Chandrayaan-3: ಐಸಾ.. ಐಸಾ.. ಐಸಾ.. ಗೆದ್ದೇ ಬಿಡ್ತು ಇಸ್ರೋ ಐಸಾ!

ಆಧುನಿಕ ಜಗತ್ತಿನಲ್ಲಿ ಭಾರತವೇ ಬಾಹ್ಯಾಕಾಶ ಜಗತ್ತಿನ ಬಾಸ್. ಈ ಮಾತನ್ನು 'ಇಸ್ರೋ' ಇಂದು ಮತ್ತೆ ಪ್ರೂವ್ ಮಾಡಿದೆ. 'ಚಂದ್ರಯಾನ-3' ನೌಕೆ ಚಂದ್ರನ 5ನೇ ಹಾಗೂ ಅಂತಿಮ ಕಕ್ಷೆಯನ್ನ ಯಶಸ್ವಿಯಾಗಿ ಪ್ರವೇಶಿಸಿದೆ. ಇಸ್ರೋ ವಿಜ್ಞಾನಿಗಳು ಮೊನ್ನೆ ಒಂದು ಬಾರಿ ಇದೇ ರೀತಿ ಚಂದ್ರನ ಕಕ್ಷೆಗೆ ನೌಕೆಯನ್ನ ಮತ್ತಷ್ಟು ಹತ್ತಿರ ಮಾಡಿದ್ದರು. ಈಗ ಚಂದ್ರಯಾನ-3 ನೌಕೆ ಬಹುತೇಕ ಚಂದ್ರನ ಮೇಲ್ಮೈ ತಲುಪಿದೆ.

ಇಂದು ಬೆಳಗ್ಗೆ 8 ಗಂಟೆಗೆ ಶುರುವಾದ ಕಕ್ಷೆ ಬದಲಾಯಿಸುವ ಕಾರ್ಯ ಯಶಸ್ವಿಯಾಗಿದೆ. ಈ ಮಾಹಿತಿಯನ್ನು ಖುದ್ದು ಇಸ್ರೋ ಹಂಚಿಕೊಂಡಿದೆ. ಹಾಗೇ ಈಗ ಚಂದ್ರಯಾನ ನೌಕೆ ಎಲ್ಲಿದೆ ಎಂಬುದನ್ನೂ ತಿಳಿಸಿದೆ. ಚಂದ್ರನ ಕಕ್ಷೆಗೆ ಅಂತಿಮ ಪರಿಚಲನೆ ಪೂರ್ಣಗೊಂಡಿದ್ದು, ಈಗ 'ಚಂದ್ರಯಾನ-3' ನೌಕೆ 153 km x 163 km ಕಕ್ಷೆಯಲ್ಲಿದೆ. ಇಷ್ಟೆಲ್ಲಾ ಮುಗಿದಿರುವ ಹಿನ್ನೆಲೆ ಇದೀಗ ಲ್ಯಾಂಡರ್ ಮಾಡ್ಯೂಲ್‌ನಿಂದ ಪ್ರೊಪಲ್ಷನ್ ಮಾಡ್ಯೂಲ್ ಅಂದ್ರೆ ಉಡ್ಡಯನ ವಾಹಕ ಪ್ರತ್ಯೇಕಿಸುವ ಸಮಯ ಬಂದೇಬಿಟ್ಟಿದೆ. ಆಗಸ್ಟ್ 17ರ ಮುಹೂರ್ತ ಫಿಕ್ಸ್ ಮಾಡಿರುವ ಇಸ್ರೋ, ಮತ್ತೊಂದು ಮೈಲಿಗಲ್ಲು ತಲುಪಲಿದೆ.

Chandrayaan-3 successfully reached Moons final orbit

ಚಂದ್ರನ ಮೇಲೆ ಭಾರತದ ಕೀರ್ತಿ ಪತಾಕೆ!

ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಉಡ್ಡಯನ ಕೇಂದ್ರದಿಂದ 'ಚಂದ್ರಯಾನ-3' ಲಾಂಚ್ ಆಗಿತ್ತು. ಬಳಿಕ ಭೂ ಕಕ್ಷೆಯಿಂದ ಒಂದೊಂದೇ ಹಂತದಲ್ಲಿ ಚಂದ್ರಯಾನ-3 ನೌಕೆ ತನ್ನ ಗುರಿ ಕಡೆಗೆ ಪ್ರಯಾಣ ಬೆಳೆಸಿತ್ತು. ಈಗ ಚಂದ್ರನ ಸಮೀಪ ಇಸ್ರೋ ನೌಕೆ ಸಾಗುತ್ತಿದ್ದಂತೆ ಕಕ್ಷೆ ಬದಲಿಸುವ ಕಾರ್ಯ ಸಕ್ಸಸ್ ಆಗಿದೆ. ಆಗಸ್ಟ್ 5ರಂದು ಚಂದ್ರನ ಕಕ್ಷೆಯನ್ನು ಭಾರತದ ನೌಕೆ ಪ್ರವೇಶಿಸಿತ್ತು. ಅದಾದ ಬಳಿಕ ಸತತ 3 ಬಾರಿ ಕಕ್ಷೆ ಪರಿಚಲನೆ ಮೂಲಕ ಅಂದರೆ ಆಗಸ್ಟ್ 6, 9 ಸೇರಿ 14ರಂದು ಚಂದ್ರನ ಮೇಲ್ಮೈ ಬಳಿಗೆ ತಲುಪಲಾಗಿತ್ತು. ಇದೀಗ ಅಂತಿಮ ಕಕ್ಷೆಗೆ ಎಂಟ್ರಿ ಕೊಟ್ಟ ಇಸ್ರೋ ನೌಕೆ, ಚಂದ್ರನ ಮೇಲೆ ರೋವರ್ ಇಳಿಸಲು ಸಿದ್ಧತೆ ನಡೆಸಿದೆ.

