ ಪಡೆದುಕೊಳ್ಳುವ ಸಲುವಾಗಿ ಈ ರೀತಿ ಮಾಡಲಾಗಿದೆ. ಈ ದೂರಿನಲ್ಲಿ ಮಾಡಲಾಗಿರುವ ಆರೋಪಗಳು ಆಧಾರರಹಿತ. ದೂರುದಾರನ ವಿರುದ್ಧ ನಾನು 100 ಕೋಟಿ ರೂ ಮಾನಹಾನಿ ಪ್ರಕರಣ ದಾಖಲಿಸಲು ಕಾನೂನು ಸಲಹೆ ಪಡೆಯಲಿದ್ದೇನೆ' ಎಂದು ತಿಳಿಸಿದ್ದಾರೆ.

English summary
FIR has been registered against former Indian cricketer Mohammad Azharuddin and two others for cheating Rs 21 lakh by a travel agent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X