• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಭಕ್ಕೆ ಚಿಮ್ಮದ 'ಬಾಹುಬಲಿ': ಚಂದ್ರಯಾನ-2 ಗೆ ತಾಂತ್ರಿಕ ಅಡಚಣೆ

|

ಶ್ರೀಹರಿಕೋಟ, ಜುಲೈ 15: ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಗೆ ಕೊನೆಯ ಗಳಿಗೆಯಲ್ಲಿ ತಾಂತ್ರಿಕ ಅಡಚಣೆ ಉಂಟಾಗಿದ್ದು, ಉಡಾವಣೆಯನ್ನು ರದ್ದು ಮಾಡಲಾಗಿದೆ.

ಉಡಾವಣೆಗೆ ಇನ್ನು ಒಂದು ಗಂಟೆ ಬಾಕಿ ಇದ್ದಾಗ ತಾಂತ್ರಿಕ ದೋಷವೊಂದು ಇಸ್ರೋದ ಗಮನಕ್ಕೆ ಬಂದಿದೆ, ಹಾಗಾಗಿ ಮುನ್ನೆಚ್ಚರಿಕ ಕ್ರಮವಾಗಿ ಉಡಾವಣೆ ರದ್ದು ಮಾಡಲಾಗಿದೆ. ಚಂದ್ರಯಾನ-2 ನ ಮುಂದಿನ ದಿನಾಂಕ ಇನ್ನೂ ಪ್ರಕಟವಾಗಿಲ್ಲ.

ತಾಂತ್ರಿಕ ದೋಷದಿಂದ ಚಂದ್ರಯಾನ-2 ರಾಕೆಟ್ ಉಡಾವಣೆ ರದ್ದು

ಉಡಾವಣೆಗೆ ಇನ್ನು 56 ನಿಮಿಷ ಬಾಕಿ ಇದ್ದಾಗ ತಾಂತ್ರಿಕ ದೋಷವೊಂದು ಉಡಾವಣೆ ವಾಹನ (ರಾಕೆಟ್) ನಲ್ಲಿ ಕಂಡು ಬಂದ ಕಾರಣ ಉಡಾವಣೆಯನ್ನು ರದ್ದು ಮಾಡಲಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.

ಚಂದ್ರಯಾನ -2 ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಈ ಉಡಾವಣೆಯ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಇಸ್ರೋ ಯೋಜನೆ ರೂಪಿಸಿತ್ತು. ಉಡಾವಣೆ ಯಶಸ್ವಿ ಆಗಿದ್ದಿದ್ದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಪ್ರಥಮ ದೇಶ ನಮ್ಮದಾಗುತ್ತಿತ್ತು.

English summary
ISRO's project Chandrayan - 2 has been called off due to technical snag. ISRO tweeted that Chandrayan-2 called of for today, new launch dates will be announced shortly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X