ಮಹತ್ವದ ಮಿಷನ್ ಕೊನೆಯ ಹಂತಕ್ಕೆ

ಇದೀಗ ಶತಕೋಟಿ ಭಾರತೀಯರ ಕನಸು ನನಸಾಗುವ ಸಮಯ ಬಂದುಬಿಟ್ಟಿದೆ. ಈ ಮೂಲಕ ಜಗತ್ತು ಒಟ್ಟಿಗೆ ಎರಡೆರಡು ರೋವರ್ ಚಂದ್ರನ ಮೈಮೇಲೆ ಇಳಿಯುವುದನ್ನ ನೋಡಬಹುದು. ಅತ್ತ ರಷ್ಯಾ ಕೂಡ ತನ್ನ ನೌಕೆಯನ್ನ ಚಂದ್ರನ ಮೇಲೆ ಇಳಿಸಲಿದೆ, ಇತ್ತ ಭಾರತದ ನೌಕೆ ಕೂಡ ಚಂದ್ರನ ಮೇಲೆ ಭರ್ಜರಿ ಎಂಟ್ರಿ ಕೊಡಲಿದೆ. ಹೀಗೆ ಆಗಸ್ಟ್ 23ರಂದು ಶತಕೋಟಿ ಭಾರತೀಯರು ಕಾಯುತ್ತಿದ್ದ ಆ ಕ್ಷಣ ಬಂದೇ ಬಿಡುತ್ತದೆ. ಎಲ್ಲವೂ ಇಸ್ರೋ ಅಂದುಕೊಂಡಂತೆ ನಡೆಯುತ್ತಿದೆ, ಭಾರತದ ಮಹತ್ವದ ಮಿಷನ್ ಇನ್ನೇನು ತನ್ನ ಗುರಿ ತಲುಪಲು ಕೊನೇ ಹಂತಕ್ಕೆ ಬಂದಿದೆ.

Chandrayaan-3 successfully reached Moons final orbit

3900 ಕೆಜೆ ತೂಕದ ಬಾಹ್ಯಾಕಾಶ ನೌಕೆ

ಅಷ್ಟಕ್ಕೂ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಅತಿ ಕಡಿಮೆ ವೆಚ್ಚದಲ್ಲಿ ಭಾರತದ ಇಸ್ರೋ 'ಚಂದ್ರಯಾನ-3' ಯೋಜನೆ ಕೈಗೊಂಡಿದೆ. ಚಂದ್ರಯಾನ-3 ಮಿಷನ್‌ನ ಒಟ್ಟು ವೆಚ್ಚ 615 ಕೋಟಿ ರೂಪಾಯಿ. ಇದು ಚಂದ್ರಯಾನ-2ರ ವೆಚ್ಚಕ್ಕಿಂತಲು ಕಡಿಮೆ ಎನ್ನಬಹುದು. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ & ರೋವರ್‌ನ್ನು ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿಯ ಅಂತಿಮ ಘಟ್ಟ ತಲುಪಿದೆ.

ಒಟ್ನಲ್ಲಿ ಚಂದ್ರನ ಮೇಲೆ ನೀರು ಸೇರಿದಂತೆ ಹಲವು ರೀತಿ ಅಧ್ಯಯನ ನಡೆಸಲು ಇಸ್ರೋದ ವಿಜ್ಞಾನಿಗಳು ಸಿದ್ಧತೆ ನಡೆಸಿದ್ದಾರೆ. ರೋವರ್ ಚಂದ್ರನ ಮೇಲೆ ಲ್ಯಾಂಡ್ ಆದ ನಂತರವೇ ಮುಂದಿನ ಹಂತ ಶುರುವಾಗಲಿದ್ದು, ಅಲ್ಲಿಂದ ಭಾರತ ಬಾಹ್ಯಾಕಾಶ ಲೋಕದಲ್ಲಿ ಹೊಸ ಇತಿಹಾಸ ಬರೆಯಲಿದೆ. ಹೀಗಾಗಿ ಇಡೀ ಜಗತ್ತು ಇಸ್ರೋ ಹಾಗೂ ಇಸ್ರೋ ರೋವರ್ ಮೇಲೆ ಕಣ್ಣಿಟ್ಟು ಕುಳಿತಿದೆ. ಈ ಎಲ್ಲಾ ನಿರೀಕ್ಷೆಗಳಿಗೆ ಆಗಸ್ಟ್ 23ರಂದು ಉತ್ತರ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+